ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದತ್ತಪೀಠ ವಿವಾದ: ಚರ್ಚೆಗೆ ಆಹ್ವಾನಿಸಲು ಬಿಎಸ್‌ವೈಗೆ ಸಿ.ಟಿ.ರವಿ ಮನವಿ

Last Updated 11 ನವೆಂಬರ್ 2019, 22:01 IST
ಅಕ್ಷರ ಗಾತ್ರ

ಬೆಂಗಳೂರು: ದತ್ತ ಪೀಠ ವಿವಾದವನ್ನು ಸೌಹಾರ್ದಯುತವಾಗಿ ಇತ್ಯರ್ಥಪಡಿಸುವ ಸಂಬಂಧ ದಾಖಲೆಗಳ ಬಗ್ಗೆ ಚರ್ಚಿಸಲು ಸಂಬಂಧಪಟ್ಟ ಎಲ್ಲರನ್ನೂ ಮಾತುಕತೆಗೆ ಆಹ್ವಾನಿಸಲು ಮುಖ್ಯಮಂತ್ರಿಗೆ ಮನವಿ ಮಾಡುವುದಾಗಿ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ತಿಳಿಸಿದರು.

ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರ ಭೇಟಿ ಬಳಿಕ ಅವರು ಈ ವಿಷಯ ಹೇಳಿದರು.

‘ದತ್ತಪೀಠ ವಿವಾದವನ್ನು ಬಗೆಹರಿಸುವುದು ಕಷ್ಟವಲ್ಲ. ಆಸ್ತಿ ವಿವಾದವಾದರೆ, ಪೊಲೀಸರು ದಾಖಲೆಗಳನ್ನು ಪರಿಶೀಲಿಸುತ್ತಾರೆ. ಸರ್ಕಾರಿ ದಾಖಲೆಗಳ ಪ್ರಕಾರ, ಬಾಬಾಬುಡನ್‌ ದರ್ಗಾ ನಾಗೇನಹಳ್ಳಿ ಸರ್ವೇ ಸಂಖ್ಯೆ 57 ರಲ್ಲಿದೆ. ದತ್ತಾತ್ರೇಯ ಪೀಠ ಇನಾಮ್‌ ದತ್ತಾತ್ರೇಯ ಪೀಠ ಗ್ರಾಮದ ಸರ್ವೇ ಸಂಖ್ಯೆ 198 ರಲ್ಲಿದೆ. ಇದು ನನ್ನ ದಾಖಲೆಗಳಲ್ಲ. ನೂರು ವರ್ಷಗಳ ದಾಖಲೆಯನ್ನು ಪರಿಶೀಲಿಸಿದರೂ ಈ ಮಾಹಿತಿ ಸಿಗುತ್ತದೆ’ ಎಂದು ರವಿ ತಿಳಿಸಿದರು.

ದಾಖಲೆಗಳ ಆಧಾರದಲ್ಲಿ ಪರಿಶೀಲಿಸಿದರೆ, ಸಮಸ್ಯೆಗೆ ಪರಿಹಾರ ಸುಲಭ. ಸತ್ಯ ಒಪ್ಪಿಕೊಳ್ಳುವ ಮನಸ್ಸಿರುವವರು ಒಪ್ಪಿಕೊಳ್ಳುತ್ತಾರೆ. ಇಲ್ಲವಾದರೆ ನ್ಯಾಯಾಲಯ ಅಥವಾ ಹೋರಾಟದ ಮೂಲಕ ಉತ್ತರ ಪಡೆಯಬೇಕಾಗುತ್ತದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT