ದಂತವೈದ್ಯೆ ಆತ್ಮಹತ್ಯೆ; ಕಿರುಕುಳ ಆರೋಪ

7

ದಂತವೈದ್ಯೆ ಆತ್ಮಹತ್ಯೆ; ಕಿರುಕುಳ ಆರೋಪ

Published:
Updated:

ಬೆಂಗಳೂರು: ಜೆ.ಪಿ.ನಗರ ಸಮೀಪದ ಪುಟ್ಟೇನಹಳ್ಳಿಯಲ್ಲಿ ಭಾನುವಾರ ಸಂಜೆ ದಂತವೈದ್ಯೆ ಸೌಮ್ಯಾ (34) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸೌಮ್ಯಾ ಪತಿ ಸುನೀಲ್‌, ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ಎಂಜಿನಿಯರ್ ಆಗಿದ್ದಾರೆ. ದಂಪತಿಗೆ ಎಂಟು ವರ್ಷದ ಮಗನಿದ್ದಾನೆ. ಕೋರಮಂಗಲದಲ್ಲಿ ನೆಲೆಸಿರುವ ಸೌಮ್ಯಾ ಪೋಷಕರು, ಸಂಜೆ 6 ಗಂಟೆ ಸುಮಾರಿಗೆ ಮನೆಗೆ ಬಂದಿದ್ದರು. ಈ ವೇಳೆ ಮಗನೊಂದಿಗೆ ಟಿ.ವಿ ನೋಡುತ್ತ ನಡುಮನೆಯಲ್ಲಿ ಕುಳಿತಿದ್ದ ಸುನೀಲ್, ‘ಪತ್ನಿ ಕೋಣೆಯಲ್ಲಿ ಮಲಗಿದ್ದಾಳೆ’ ಎಂದು ಹೇಳಿದ್ದರು.

‌ಪೋಷಕರು ಹಲವು ಬಾರಿ ಬಾಗಿಲು ಬಡಿದರೂ ಮಗಳಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇದರಿಂದ ಅನುಮಾನಗೊಂಡ ಅವರು ‘ಸೌಮ್ಯಾ.. ಸೌಮ್ಯಾ..’ ಎಂದು ಕಿರುಚಿದ್ದಾರೆ. ಕೂಡಲೇ ಸುನೀಲ್ ಕೋಣೆ ಬಳಿ ಹೋಗಿದ್ದಾರೆ. ಬಾಗಿಲು ಮುರಿದು ನೋಡಿದಾಗ ಅವರು ನೇಣು ಹಾಕಿಕೊಂಡಿರುವುದು ಗೊತ್ತಾಗಿದೆ.

ತಕ್ಷಣ ಹತ್ತಿರದ ರಾಜಶೇಖರ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ತಪಾಸಣೆ ನಡೆಸಿದ ವೈದ್ಯರು, ಸೌಮ್ಯ ಮೃತಪಟ್ಟಿರುವುದಾಗಿ ಹೇಳಿದ್ದಾರೆ. ‘ಅಳಿಯ ಮಗಳಿಗೆ ಕಿರುಕುಳ ನೀಡುತ್ತಿದ್ದ. ಅದೇ ನೋವಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ’ ಎಂದು ಮೃತರ ಪೋಷಕರು ಆರೋಪಿಸಿದ್ದಾರೆ. ಪುಟ್ಟೇನಹಳ್ಳಿ ಪೊಲೀಸರು ಸುನೀಲ್ ಅವರ ವಿಚಾರಣೆ ನಡೆಸುತ್ತಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !