ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಟ್ಟುನಿಂತ ವಾಹನ: ಡಂಪಿಂಗ್‌ ಯಾರ್ಡ್‌ಗೆ ಮನವಿ

Last Updated 2 ಫೆಬ್ರುವರಿ 2023, 19:31 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರಿ ಇಲಾಖೆಗಳ ಆವರಣ ಸೇರಿದಂತೆ ನಗರದ ಹಲವು ರಸ್ತೆಗಳಲ್ಲಿ ಕೆಟ್ಟುಹೋಗಿ ವಾಹನಗಳು ಹಲವು ತಿಂಗಳಿಂದ ನಿಂತಿರುತ್ತವೆ. ಇವುಗಳಿಗೆ ಡಂಪಿಂಗ್‌ ಯಾರ್ಡ್‌ಗೆ ಪ್ರದೇಶ ಹಾಗೂ ಹಣವನ್ನು ಬಜೆಟ್‌ನಲ್ಲಿ ಹಂಚಿಕೆ ಮಾಡಬೇಕು ಎಂದು ಮುಖ್ಯಮಂತ್ರಿಯವರಿಗೆ ‘ದ ವೀಲ್ಸ್‌’ ಸಂಸ್ಥೆ ಮನವಿ ಸಲ್ಲಿಸಿದೆ.

‘ನಗರದಲ್ಲಿ ಹಲವು ಕಡೆ ಪಾರ್ಕಿಂಗ್‌ ಸ್ಥಳಗಳಲ್ಲಿ ನೂರಾರು ವಾಹನಗಳು ಕೆಟ್ಟುನಿಂತಿರುತ್ತವೆ. ಇವುಗಳ ದುರಸ್ತಿಗೆ ಇಲಾಖೆಗಳು ಮುಂದಾಗದೆ, ಸ್ಕ್ರ್ಯಾಪ್‌ ಆಗಿವೆ. ಆದ್ದರಿಂದ ಇವುಗಳನ್ನು ಕಟ್ಟುನಿಟ್ಟಾಗಿ ಡಂಪಿಂಗ್‌ ಯಾರ್ಡ್‌ಗೆ ರವಾನೆ ಮಾಡಬೇಕು. ಈ ಹಿಂದೆ ಬಿಂಗಿಪುರದಲ್ಲಿ ಸ್ಕ್ರ್ಯಾಪ್‌ ಡಂಪಿಂಗ್‌ ಯಾರ್ಡ್‌ ಮಾಡಲಾಗಿತ್ತಾದರೂ, ಕೆಲವೇ ದಿನಗಳಲ್ಲಿ ಮುಚ್ಚಲಾಗಿದೆ’ ಎಂದು ಮನವಿಪತ್ರದಲ್ಲಿ ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟ್‌ ಎಸ್‌. ಅಮರೇಶ್‌ ಹೇಳಿದ್ದಾರೆ.

‘ನಗರದಲ್ಲಿ ಕೆಟ್ಟುನಿಂತ ವಾಹನಗಳನ್ನು ಬಿಬಿಎಂಪಿ, ಪೊಲೀಸ್‌ ಇಲಾಖೆ ಸೇರಿದಂತೆ ಯಾರೂ ತೆರವು ಮಾಡುತ್ತಿಲ್ಲ. ಬೀದಿಗಳಲ್ಲಿ ಹಲವು ವಾಹ‌ನಗಳನ್ನು ಕಾಣುತ್ತಿದ್ದೇವೆ. ಹೀಗಾಗಿ, ಈ ಬಾರಿಯ ಬಜೆಟ್‌ನಲ್ಲಿ ಅಗತ್ಯ ಅನುದಾನ ನೀಡಿ, ವಾಹನಗಳನ್ನು ಡಂಪಿಂಗ್‌ ಯಾರ್ಡ್‌ಗೆ ಸಾಗಿಸಲು ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT