ಐಜಿಐಸಿಎಚ್‌ನಲ್ಲಿ 100 ಹಾಸಿಗೆಗಳ ಐಸಿಯು

ಬೆಂಗಳೂರು: ಕಾಗ್ನಿಜೆಂಟ್ ಫೌಂಡೇಷನ್ ನೆರವಿನಿಂದ ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯಲ್ಲಿ (ಐಜಿಐಸಿಎಚ್) ಸ್ಥಾಪಿಸಿರುವ 100 ಹಾಸಿಗೆಗಳ ತೀವ್ರ ನಿಗಾ ಘಟಕವನ್ನು (ಐಸಿಯು) ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಮಂಗಳವಾರ ವರ್ಚುವಲ್ ವೇದಿಕೆಯಲ್ಲಿ ಉದ್ಘಾಟಿಸಿದರು.
‘ಮಕ್ಕಳಿಗಾಗಿಯೇ ₹ 1.32 ಕೋಟಿ ವೆಚ್ಚದಲ್ಲಿ ಐಸಿಯು ಘಟಕ ನಿರ್ಮಿಸಲಾಗಿದೆ. ಕಾಗ್ನಿಜೆಂಟ್ ಸಂಸ್ಥೆಯ ಈ ಕಾರ್ಯ ಇತರರಿಗೂ ಮಾದರಿಯಾಗುವಂತಹದ್ದು. ಕೊರೊನಾ ಸೋಂಕು ಕಾಣಿಸಿಕೊಂಡ ಮಕ್ಕಳು ಹಾಗೂ ಶಿಶುಗಳಿಗೆ ಇಲ್ಲಿ ಗುಣಮಟ್ಟದ ಚಿಕಿತ್ಸೆ ಲಭ್ಯವಾಗಲಿದೆ. ಮಕ್ಕಳಿಗೆ ಬೇಕಿರುವ ಪಿಪಿಇ ಕಿಟ್, ಆಮ್ಲಜನಕ ಸೌಲಭ್ಯದ ಹಾಸಿಗೆ, ವೆಂಟಿಲೇಟರ್, ಮಲ್ಟಿ ಪ್ಯಾರಾಮಾನಿಟರ್‌ಗಳೂ ಇಲ್ಲಿ ಇವೆ’ ಎಂದು ತಿಳಿಸಿದರು.
‘ಕೋವಿಡ್‌ಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಎಲ್ಲಾ ಬಗೆಯ ಕ್ರಮಗಳನ್ನೂ ಕೈಗೊಂಡಿದೆ. ಮೂರನೇ ಅಲೆ ಎದುರಿಸಲೂ ಸಕಲ ಸಿದ್ಧತೆ ಮಾಡಿಕೊಂಡಿದ್ದೇವೆ’ ಎಂದರು.
ಕಾಗ್ನಿಜೆಂಟ್ ಇಂಡಿಯಾ ಅಧ್ಯಕ್ಷ ರಾಜೇಶ್ ನಂಬಿಯಾರ್, ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ ನಿರ್ದೇಶಕ ಡಾ.ಕೆ.ಎಸ್.ಸಂಜಯ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.