ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಮ್ಮಪದ ಉತ್ಸವಕ್ಕೆ ಚಾಲನೆ

Last Updated 9 ಮಾರ್ಚ್ 2022, 16:24 IST
ಅಕ್ಷರ ಗಾತ್ರ

ಬೆಂಗಳೂರು:ಆಚಾರ್ಯ ಬುದ್ಧರಕ್ಖಿತ ಭಂತೇಜಿ ಅವರ ಜನ್ಮಶತಮಾನೋತ್ಸವದ ಸ್ಮರಣಾರ್ಥ ಮಹಾ ಬೋಧಿ ಸೊಸೈಟಿಯು ನಗರದಲ್ಲಿ ಒಂದು ತಿಂಗಳು ಹಮ್ಮಿಕೊಂಡಿರುವಧಮ್ಮಪದ ಉತ್ಸವಕ್ಕೆ ಚಾಲನೆ ದೊರೆತಿದೆ.

ಲಡಾಖ್‌ನ ಸಂಸದ ಜಮ್ಯಾಂಗ್ ತ್ಸೆರಿಂಗ್ ನಮ್ಗ್ಯಾಲ್ ಅವರು ಈ ಉತ್ಸವ ಉದ್ಘಾಟಿಸಿದರು. ‘ಜಗತ್ತಿನಾದ್ಯಂತ ಬೌದ್ಧ ಧರ್ಮವು ಹರಡಿಕೊಂಡಿದೆ.ಅಹಿಂಸೆ, ದಯೆ, ಪ್ರೀತಿ ಮತ್ತು ಶಾಂತಿಯ ತತ್ವಗಳನ್ನು ಒಳಗೊಂಡಿರುವ ಈ ಧರ್ಮ ಎಲ್ಲರಿಗೂ ದಾರಿದೀಪವಾಗಿದೆ’ ಎಂದು ಹೇಳಿದರು. ಅವರು ಮಿಜೋರಾಂ ರಾಜ್ಯದ ವಿಹಾರಕ್ಕೆ ಬುದ್ಧನ ಪ್ರತಿಮೆಯನ್ನು ದಾನ ನೀಡಿದರು.

ಬೌದ್ಧ ಧರ್ಮದ ಮುಖಂಡ ವೆಂ. ಲಾಮಾ ನೊಚೋಕ್ ತ್ಸೆಪಾಲ್,ಮಹಾಬೋಧಿ ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ಪುಂಚೋಕ್ ದೋರ್ಜಿ ವಜಿರಾ, ಮಹಾಬೋಧಿ ಸಂಶೋಧನಾ ಕೇಂದ್ರದ ನಿರ್ದೇಶಕ ಬುದ್ಧದತ್ತ, ರಂಗಕರ್ಮಿ ಬಿ.ವಿ. ರಾಜಾರಾಮ್, ಬೌದ್ಧ ವಾಸ್ತುಶಿಲ್ಪಿ ಚಂದ್ರಶೇಖರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT