ಬೆಂಗಳೂರು: ಪತ್ನಿ ಹಾಗೂ ಪುತ್ರನ ಭೇಟಿಗೆ ಅವಕಾಶ ಕಲ್ಪಿಸುವಂತೆ ಕೋರಿ ಪರಪ್ಪನ ಅಗ್ರಹಾರ ಜೈಲಿನ ಮುಖ್ಯ ಅಧೀಕ್ಷಕ ಅಂಶುಕುಮಾರ್ ಅವರಿಗೆ ನಟ ದರ್ಶನ್ ಮನವಿ ಮಾಡಿದ್ದಾರೆ. ಮತ್ತೊಂದೆಡೆ ಪತ್ನಿ ವಿಜಯಲಕ್ಷ್ಮಿ ಸಹ ಕಾರಾಗೃಹದ ಮುಖ್ಯಸ್ಥ ಅಲೋಕ್ ಕುಮಾರ್ ಅವರಿಗೆ ಪತ್ರ ಬರೆದು ಪತಿಯ ಭೇಟಿಗೆ ಅವಕಾಶ ನೀಡುವಂತೆ ಕೋರಿದ್ದಾರೆ.

ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಅವರು ನ್ಯಾಯಾಂಗ ಬಂಧನದಲ್ಲಿ ಇದ್ದಾರೆ.

‘ಮೇ 19ರಂದು ವಿವಾಹ ವಾರ್ಷಿಕೋತ್ಸವವಿದ್ದು, ಪತ್ನಿ ಮತ್ತು ಪುತ್ರನ ಭೇಟಿಗೆ ಅವಕಾಶ ನೀಡಬೇಕು. ಕುಟುಂಬಸ್ಥರು ಭೇಟಿಗೆ ಬಂದರೂ ಸರಿಯಾಗಿ ಮಾತನಾಡಲು ಆಗುತ್ತಿಲ್ಲ. ಗ್ರಿಲ್ ಅಡ್ಡ ಬರುತ್ತಿದೆ. ಆದ್ದರಿಂದ ಈ ಬಾರಿ ಕೊಠಡಿ ಒಳಗೆ ಮಾತುಕತೆ ಮತ್ತು ಭೇಟಿಗೆ ಅವಕಾಶ ಮಾಡಿಕೊಡಿ’ ಎಂದು ದರ್ಶನ್ ಮನವಿ ಮಾಡಿದ್ದಾರೆ.

ದರ್ಶನ್ ಅವರನ್ನು ಮದುವೆಯಾಗಿ ಮೇ 19ಕ್ಕೆ 23 ವರ್ಷ ತುಂಬಲಿದೆ. ಹೀಗಾಗಿ ಅವರನ್ನು ಹತ್ತಿರದಿಂದ ಭೇಟಿ ಮಾಡಲು ಅವಕಾಶ ನೀಡಬೇಕು. ಅವರು ಮಾನಸಿಕವಾಗಿ ಕುಗ್ಗಿದ್ದು, ಆತ್ಮಸ್ಥೈರ್ಯ ತುಂಬಬೇಕಿದೆ. ಅವರೊಂದಿಗೆ ಕೆಲ ಸಮಯ ಕಳೆಯಬೇಕಿದೆ. ಜೈಲಿನ ಕೈಪಿಡಿ ಅನ್ವಯ ಅವಕಾಶ ಮಾಡಿಕೊಡಿ ಎಂದು ವಿಜಯಲಕ್ಷ್ಮಿ ಅವರು ಅಲೋಕ್ ಕುಮಾರ್ಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ವಿಜಯಲಕ್ಷ್ಮಿ ಅವರು ಪತಿಯ ಭೇಟಿಗೆ ಅವಕಾಶ ನೀಡುವಂತೆ ಕೋರಿ ಪತ್ರ ಬರೆದಿದ್ದಾರೆ. ಈ ಮನವಿಯನ್ನು ಜೈಲಿನ ಮುಖ್ಯ ಅಧೀಕ್ಷಕ ಅಂಶುಕುಮಾರ್ಗೆ ಕಳುಹಿಸಲಾಗಿದೆ. ಅವರೇ ನಿರ್ಧಾರ ಮಾಡುತ್ತಾರೆ ಎಂದು ಅಲೋಕ್ ಕುಮಾರ್ ತಿಳಿಸಿದ್ದಾರೆ.

ಸಾಮಾನ್ಯ ಭೇಟಿ ವೇಳೆ ಕೈದಿಗಳ ಹಾಗೂ ಕುಟುಂಬದವರ ನಡುವೆ ಗಾಜಿನ ಗೋಡೆ ಇರುತ್ತದೆ. ಇಂಟರ್ಕಾಮ್ ಮೂಲಕ ಮಾತನಾಡಬೇಕು. ಆದರೆ, ವಿಶೇಷ ಸಂದರ್ಭದಲ್ಲಿ ಆ ಗೋಡೆ ಇಲ್ಲದೇ ಮುಖಾಮುಖಿಯಾಗಿ ಭೇಟಿ ಮಾಡಿಸುತ್ತೇವೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.