ಬೆಂಗಳೂರು: ಮಹಿಳೆ ಕೊಲೆ ಮಾಡಿ ಮೃತದೇಹ ಸುಟ್ಟುಹಾಕಿ ಪರಾರಿಯಾಗಿದ್ದ ಆರೋಪಿಯನ್ನು ದೇವನಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಗುಂಡಿಬಂಡೆ ತಾಲ್ಲೂಕಿನ ನಿಲುಗುಂಬ ಗ್ರಾಮದ ನಿರ್ಮಲಾ(36) ಕೊಲೆಯಾದವರು.

ಯಾದಗಿರಿಯ ಜಿಲ್ಲೆಯ ಶೋರಾಪುರ ತಾಲ್ಲೂಕಿನ ಹಸನಾಪುರ ಗ್ರಾಮದ ಮೌನೇಶ್ ಮೈತ್ರಿ (34) ಬಂಧಿತ ಆರೋಪಿ.

ನಿರ್ಮಲಾ ಅವರು ದೇವನಹಳ್ಳಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ವಚ್ಛತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಕುಟುಂಬದವರನ್ನು ತೊರೆದು ಎರಡು ವರ್ಷದಿಂದ ದೇವನಹಳ್ಳಿಯಲ್ಲಿ ಮನೆ ಬಾಡಿಗೆ ಪಡೆದು ಒಬ್ಬರೇ ನೆಲಸಿದ್ದರು. ಆರೋಪಿ ಸಹ ದೇವನಹಳ್ಳಿಯ ಮದಗಲಮ್ಮ ಗುಡಿ ಬೀದಿಯಲ್ಲಿ ನೆಲಸಿದ್ದ. ಈ ನಡುವೆ ಇಬ್ಬರೂ ಪರಿಚಿತರಾಗಿ ಒಂದೇ ಮನೆಯಲ್ಲಿ ವಾಸ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದರು.

ಒಂದೇ ಮನೆಯಲ್ಲಿ ವಾಸ ಮಾಡುತ್ತಿರುವುದು ಪತ್ನಿಗೆ ಗೊತ್ತಾದರೆ ಸಮಸ್ಯೆ ಆಗಲಿದೆ ಎಂದು ಭಾವಿಸಿದ್ದ ಆರೋಪಿ, ನಿರ್ಮಲಾ ಅವರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ. ಫೆ.21ರಂದು ಹಗ್ಗದಿಂದ ಬಿಗಿದು ಕೊಲೆ ಮಾಡಿದ್ದ. ಎರಡು ದಿನ ಮೃತದೇಹವನ್ನು ಮನೆಯಲ್ಲಿಯೇ ಇಟ್ಟಿದ್ದ. ಅದಾದ ಮೇಲೆ ಮೃತದೇಹವನ್ನು ಬೆಡ್ಶೀಟ್ನಿಂದ ಸುತ್ತಿ, ಕಟ್ಟಡದ ಎರಡನೇ ಮಹಡಿಯಿಂದ ಮೆಟ್ಟಿಲಗಳ ಮೇಲೆ ಎಳೆದುಕೊಂಡು ಬಂದಿದ್ದ. ನಂತರ, ದ್ವಿಚಕ್ರ ವಾಹನ ಬಳಸಿ ದೇವನಹಳ್ಳಿಯ ಪಟ್ಟಣದ ಸ್ವರ್ಣಾದ್ರಿ ಹೋಟೆಲ್ ಎದುರಿನ ರಾಜಕಾಲುವೆಗೆ ಮೃತದೇಹ ಎಸೆದು ಪೆಟ್ರೋಲ್ ಸುರಿದು ಬೆಂಕಿ ಹಾಕಿ ಪರಾರಿಯಾಗಿದ್ದ’ ಎಂದು ಪೊಲೀಸರು ಹೇಳಿದರು.

‘ಆರೋಪಿ ಮೃತದೇಹ ಎಸೆದಿದ್ದ ಸ್ಥಳದ ಸುತ್ತಮುತ್ತಲಿದ್ದ ಕಟ್ಟಡಗಳಲ್ಲಿದ್ದ ಸಿ.ಸಿ.ಟಿ.ವಿ. ಕ್ಯಾಮೆರಾಗಳಲ್ಲಿ ಸೆರೆಯಾದ ದೃಶ್ಯಾವಳಿ ಹಾಗೂ ದೂರುವಾಣಿ ಕರೆಗಳ ತಾಂತ್ರಿಕ ವಿಶ್ಲೇಷಣೆಗೆ ಒಳಪಡಿಸಿದಾಗ ಕೆಲವು ಸಾಕ್ಷ್ಯಗಳು ಲಭಿಸಿದ್ದವು. ಆಗ ಆರೋಪಿಯ ಸುಳಿವು ಲಭಿಸಿ ಆರೋಪಿಯನ್ನು ಪತ್ತೆ ಮಾಡಿ ಬಂಧಿಸಲಾಯಿತು’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.