ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೃತ್ಯಗಾರ್ತಿ ಕೊಲೆ ಪ್ರಕರಣ: ಮದುವೆಗೆ ಒಪ್ಪದಿದ್ದಕ್ಕೆ ನಾದಿನಿಯನ್ನೇ ಕೊಂದ ಭಾವ

Last Updated 31 ಮಾರ್ಚ್ 2021, 21:31 IST
ಅಕ್ಷರ ಗಾತ್ರ

ಬೆಂಗಳೂರು: ಆರ್.ಟಿ.ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಝರಾ (28) ಕೊಲೆ ಪ್ರಕರಣ ಸಂಬಂಧ, ಆರೋಪಿ ನವಾಜ್ ಪಾಷಾನನ್ನು ಪೊಲೀಸರು ಬಂಧಿಸಿದ್ದಾರೆ.

‘ಜಾಲಹಳ್ಳಿ ನಿವಾಸಿಯಾದ ಆರೋಪಿ ನವಾಜ್‌ ಪಾಷಾ, ಕೊಲೆಯಾದ ಝರಾ ಅವರ ಅಕ್ಕನ ಪತಿ. ಝರಾ ಅವರನ್ನು ಮದುವೆಯಾಗುವ ವಿಚಾರವಾಗಿ ಜಗಳ ತೆಗೆದು ಈ ಕೃತ್ಯ ಎಸಗಿರುವುದಾಗಿ ಆರೋಪಿ ಹೇಳಿಕೆ ನೀಡಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಮುಂಬೈನ ಝರಾ, ಅಕ್ಕ ಹಾಗೂ ತಮ್ಮನ ಜೊತೆ ಬೆಂಗಳೂರಿಗೆ ಬಂದಿದ್ದರು. ನಗರದಲ್ಲಿ ನೃತ್ಯಗಾರ್ತಿಯಾಗಿ ಕೆಲಸ ಮಾಡುತ್ತಿದ್ದರು. ಕುಟುಂಬಕ್ಕೆ ಪರಿಚಯವಾಗಿದ್ದ ಆರೋಪಿ ನವಾಜ್, ಅಕ್ಕನನ್ನು ಮದುವೆಯಾಗಿ ಪ್ರತ್ಯೇಕವಾಗಿ ವಾಸವಿದ್ದ. ತಮ್ಮನಿಗೆ ಬೇರೆಡೆ ಕೆಲಸ ಸಿಕ್ಕಿತ್ತು.’

‘ಆರ್‌.ಟಿ.ನಗರದ ಮನೆಯಲ್ಲಿ ಝರಾ ಮಾತ್ರ ವಾಸವಿದ್ದರು. ಮಾರ್ಚ್ 26ರಂದು ಮನೆಗೆ ಬಂದಿದ್ದ ಆರೋಪಿ, ಚಾಕುವಿನಿಂದ ಇರಿದು ಝರಾ ಅವರನ್ನು ಕೊಂದು ಪರಾರಿಯಾಗಿದ್ದ. ಪೊಲೀಸರು ಮೊದಲು ಬಾರಿ ಅನುಮಾನದ ಮೇರೆಗೆ ವಿಚಾರಣೆ ನಡೆಸಿದಾಗ, ತನಗೇನು ಗೊತ್ತಿಲ್ಲವೆಂದು ವಾದಿಸಿದ್ದ. ಮೊಬೈಲ್‌ ಕರೆಗಳ ವಿವರ ಸಂಗ್ರಹಿಸಿ ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡ’ ಎಂದೂ ಪೊಲೀಸ್ ಮೂಲಗಳು ಹೇಳಿವೆ.

ಮದುವೆಗೆ ಯತ್ನಿಸುತ್ತಿದ್ದ ಆರೋಪಿ: ‘ಅಕ್ಕನನ್ನು ಮದುವೆಯಾಗಿದ್ದ ಆತ, ಝರಾ ಅವರನ್ನೂ ಎರಡನೇ ಮದುವೆಯಾಗಲು ಯತ್ನಿಸುತ್ತಿದ್ದ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಝರಾ ಬೇರೊಬ್ಬ ಯುವಕನನ್ನು ಇಷ್ಟಪಡುತ್ತಿದ್ದರು. ಮದುವೆಯೂ ನಿಶ್ಚಯವಾಗಿತ್ತು. ಅದೇ ಕಾರಣಕ್ಕೆ ಝರಾ ಜೊತೆ ಜಗಳ ಮಾಡಿದ್ದ ಆರೋಪಿ, ತನ್ನನ್ನೇ ಮದುವೆಯಾಗುವಂತೆ ಪೀಡಿಸಿದ್ದ. ಅದೇ ವಿಚಾರವಾಗಿಯೇ ಝರಾ ಅವರನ್ನು ಕೊಂದಿದ್ದ’ ಎಂದು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT