ಸೋಮವಾರ, ಅಕ್ಟೋಬರ್ 14, 2019
28 °C

ಮೂರು ದಿನದವರೆಗೆ ಸರ್ಕಾರಿ ರಜೆ | ಹಲವೆಡೆ ಶನಿವಾರವೇ ಆಯುಧ ಪೂಜೆ

Published:
Updated:
Prajavani

ಬೆಂಗಳೂರು: ಭಾನುವಾರದಿಂದ ಮೂರು ದಿನಗಳವರೆಗೆ ಸರ್ಕಾರಿ ರಜೆ ಇರುವುದರಿಂದ ನಗರದ ಹಲವು ಸರ್ಕಾರಿ ಹಾಗೂ ಕಚೇರಿಗಳಲ್ಲಿ ಶನಿವಾರವೇ ಆಯುಧ ಪೂಜೆ ನೆರವೇರಿಸಲಾಯಿತು. 

ವಿಧಾನಸೌಧ, ವಿಕಾಸಸೌಧದಲ್ಲಿ ಕಚೇರಿಗಳು ಹಾಗೂ ಎಂ.ಎಸ್. ಬಿಲ್ಡಿಂಗ್‌ ಸೇರಿದಂತೆ ವಿವಿಧ ಸರ್ಕಾರಿ ಕಚೇರಿಗಳನ್ನು ತಳಿರು–ತೋರಣಗಳಿಂದ ಸಿಂಗರಿಸಲಾಗಿತ್ತು. ಸರ್ಕಾರಿ ವಾಹನಗಳಿಗೆ, ಕಂಪ್ಯೂಟರ್‌ಗಳಿಗೆ ಸಿಬ್ಬಂದಿ ಪೂಜೆಯನ್ನು ನೆರವೇರಿಸಿದರು.

ಖಾಸಗಿ ಕಂಪನಿಗಳು ಕೂಡ ಸೋಮವಾರ ರಜೆ ಘೋಷಿಸಿರುವುದರಿಂದ ಎರಡು ದಿನ ಮುನ್ನವೇ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆಯುಧಗಳಿಗೆ ಪೂಜೆ ಸಲ್ಲಿಸಿ, ಸಿಬ್ಬಂದಿಗೆ ಸಿಹಿ ವಿತರಿಸಿ, ಶುಭ ಕೋರಿ ಸಿಬ್ಬಂದಿ ಹಬ್ಬ ಆಚರಿಸಿದರು.

Post Comments (+)