ಮಂಗಳವಾರ, ಮಾರ್ಚ್ 28, 2023
33 °C

ದಸರಾ ಹಬ್ಬಕ್ಕೆ 7 ವಿಶೇಷ ರೈಲು: ಇಲ್ಲಿದೆ ಮಾರ್ಗ, ಹೊರಡುವ ವೇಳೆ ಮತ್ತಿತರ ವಿವರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದಸರಾ ಹಬ್ಬಕ್ಕೆ ತೆರಳುವ ಪ್ರಯಾಣಿಕರ ಅನುಕೂಲಕ್ಕೆ ಏಳು ವಿಶೇಷ ರೈಲುಗಳ ಕಾರ್ಯಾಚರಣೆಗೆ ನೈರುತ್ಯ ರೈಲ್ವೆ ವ್ಯವಸ್ಥೆ ಮಾಡಿದೆ.

ಯಶವಂತಪುರ, ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ಮೈಸೂರು, ತಿರುನಲ್ವೇಲಿ, ಮಯಿಲಾದುತುರೈ, ತೂತ್ತುಕುಡಿ, ಮುರುಡೇಶ್ವರಕ್ಕೆ ವಿಶೇಷ ರೈಲುಗಳು ಶುಕ್ರವಾರದಿಂದ ಒಂದು ತಿಂಗಳ ತನಕ ಪ್ರಯಾಣಿಕರ ಒತ್ತಡಕ್ಕೆ ಅನುಗುಣವಾಗಿ ವಿವಿಧ ದಿನಾಂಕಗಳಂದು ಸಂಚರಿಸಲಿವೆ. ಆಸನಗಳನ್ನು ಕಾಯ್ದಿರಿಸಲು ಮತ್ತು ಕಾಯ್ದಿರಿಸದೆ ಪ್ರಯಾಣ ಮಾಡಲು ಅವಕಾಶ ಇದೆ.

ರೈಲುಗಳ ವಿವರ:

ಯಶವಂತಪುರ-ತಿರುನಲ್ವೇಲಿ(06565/06566)- ಅ. 4 ಮತ್ತು 11ರಂದು ಎರಡೂ ದಿನ ಮಧ್ಯಾಹ್ನ 12.45ಕ್ಕೆ ಯಶವಂತಪುರದಿಂದ ಹೊರಟು ಮರುದಿನ ಬೆಳಿಗ್ಗೆ 4.30ಕ್ಕೆ ತಿರುನಲ್ವೇಲಿ ತಲುಪಲಿದೆ. ಅ. 5 ಮತ್ತು 12ರಂದು ಬೆಳಿಗ್ಗೆ 10.40ಕ್ಕೆ ತಿರುನಲ್ವೇಲಿಯಿಂದ ಹೊರಟು, ಅದೇ ದಿನ ರಾತ್ರಿ 11.30ಕ್ಕೆ ಯಶವಂತಪುರಕ್ಕೆ ಬರಲಿದೆ.

ಮೈಸೂರು–ಮಯಿಲಾದುತುರೈ–ಮೈಸೂರು(06251/ 06252) ಫೆಸ್ಟಿವಲ್ ಸ್ಪೆಷಲ್ ಎಕ್ಸ್‌ಪ್ರೆಸ್‌ ರೈಲು ಸೆ.30 ಮತ್ತು ಅ.21ರಂದು ರಾತ್ರಿ 11.45ಕ್ಕೆ ಮೈಸೂರಿನಿಂದ ಹೊರಟು, ಮರುದಿನ ಮಧ್ಯಾಹ್ನ 3.30ಕ್ಕೆ ಮಯಿಲಾದುತುರೈ ತಲುಪಲಿದೆ. ಅ. 1 ಮತ್ತು 22ರಂದು ಸಂಜೆ 6.45ಕ್ಕೆ ಮಯಿಲಾದುತುರೈನಿಂದ ಹೊರಟು, ಮರುದಿನ ಮಧ್ಯಾಹ್ನ 12ಕ್ಕೆ ಮೈಸೂರು ತಲುಪಲಿದೆ. ಇದು ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದ ಮೂಲಕ ಹಾದು ಹೋಗಲಿದೆ.

ಮೈಸೂರು-ತೂತ್ತುಕುಡಿ (06253/ 06254) ರೈಲು ಶುಕ್ರವಾರ ಮಧ್ಯಾಹ್ನ 12ಕ್ಕೆ ಮೈಸೂರಿನಿಂದ ಹೊರಟು, ಮರುದಿನ ಬೆಳಿಗ್ಗೆ 5ಕ್ಕೆ ತೂತ್ತುಕುಡಿ ತಲುಪಲಿದೆ. ಅ. 1ರಂದು ಮಧ್ಯಾಹ್ನ 3ಕ್ಕೆ ತೂತ್ತುಕುಡಿಯಿಂದ ಹೊರಟು ಮರುದಿನ ಮಧ್ಯಾಹ್ನ 12.25ಕ್ಕೆ ಮೈಸೂರಿಗೆ ಬರಲಿದೆ.

ಯಶವಂತಪುರ- ಮುರುಡೇಶ್ವರ-ಯಶವಂತಪುರ(06563/ 06564) ರೈಲು ಅ. 1ರಂದು ರಾತ್ರಿ 11.55ಕ್ಕೆ ಯಶವಂತಪುರದಿಂದ ಹೊರಟು, ಮರುದಿನ ಮಧ್ಯಾಹ್ನ 12.55ಕ್ಕೆ ಮುರುಡೇಶ್ವರ ತಲುಪಲಿದೆ. ಇದೇ ರೈಲು ಅ. 2ರಂದು ಮಧ್ಯಾಹ್ನ 1.30ಕ್ಕೆ  ಮುರುಡೇಶ್ವರದಿಂದ ಹೊರಟು, ಮರುದಿನ ಬೆಳಿಗ್ಗೆ 4ಕ್ಕೆ ಯಶವಂತಪುರಕ್ಕೆ ಬರಲಿದೆ.

ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್- ಮೈಸೂರು ವಿಶೇಷ ರೈಲು(06259)- ಅ. 30ರಂದು (ಶುಕ್ರವಾರ) ಬೆಳಿಗ್ಗೆ 7.30ಕ್ಕೆ ಹೊರಟು ಬೆಳಿಗ್ಗೆ 10.30ಕ್ಕೆ ಮೈಸೂರು ತಲುಪಲಿದೆ.

ಮೈಸೂರು- ಯಶವಂತಪುರ- ಮೈಸೂರು ಕಾಯ್ದಿರಿಸದ ವಿಶೇಷ ರೈಲು(06275/ 06276)- ಅ. 30ರಂದು (ಶುಕ್ರವಾರ) ಬೆಳಿಗ್ಗೆ  9.30ಕ್ಕೆ ಮೈಸೂರಿನಿಂದ ಹೊರಟು, ಮಧ್ಯಾಹ್ನ 1.15ಕ್ಕೆ ಯಶವಂತಪುರಕ್ಕೆ ಬರಲಿದೆ. ಮಧ್ಯಾಹ್ನ 2ಕ್ಕೆ ಯಶವಂತಪುರದಿಂದ ಹೊರಟು, ಸಂಜೆ 5.30ಕ್ಕೆ ಮೈಸೂರು ತಲುಪಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು