ಗುರುವಾರ , ಅಕ್ಟೋಬರ್ 17, 2019
27 °C

ಮನೆ ವಸ್ತು ಸಾಗಿಸಲು ಡಿಸಿಪಿಯಿಂದ ಆಂಬುಲೆನ್ಸ್ ಬಳಕೆ?

Published:
Updated:

ಬೆಂಗಳೂರು: ಮನೆ ವಸ್ತುಗಳನ್ನು ಸರ್ಕಾರಿ ಬಂಗಲೆಗೆ ಸ್ಥಳಾಂತರಿಸಲು ಕೇಂದ್ರ ಅಪರಾಧ ವಿಭಾಗದ ಡಿಸಿಪಿ ಕುಲದೀಪ್ ಕುಮಾರ್ ಜೈನ್ ಅವರು ಆಂಬುಲೆನ್ಸ್ ಬಳಕೆ ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಇತ್ತೀಚೆಗಷ್ಟೇ ನಗರ ಕೇಂದ್ರ ಅಪರಾಧ ವಿಭಾಗಕ್ಕೆ ವರ್ಗಾವಣೆಯಾಗಿರುವ ಜೈನ್ ಅವರಿಗೆ ಶಿವಾಜಿನಗರದ ಮಸೀದಿ ಪಕ್ಕದ
ಸರ್ಕಾರಿ ಬಂಗಲೆ ನೀಡಲಾಗಿದೆ. ಹೀಗಾಗಿ, ಸರ್ಕಾರಿ ವಾಹನಗಳನ್ನು ಬಳಸಿ ಮನೆ ವಸ್ತುಗಳನ್ನು ಅವರು ಸ್ಥಳಾಂತರಿಸಿದ್ದಾರೆ.

ಆದರೆ, ಮನೆ ವಸ್ತುಗಳನ್ನು ಸ್ಥಳಾಂತರಿಸಲು ಆಂಬುಲೆನ್ಸ್ ಬಳಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಜೈನ್, ‘ಈ ಹಿಂದೆ, ನಾನು ಕೆಎಸ್‍ಆರ್‌ಪಿ ಡಿಸಿಪಿ ಆಗಿದ್ದೆ. ಕೆಎಸ್‍ಆರ್‌ಪಿ ಮೂವರು ಸಿಬ್ಬಂದಿ ಮನೆ ವಸ್ತುಗಳನ್ನು ಸ್ಥಳಾಂತರಿಸಲು ಸಹಾಯ ಮಾಡಲು ಬಂದಿದ್ದರು. ಅದೇ ವೇಳೆ ಆಂಬುಲೆನ್ಸ್ ಸಿಬ್ಬಂದಿ ಘಟನೆಯೊಂದರ ಸಂಬಂಧ ಸಹಿ ಪಡೆಯಲು ಮನೆ ಬಳಿ ಬಂದಿದ್ದರು’ ಎಂದು ಹೇಳಿಕೆ ನೀಡಿದ್ದಾರೆ. ಆದರೆ, ಜೈನ್‌ ಅವರ ಹೇಳಿಕೆ ಗೊಂದಲ ಉಂಟು ಮಾಡಿದೆ. ಆಂಬುಲೆನ್ಸ್ ಮತ್ತು ಕೆಎಸ್‍ಆರ್‌ಪಿ ವಾಹನ ಬಳಸಿರುವ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

Post Comments (+)