ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡಿಗ ವೈದ್ಯನಿಗೆ ಜಾಗತಿಕ ಗೌರವ

Last Updated 8 ನವೆಂಬರ್ 2019, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡಿಗ, ಕಾಸರಗೋಡಿನ ಇನ್‌ಸ್ಟಿಟ್ಯೂಟ್‌ ಆಫ್‌ ಡೆರ್ಮಟಾಲಜಿಯ (ಐಎಡಿ) ಮುಖ್ಯ ಚರ್ಮರೋಗ ತಜ್ಞ ಡಾ.ಎಸ್‌.ಆರ್‌. ನರಹರಿ ಅವರಿಗೆ ಲಂಡನ್ನಿನಲ್ಲಿ ನಡೆಯಲಿರುವ ವಿಲಿಯಮ್‌ ಓಸ್ಲರ್‌ ಶತಮಾನೋತ್ಸವ ಸ್ಮರಣೆ ಕಾರ್ಯಕ್ರಮದ ಉದ್ಘಾಟನಾ ಭಾಷಣ ಮಾಡುವ ಅವಕಾಶ ಒದಗಿಬಂದಿದೆ. ಇದೇ ಭಾನುವಾರ ಅವರು ಲಂಡನ್‌ಗೆ ತೆರಳಲಿದ್ದಾರೆ.

ಸಂಯೋಜಿತ ಔಷಧಿಗಳ ಪ್ರತಿಪಾದಕರಾಗಿದ್ದ ಓಸ್ಲರ್‌, ವೈದ್ಯಕೀಯ ವಿದ್ಯಾರ್ಥಿಗಳನ್ನು ಕೇವಲ ಬೋಧನಾ ಕೋಣೆಯಲ್ಲಿ ಕೂರಿಸದೆ ಮೊದಲ ಬಾರಿಗೆ ರೋಗಿಗಳ ಬಳಿಗೆ (ಬೆಡ್‌ಸೈಡ್‌) ಕರೆದೊಯ್ದು ಪ್ರಾಯೋಗಿಕ ತರಬೇತಿ ನೀಡುವ ಪದ್ಧತಿಯನ್ನು ಆರಂಭಿಸಿದವರು. ಅವರನ್ನು ಆಧುನಿಕ ಔಷಧ ವಿಜ್ಞಾನದ ಪಿತಾಮಹ ಎಂದೇ ಕರೆಯಲಾಗುತ್ತದೆ.

ಆನೆಕಾಲು ಕಾಯಿಲೆಗೆ ಸಂಯೋಜಿತ ಔಷಧಿಯನ್ನು ಯಶಸ್ವಿಯಾಗಿ ಸಂಶೋಧಿಸಿದ ಡಾ. ನರಹರಿ ಅವರ ಸಾಧನೆಯನ್ನು ಅರಿತ ಓಸ್ಲರ್‌ ಶತಮಾನೋತ್ಸವ ಸ್ಮರಣೆ ಕಾರ್ಯಕ್ರಮದ ಸಂಘಟಕರು, ಅವರನ್ನೇ ಉದ್ಘಾಟನಾ ಭಾಷಣಕ್ಕೆ ಆಹ್ವಾನಿಸಿ ಗೌರವಿಸಿದ್ದಾರೆ. ಬಿಲ್‌ ಗೇಟ್ಸ್‌ ಫೌಂಡೇಷನ್‌ ಸಹ ಡಾ. ನರಹರಿ ಅವರ ಸಾಧನೆಯನ್ನು ಗುರುತಿಸಿದ್ದು, ಜಗತ್ತಿನ ಬೇರೆ ಭಾಗಗಳಲ್ಲೂ ಆನೆಕಾಲು ರೋಗದ ಸಂಯೋಜಿತ ಔಷಧಿ ದೊರೆಯುವಂತಾಗಲು ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದೆ.

ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌ ಅವರು ಡ್ರಗ್‌ ಥೆರಪಿ ಯಶಸ್ಸಿನ ವಿಷಯವನ್ನು ಹಂಚಿಕೊಂಡು ಗುರುವಾರ ಮಾಡಿದ ಟ್ವೀಟ್‌ನಲ್ಲಿ ತಾವು ಡಾ. ನರಹರಿ ಅವರೊಟ್ಟಿಗೆ ಇರುವ ಚಿತ್ರವನ್ನು ಹಾಕಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT