ದೇವನಹಳ್ಳಿ: ವಿಮಾನ ನಿಲ್ದಾಣಕ್ಕೆ ಹೊಂದಿಕೊಂಡಿರುವ ಅಕ್ಲೇನಹಳ್ಳಿ–ಮಲ್ಲೇನಹಳ್ಳಿ ಜೋಡಿಗ್ರಾಮಗಳಲ್ಲಿ ಸರ್ಕಾರಿ ಗೋಮಾಳ ಹಾಗೂ ಗ್ರಾಮಠಾಣಾ ಪ್ರದೇಶಗಳ ಒತ್ತುವರಿ ರಾಜ್ಯದ ಇತಿಹಾಸದಲ್ಲೇ ಅತಿದೊಡ್ಡ ಭೂ ಹಗರಣವಾಗಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್ಎಸ್) ಪಕ್ಷದ ಗೌರವಾಧ್ಯಕ್ಷ ರವಿಕೃಷ್ಣ ರೆಡ್ಡಿ ಆರೋಪಿಸಿದರು.

ತಾಲ್ಲೂಕಿನ ಯರ್ತಿಗಾನಹಳ್ಳಿ ಮೂಲಕ ಅಕ್ಲೇನಹಳ್ಳಿ–ಮಲ್ಲೇನಹಳ್ಳಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಪ್ರದೇಶದಲ್ಲಿ ಶನಿವಾರ ಕೆಆರ್ಎಸ್ ಪಕ್ಷ, ವಿವಿಧ ದಲಿತ ಸಂಘಟನೆಗಳು ಹಾಗೂ ಪ್ರಗತಿಪರ ಹೋರಾಟಗಾರರು ಹಮ್ಮಿಕೊಂಡಿದ್ದ ‘ಒತ್ತುವರಿ ತೆರವು ಜಾಥಾ’ದಲ್ಲಿ ಮಾತನಾಡಿದರು.

ಬಡವರು, ದೀನ ದಲಿತರಿಗೆ ಸೇರಬೇಕಾದ ಅಂದಾಜು 800 ಎಕರೆ ಸರ್ಕಾರಿ ಭೂಮಿಯನ್ನು ಪ್ರಭಾವಿ ರಾಜಕೀಯ ಕುಟುಂಬಗಳು ಹಾಗೂ ಶ್ರೀಮಂತರು ಕಬಳಿಸಿರುವ ಗಂಭೀರ ಆರೋಪವಿದೆ. ಕೆರೆ, ಕಾಲುವೆ, ರಾಜಕಾಲುವೆ, ಗೋಮಾಳ ಮತ್ತು ಗ್ರಾಮಠಾಣಾ ಪ್ರದೇಶಗಳನ್ನು ಅತಿಕ್ರಮಿಸಿ ಮಣ್ಣು ತುಂಬಲಾಗಿದೆ ಎಂದು ದೂರಿದರು.

ಇನಾಂ ರದ್ದು ಕಾಯ್ದೆ ರಾಜ್ಯದ ಇತರ ಭಾಗಗಳಲ್ಲಿ ಜಾರಿಯಾಗಿದ್ದರೂ, ಈ ಗ್ರಾಮಗಳಿಗೆ ಮಾತ್ರ ಅನ್ವಯವಾಗದೇ ಇರುವುದರಿಂದ ಸಂಶಯಗಳು ಹೆಚ್ಚುತ್ತಿವೆ. ರೈತರ ಹೆಸರಿನಲ್ಲಿದ್ದ ದಾಖಲೆಗಳು ಕಚೇರಿಗಳಲ್ಲಿ ಕಾಣೆಯಾಗಿದ್ದು, ಖರಾಬು ಜಾಗಗಳಲ್ಲಿ ಗ್ರಾಮವನ್ನು ವ್ಯವಸ್ಥಿತವಾಗಿ ಸ್ಥಳಾಂತರ ಮಾಡಲಾಗಿದೆ ಎಂದು ಅಪಾದಿಸಿದರು.

ಜಾಥಾದಲ್ಲಿ ಭಾಗವಹಿಸಿದ ಹೋರಾಟಗಾರರು ಮತ್ತು ಸಾರ್ವಜನಿಕರು ಭಾರೀ ಸಂಖ್ಯೆಯಲ್ಲಿ ಸ್ಥಳಕ್ಕೆ ತೆರಳಿ, ಭೂಮಿಯ ಅಳತೆ ಪರಿಶೀಲನೆ ನಡೆಸಿ ಒತ್ತುವರಿ ತೆರವುಗೊಳಿಸುವ ಕಾರ್ಯವನ್ನು ಸಂಕೇತಿಕವಾಗಿ ನಡೆಸಿದರು. ದೇವನಹಳ್ಳಿ, ಹೊಸಕೋಟೆ, ದೊಡ್ಡಬಳ್ಳಾಪುರ, ನೆಲಮಂಗಲ, ಯಲಹಂಕ ಹಾಗೂ ಕೋಲಾರ ಭಾಗಗಳಿಂದ ಜನರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ನಂತರ ಅಕ್ಲೇನಹಳ್ಳಿ–ಮಲ್ಲೇನಹಳ್ಳಿ ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ಸಭೆ ನಡೆಸಿ, ಭೂ ಹಗರಣದಿಂದ ಉಂಟಾದ ಸಮಸ್ಯೆಗಳು ಹಾಗೂ ಇತ್ತೀಚೆಗೆ ರಾಜ್ಯ ಸಚಿವ ಸಂಪುಟದಲ್ಲಿ ಈ ವಿಷಯವಾಗಿ ಕೈಗೊಂಡ ಚರ್ಚೆಗಳ ಕುರಿತು ಗ್ರಾಮಸ್ಥರಿಗೆ ವಿವರ ನೀಡಲಾಯಿತು. ಕೆಆರ್ಎಸ್ ಪಕ್ಷದ ರಾಜ್ಯ ಯುವ ಘಟಕದ ಪ್ರಧಾನ ಕಾರ್ಯದರ್ಶಿ ನಿಖಿಲ್ ಸೇರಿದಂತೆ ಹಲವು ಮುಖಂಡರು ಸಭೆಯಲ್ಲಿ ಭಾಗವಹಿಸಿ ಜನರಲ್ಲಿ ಜಾಗೃತಿ ಮೂಡಿಸಿದರು.

ಸರ್ವೆ ಪೂರ್ಣ , ಹಸ್ತಾಂತರ ಬಾಕಿ

ಸ್ಥಳಕ್ಕೆ ಆಗಮಿಸಿದ್ದ ಕಂದಾಯ ಇಲಾಖೆಯ ಅಧಿಕಾರಿಗಳು ಕೆಆರ್ಎಸ್ ಪಕ್ಷದ ಮುಖಂಡರೊಂದಿಗೆ ಮಾತುಕತೆ ನಡೆಸಿದ ಕೆರೆ ಕೋಡಿ ರಾಜಕಾಲುವೆ ಗುಂಡು ತೋಪು ಸೇರಿದಂತೆ ಸರ್ಕಾರಿ ಜಮೀನುಗಳನ್ನು ಈಗಾಗಲೇ ಗುರುತಿಸಲಾಗಿದೆ ಎಂದು ತಿಳಿಸಿದರು. ಅವುಗಳನ್ನು ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸುವುದಷ್ಟೇ ಬಾಕಿಯಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಹಿಂದಿನ ದಿನಗಳಲ್ಲಿ ಒತ್ತುವರಿ ತೆರವುಗೊಳಿಸಿ ಹಾಕಿದ್ದ ನಾಮಫಲಕವನ್ನು ಯಾರು ತೆಗೆದುಹಾಕಿದ್ದಾರೆ ಎಂಬ ಪ್ರಶ್ನೆ ಉದ್ಭವಿಸಿತು. ಕಂದಾಯ ಇಲಾಖೆ ಸ್ಥಳವನ್ನು ಗುರುತಿಸಿ ಅಣ್ಣೇಶ್ವರ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಿದರೆ ಅದರ ನಿರ್ವಹಣೆ ಕೈಗೊಳ್ಳುವುದಾಗಿ ಪಿಡಿಒ ಗಂಗರಾಜು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.