ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರಾಶ್ರಿತರೊಂದಿಗೆ ಕಾರಜೋಳ ದೀಪಾವಳಿ ಆಚರಣೆ

Last Updated 28 ಅಕ್ಟೋಬರ್ 2019, 19:03 IST
ಅಕ್ಷರ ಗಾತ್ರ

ಬೆಂಗಳೂರು:ಬೆಂಗಳೂರಿನ ನಿರಾಶ್ರಿತರ ಕೇಂದ್ರದಲ್ಲಿ ಸೋಮವಾರಉಪಮುಖ್ಯಮಂತ್ರಿ ಗೋವಿಂದ ಎಂ‌. ಕಾರಜೋಳ ಅವರು ನಿರಾಶ್ರಿತರೊಂದಿಗೆ ಸಿಹಿ ಹಂಚಿ ದೀಪಾವಳಿ ಹಬ್ಬವನ್ನು ಆಚರಿಸಿದರು.

‘ಪ್ರತಿ ವರ್ಷ ಕುಟುಂಬದ ಸದಸ್ಯರೊಂದಿಗೆ ಹಬ್ಬ ಆಚರಿಸುವುದು ಸಾಮಾನ್ಯ ಸಂಗತಿ. ಆದರೆ ನಿರಾಶ್ರಿತರು‌ ಒಂಟಿಯಾಗಿದ್ದಾರೆ. ಅವರೊಂದಿಗೆ ಹಬ್ಬ ಆಚರಿಸಿ ಅವರ ಅಹವಾಲುಗಳನ್ನು ಆಲಿಸಿ, ಪರಿಹರಿಸುವ ಹಿನ್ನೆಲೆಯಲ್ಲಿ ಈ ಕೇಂದ್ರದಲ್ಲಿ ನಿರಾಶ್ರಿತರೊಂದಿಗೆ ಹಬ್ಬ ಆಚರಿಸಿದೆ’ ಎಂದರು.

ಈ ಕೇಂದ್ರದಲ್ಲಿ ಒಟ್ಟು 754 ನಿರಾಶ್ರಿತರಿದ್ದಾರೆ. ರಾಜ್ಯದ 14 ನಿರಾಶ್ರಿತರ ಕೇಂದ್ರಗಳಲ್ಲಿ 1,250 ನಿರಾಶ್ರಿತರಿದ್ದಾರೆ. ಈ ಕೇಂದ್ರದಲ್ಲಿ ಕೃಷಿ, ಹೈನುಗಾರಿಕೆ, ವಿವಿಧ ತರಬೇತಿ ನೀಡಲಾಗುತ್ತಿದ್ದು, ಉದ್ಯೋಗಕ್ಕೆ ಹೋಗುವವರಿಗೆ ನೆರವು ನೀಡಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT