ಹೆಸರಘಟ್ಟ: ಹೈನುಗಾರಿಕೆಯು ಗ್ರಾಮೀಣ ಪ್ರದೇಶದ ಆರ್ಥಿಕ ವ್ಯವಸ್ಥೆಯನ್ನು ಗಟ್ಟಿ ಮಾಡುವುದಲ್ಲದೆ, ಇದರಿಂದ ಮಹಿಳೆಯರು ಸಬಲರಾಗಬಹುದು ಎಂದು ಚಿಕ್ಕಬಳ್ಳಾಪುರ ಲೋಕಸಭಾ ಸದಸ್ಯ ಕೆ.ಸುಧಾಕರ್ ಹೇಳಿದರು.

ಹೊಸಹಳ್ಳಿಪಾಳ್ಯ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಮೊದಲನೇ ಮಹಡಿಯ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಇಂದು ಲಕ್ಷಾಂತರ ಕುಟುಂಬಗಳು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದು ಬದುಕನ್ನು ಕಟ್ಟಿಕೊಂಡಿವೆ. ಹೈನುಗಾರಿಕೆಯಿಂದ ಪ್ರತಿನಿತ್ಯ ಹಣದ ವಹಿವಾಟು ನಡೆಯುವುದರಿಂದ ಮಹಿಳೆಯರು ಸ್ವಾವಲಂಬಿಯಾಗಿ ಜೀವನ ನಡೆಸಬಹುದಾಗಿದೆ’ ಎಂದು ತಿಳಿಸಿದರು.

ಬಮೂಲ್ ನಿರ್ದೇಶಕ ಕಡತನಮಲೆ ಸತೀಶ್, ‘ಏಪ್ರಿಲ್ 1ರಂದು ಹಾಲು ಉತ್ಪಾದಕರ ಖಾತೆಗಳಿಗೆ ನೇರವಾಗಿ ಲೀಟರ್ಗೆ ಹೆಚ್ಚುವರಿ ₹1 ಅನ್ನು ವರ್ಗಾಯಿಸಲಾಗುತ್ತದೆ. ಲಾಭಾಂಶದ ಹಣದಲ್ಲಿ ಪ್ರತಿ ಸಹಕಾರ ಸಂಘಕ್ಕೆ ₹15 ಸಾವಿರ ಹಂಚಿಕೆ ಮಾಡಲಾಗುತ್ತದೆ’ ಎಂದರು.

ಗುಣಮಟ್ಟದ ಹಾಲು ಉತ್ಪಾದನೆಗಾಗಿ 15 ಅಡಿ ಎತ್ತರ ಬೆಳೆಯುವ ಜೋಳವನ್ನು ಪ್ರತಿ ಹಾಲು ಉತ್ಪಾದಕರಿಗೆ 5 ಕೆ.ಜಿ. ಉಚಿತವಾಗಿ ವಿತರಣೆ ಮಾಡಲಾಗುತ್ತದೆ. ರೈತರು ಹಾಲು ಉತ್ಪಾದನೆಯಲ್ಲಿ ತೊಡಗಲು ಪ್ರೋತ್ಸಾಹಿಸುವ ಸಲುವಾಗಿ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಚ್ ಸೀನಪ್ಪ, ಬಿಜೆಪಿ ಮುಖಂಡರಾದ ಹನುಮಯ್ಯ, ಬಾಬು, ಅಜಯ್, ವಿಜಯಕುಮಾರ್, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ನವಾನಂದ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.