ಬುಧವಾರ, ಡಿಸೆಂಬರ್ 8, 2021
27 °C

ಸಾಲ ಮರುಪಾವತಿ ಅವಧಿ ವಿಸ್ತರಣೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಅತಿಸಣ್ಣ, ಸಣ್ಣ ಹಾಗೂ ಮಧ್ಯಮ ಪ್ರಮಾಣದ ಉದ್ಯಮಗಳ (ಎಂಎಸ್‌ಎಂಇ) ಸಾಲದ ಮೇಲಿನ ಕಂತುಗಳ ಪಾವತಿಗೆ 2021ರ ಮಾರ್ಚ್‌ 31ರವರೆಗೆ ವಿನಾಯಿತಿ ನೀಡಬೇಕು ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಕೆ.ಬಿ. ಅರಸಪ್ಪ ಒತ್ತಾಯಿಸಿದ್ದಾರೆ.‌

ಆರ್ಥಿಕ ಕುಸಿತದ ಕಾರಣ ಎಂಎಸ್‌ಎಂಇ ಸ್ಥಿತಿಯ ಬಗ್ಗೆ ‘ಕಾಸಿಯಾ’ ಕಳವಳ ವ್ಯಕ್ತಪಡಿಸಿದೆ. ‘ಪರಿಸ್ಥಿತಿ ಸುಧಾರಿಸದಿದ್ದರೆ ಎಂಎಸ್‌ಎಂಇ ವಲಯದ ಉದ್ಯಮಗಳು ಬಾಗಿಲು ಮುಚ್ಚಬೇಕಾಗಬಹುದು ಎಂಬ ಆತಂಕಹೆಚ್ಚಾಗಿದೆ. ಸದ್ಯಕ್ಕೆ ಆರ್ಥಿಕ ಪುನಶ್ಚೇತನದ ಯಾವುದೇ ಭರವಸೆ ಇಲ್ಲದಿರುವುದರಿಂದ, ಸಾಲ ಮರುಪಾವತಿಗೆ ಇದ್ದ ವಿನಾಯಿತಿ ಅವಧಿಯನ್ನು ವಿಸ್ತರಿಸಬೇಕು’ ಎಂದು ಆಗ್ರಹಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.