ಮಂಗಳವಾರ, ಆಗಸ್ಟ್ 16, 2022
29 °C

ಪದವಿ ಪ್ರದಾನ ಸಮಾರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಲಹಂಕ: ಇಲ್ಲಿನ ವಾಯುಪಡೆ ಕೇಂದ್ರದಲ್ಲಿ 202ನೇ ಪೈಲಟ್ ಕೋರ್ಸ್‌ ಹಾಗೂ 55ನೇ ಎ.ಎನ್-32 ಜಲಸಂಚಾರ ಪರಿವರ್ತನಾ ಕೋರ್ಸ್‌ ಪೂರ್ಣಗೊಳಿಸಿದ 24 ಅಧಿಕಾರಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

ಈ ವೇಳೆ ಮಾತನಾಡಿದ ವಾಯುಪಡೆಯ ಏರ್ ಕಮಾಂಡರ್ ರಾಹುತ್ ಶೀತಲ್, ‘ಯುವ ಪದವೀಧರ ಅಧಿಕಾರಿಗಳ ಹೆಗಲಿಗೆ ಶೀಘ್ರದಲ್ಲೇ ದೊಡ್ಡ ಜವಾಬ್ದಾರಿ ಬೀಳಲಿದೆ. ದೇಶದ ವಿವಿಧ ಭಾಗಗಳಲ್ಲಿ ಸಂಚರಿಸಿ ಕಾರ್ಯಾಚರಣೆ ನಡೆಸಬೇಕಾಗುತ್ತದೆ. ಈ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಬೇಕು’ ಎಂದು ತಿಳಿಸಿದರು.

ನಿಶ್ಚಿತ ವಿಂಗ್ ತರಬೇತಿ ಸಿಬ್ಬಂದಿ ಬಳಿ ಭಾರತೀಯ ವಾಯುಪಡೆಗೆ ಸೇರ್ಪಡೆಯಾಗಲು ಅಗತ್ಯ ತರಬೇತಿ ದೊರೆಯಲಿದ್ದು, ವಾಯುಪಡೆಯ ನೀತಿ-ನಿಯಮಗಳನ್ನು ಅನುಸರಿಸಬೇಕು. ಯುವಪದವೀಧರರು ಸಮಗ್ರತೆ, ಏಕತೆ ಮತ್ತು ಹೊಣೆಗಾರಿಕೆಗಾಗಿ ಯಾವುದೇ ಸವಾಲುಗಳಿಗೆ ಸಿದ್ಧರಾಗಿರಬೇಕು ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು