ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೆಂಗಿ: ತಿಂಗಳಲ್ಲಿ 1,652 ಪ್ರಕರಣ

Last Updated 2 ಆಗಸ್ಟ್ 2022, 16:24 IST
ಅಕ್ಷರ ಗಾತ್ರ

ಬೆಂಗಳೂರು: ಮಳೆಯಿಂದಾಗಿ ರಾಜ್ಯದಲ್ಲಿಡೆಂಗಿ ಪೀಡಿತರ ಸಂಖ್ಯೆ ಉಲ್ಬಣಗೊಂಡಿದ್ದು, ಜುಲೈ ತಿಂಗಳೊಂದರಲ್ಲೆ 1,652 ಪ್ರಕರಣಗಳು ದೃಢಪಟ್ಟಿವೆ.

ಈವರೆಗೆ ಡೆಂಗಿ ಪೀಡಿತರಾದವರ ಒಟ್ಟು ಸಂಖ್ಯೆ 4,126ಕ್ಕೆ ಏರಿಕೆಯಾಗಿದೆ. ಯಾವುದೇ ಮರಣ ಪ್ರಕರಣ ವರದಿಯಾಗಿಲ್ಲ. ಕಳೆದ ವರ್ಷ ಈ ವೇಳೆ ಡೆಂಗಿ ಪ್ರಕರಣಗಳ ಒಟ್ಟು ಸಂಖ್ಯೆ ಎರಡು ಸಾವಿರದ ಗಡಿಯೊಳಗಿತ್ತು.

ಈ ವರ್ಷ 77 ಸಾವಿರಕ್ಕೂ ಅಧಿಕ ಡೆಂಗಿಶಂಕಿತರನ್ನು ಗುರುತಿಸಿ,ತಪಾಸಣೆಗೆ ಒಳಪಡಿಸಲಾಗಿದೆ. 33 ಸಾವಿರಕ್ಕೂ ಅಧಿಕ ಮಂದಿಯ ರಕ್ತ ಪರೀಕ್ಷೆ ನಡೆಸಲಾಗಿದೆ.ಬಿಬಿಎಂಪಿ ವ್ಯಾಪ್ತಿಯಲ್ಲಿಯೇ 31,070 ಮಂದಿಯಲ್ಲಿಡೆಂಗಿಶಂಕೆ ವ್ಯಕ್ತವಾಗಿದ್ದು, 835 ಮಂದಿಯಲ್ಲಿ ಈ ಜ್ವರ ದೃಢಪಟ್ಟಿದೆ.

ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಡೆಂಗಿಪ್ರಕರಣಗಳು ಪತ್ತೆಯಾಗಿವೆ.ಪ್ರಕರಣಗಳ ಸಂಖ್ಯೆ 15 ಜಿಲ್ಲೆಗಳಲ್ಲಿ ಮೂರಂಕಿ, 14 ಜಿಲ್ಲೆಗಳಲ್ಲಿ ಎರಡಂಕಿಯಲ್ಲಿದೆ.ಮೈಸೂರಿನಲ್ಲಿ 388,ಉಡುಪಿಯಲ್ಲಿ 386, ದಕ್ಷಿಣ ಕನ್ನಡದಲ್ಲಿ 203,ಶಿವಮೊಗ್ಗದಲ್ಲಿ 182, ಚಿತ್ರದುರ್ಗದಲ್ಲಿ 178, ಹಾಸನದಲ್ಲಿ 141, ವಿಜಯಪುರದಲ್ಲಿ 133, ದಾವಣಗೆರೆಯಲ್ಲಿ 127, ಬೆಳಗಾವಿಯಲ್ಲಿ 116,ಚಿಕ್ಕಬಳ್ಳಾಪುರದಲ್ಲಿ 109, ಕೊಪ್ಪಳದಲ್ಲಿ 108,ಕಲಬುರ್ಗಿಯಲ್ಲಿ 105, ಚಾಮರಾಜನಗರದಲ್ಲಿ 103 ಹಾಗೂ ಕೋಲಾರದಲ್ಲಿ 100 ಪ್ರಕರಣಗಳು ದೃಢಪಟ್ಟಿವೆ. ಉಳಿದ ಜಿಲ್ಲೆಗಳಲ್ಲಿ ಈ ಸಂಖ್ಯೆ 100ಕ್ಕಿಂತ ಕಡಿಮೆ ಇವೆ.2021ರಲ್ಲಿ 7,189 ಮಂದಿಡೆಂಗಿಪೀಡಿತರಾಗಿದ್ದರು. ಅವರಲ್ಲಿ ಐವರುಮೃತಪಟ್ಟಿದ್ದರು.

926 ಚಿಕೂನ್‌ಗುನ್ಯಾ ಪ್ರಕರಣ:28 ಜಿಲ್ಲೆಗಳಲ್ಲಿಚಿಕೂನ್‌ಗುನ್ಯಾ ಪ್ರಕರಣಗಳು ಪತ್ತೆಯಾಗಿವೆ.25 ಸಾವಿರಕ್ಕೂ ಅಧಿಕ ಮಂದಿಚಿಕೂನ್‌ಗುನ್ಯಾ ಶಂಕಿತರನ್ನು ಗುರುತಿಸಿ, ತಪಾಸಣೆಗೆ ಒಳಪಡಿಸಲಾಗಿದೆ. 15 ಸಾವಿರಕ್ಕೂ ಅಧಿಕ ಮಂದಿಯ ರಕ್ತ ಪರೀಕ್ಷೆ ನಡೆಸಲಾಗಿದೆ. ಅವರಲ್ಲಿ926 ಮಂದಿ ಈ ಜ್ವರಕ್ಕೆ ಒಳಗಾಗಿರುವುದು ದೃಢಪಟ್ಟಿದೆ.

ವಿಜಯಪುರದಲ್ಲಿ 147, ಕೋಲಾರದಲ್ಲಿ 127, ಹಾಸನದಲ್ಲಿ 81, ಬೆಂಗಳೂರು ಗ್ರಾಮಾಂತರದಲ್ಲಿ 57, ಚಿತ್ರದುರ್ಗದಲ್ಲಿ 56, ಶಿವಮೊಗ್ಗದಲ್ಲಿ 52 ಹಾಗೂತುಮಕೂರಿನಲ್ಲಿ 51 ಪ್ರಕರಣಗಳು ವರದಿಯಾಗಿವೆ. ಉಳಿದ ಜಿಲ್ಲೆಗಳಲ್ಲಿ ಈ ಸಂಖ್ಯೆ 50ಕ್ಕಿಂತ ಕಡಿಮೆಯಿದೆ. ಯಾವುದೇ ಮರಣ ಪ್ರಕರಣ ವರದಿಯಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT