ಬೆಂಗಳೂರು: ಕನಿಷ್ಠ ವೇತನ ಪರಿಷ್ಕರಣೆಯ ಅಂತಿಮ ಅಧಿಸೂಚನೆ ಹೊರಡಿಸಬೇಕು. ತುಟ್ಟಿಭತ್ಯೆ ದರವನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಿ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ ಸೇರಿದಂತೆ ವಿವಿಧ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಕಾರ್ಮಿಕರು ಗುರುವಾರ ಪ್ರತಿಭಟನೆ ನಡೆಸಿದರು.

ಕನಿಷ್ಠ ವೇತನ ದಾನವಲ್ಲ. ಅದು ಕಾರ್ಮಿಕರ ಸಾಂವಿಧಾನಿಕ ಹಕ್ಕು. ಒಂದು ಕುಟುಂಬದ ಆಹಾರ, ವಸ್ತ್ರ, ವಸತಿ, ಶಿಕ್ಷಣ, ಆರೋಗ್ಯ ಸೇರಿದಂತೆ ಮೂಲಭೂತ ಅವಶ್ಯಗಳನ್ನು ಪೂರೈಸುವಷ್ಟು ವೇತನ ನೀಡುವುದು ಸರ್ಕಾರದ ಕರ್ತವ್ಯ. ಆದರೆ, ರಾಜ್ಯದಲ್ಲಿ 9 ವರ್ಷಗಳಿಂದ ಕನಿಷ್ಠ ವೇತನ ಪರಿಷ್ಕರಣೆ ಆಗಿಲ್ಲ. ಇದು ಕಾರ್ಮಿಕರ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಪ್ರತಿಭಟನಕಾರರು ಆರೋಪಿಸಿದರು.

ತುಟ್ಟಿಭತ್ಯೆ ಪ್ರಮಾಣವು ಗ್ರಾಹಕ ಬೆಲೆ ಸೂಚ್ಯಂಕದ ಪ್ರತಿ ಪಾಯಿಂಟ್ಗೆ ಕೇವಲ 4 ಪೈಸೆಯಾಗಿದ್ದು, ಇದು ಅಸಮರ್ಪಕವಾಗಿದೆ. ಹಣದುಬ್ಬರದ ಪರಿಣಾಮದಿಂದ ಕಾರ್ಮಿಕರ ನೈಜ ಆದಾಯ ಕುಸಿದಿರುವುದರಿಂದ ಪ್ರತಿ ಪಾಯಿಂಟ್ಗೆ 8 ಪೈಸೆಯಂತೆ ತುಟ್ಟಿಭತ್ಯೆ ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು.

2025ರ ಏಪ್ರಿಲ್ 11ರಂದು ಕನಿಷ್ಠ ವೇತನದ ಕರಡು ಅಧಿಸೂಚನೆ ಹೊರಡಿಸಿದ್ದು, ತಕ್ಷಣವೇ ಅಂತಿಮ ಅಧಿಸೂಚನೆ ಪ್ರಕಟಿಸಬೇಕು. 2022ರಿಂದ ಪೂರ್ವಾನ್ವಯವಾಗುವಂತೆ ಜಾರಿಗೊಳಿಸಬೇಕು. ಸುಪ್ರೀಂ ಕೋರ್ಟ್ ಮಾನದಂಡದಂತೆ 2,700 ಕ್ಯಾಲೋರಿ ಆಧಾರದಲ್ಲಿ ಕನಿಷ್ಠ ವೇತನ ನಿಗದಿ ಮಾಡಬೇಕು. ಗಾರ್ಮೆಂಟ್ಸ್, ಬೀಡಿ, ಅಗರಬತ್ತಿ ಮತ್ತು ಪ್ಲಾಂಟೇಷನ್ ವಲಯಗಳಲ್ಲಿ ಇರುವ ಮಹಿಳಾ ಕಾರ್ಮಿಕರ ವೇತನ ಅಸಮಾನತೆಯನ್ನು ಕೊನೆಗೊಳಿಸಬೇಕು ಎಂದು ಆಗ್ರಹಿಸಿದರು.

ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಡಿ.ಎ. ವಿಜಯಭಾಸ್ಕರ, ಉಪಾಧ್ಯಕ್ಷ ಬಿ.ಅಮ್ಜದ್, ಸಿಐಟಿಯು ರಾಜ್ಯ ಅಧ್ಯಕ್ಷ ಮೀನಾಕ್ಷಿ ಸುಂದರಂ, ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ, ಎಐಟಿಯುಸಿ ಮುಖಂಡರಾದ ಎಂ. ಸತ್ಯಾನಂದ, ಜಯಮ್ಮ, ಹನುಮಂತಪ್ಪ, ಸಿಐಟಿಯು ಮುಖಂಡರಾದ ಗೋಪಾಲಗೌಡ, ಪ್ರತಾಪ ಸಿಂಹ ಭಾಗವಹಿಸಿದ್ದರು.

ಕಾರ್ಮಿಕ ನಾಲ್ಕು ಸಂಹಿತೆಗಳನ್ನು ರದ್ದು ಮಾಡಬೇಕು ಎಂದು ಆಗ್ರಹಿಸಿ ಇದೇ ಸಂದರ್ಭದಲ್ಲಿ ಮನವಿ ಸಲ್ಲಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.