ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮೇಗೌಡ ನನ್ನ ಆಪ್ತ ಸ್ನೇಹಿತರಾಗಿದ್ದರು: ಸಿದ್ದರಾಮಯ್ಯ

Last Updated 29 ಡಿಸೆಂಬರ್ 2020, 8:38 IST
ಅಕ್ಷರ ಗಾತ್ರ

ಬೆಂಗಳೂರು: ಧರ್ಮೇಗೌಡ ನನ್ನ ಆಪ್ತ ಸ್ನೇಹಿತರಾಗಿದ್ದರು.‌ ಅವರ ತಂದೆಯವರ ಕಾಲದಿಂದಲೂ ಕುಟುಂಬದ ಪರಿಚಯ ಇತ್ತು. ತಳಮಟ್ಟದಿಂದ‌ ರಾಜಕಾರಣ ಮಾಡಿಕೊಂಡು ಬಂದವರು. ಸಹಕಾರ ಕ್ಷೇತ್ರಗಳಲ್ಲಿ ವಿವಿಧ ಹಂತಗಳಲ್ಲಿ ಕೆಲಸ ಮಾಡಿದವರು. ಧರ್ಮೇಗೌಡರ ತಂದೆ ಎಸ್.ಆರ್ ಲಕ್ಷ್ಮಯ್ಯ ಅವರೂ ನನ್ನ ಆಪ್ತ ಸ್ನೇಹಿತರಾಗಿದ್ದರು ಎಂದು ಬೆಂಗಳೂರಿನಲ್ಲಿ ಸಿದ್ದರಾಮಯ್ಯ ಹೇಳಿದ್ದಾರೆ.

ರೈತಪರ, ಜನಪರ ಕಾಳಜಿಯುಳ್ಳ ವ್ತಕ್ತಿ ಅಗಲಿರೋದು ಸಾರ್ವಜನಿಕ ಕ್ಷೇತ್ರಕ್ಕೆ ಅಪಾರ ನಷ್ಟವಾಗಿದೆ. ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ ಎಂದು ಪ್ರಾರ್ಥಿಸುತ್ತೇನೆ ಎಂದರು. ಇದೇವೇಳೆ, ಬಲತ್ಕಾರವಾಗಿ ಉಪ ಸಭಾಪತಿಯನ್ನ ಬಿಜೆಪಿ, ಜೆಡಿಎಸ್ ನವರು ಸಭಾಪತಿ‌ ಪೀಠದಲ್ಲಿ ಕೂರಿಸಿದ್ದರು. ಅದು ಧರ್ಮೇಗೌಡರಿಗೆ ಅವರಿಗೆ ಇಷ್ಟ ಇರಲಿಲ್ಲ

ಕೊರೊನಾ ರೂಪಾಂತರ ‌ಪತ್ತೆ ವಿಚಾರ: ಸರ್ಕಾರ ಜನರಲ್ಲಿ ಇರೋ ಆತಂಕ ದೂರ ಮಾಡಬೇಕು. ಬ್ರಿಟನ್ ನಿಂದ ಬಂದ‌ ಮೇಲೆ ಹುಡುಕೋದಲ್ಲ. ಬರೋ ಮೊದಲೇ ವಿಮಾನ ನಿಲ್ದಾಣದಲ್ಲಿ ಪರೀಕ್ಷೆ ಮಾಡಿ ,ಕ್ವಾರಂಟೈನ್ ಮಾಡಬೇಕಿತ್ತು ಎಂದಿದ್ದಾರೆ.

ಗೋಹತ್ಯೆ ನಿಷೇಧ ಕಾಯ್ದೆ ಜಾರಿ ವಿಚಾರ: ವಿಧಾನಸಭೆ,ಪರಿಷತ್ ನಲ್ಲಿ ಚರ್ಚೆ ಆತುರವಾಗಿ ಗೋಹತ್ಯೆ ನಿಷೇಧ ಕಾಯ್ದೆಯನ್ನು ಸುಗ್ರೀವಾಜ್ನೆ ಮೂಲಕ ತಂದಿದ್ದಾರೆ. ಅಂತ ಅಗತ್ಯ ಇರಲಿಲ್ಲ. ಹೈನುಗಾರಿಕೆಯಲ್ಲಿ ತೊಡಗಿರುವ ಸಾವಿರಾರು ಕುಟುಂಬಗಳಿಗೆ ತೊಂದರೆ ಆಗಲಿದೆ. 42 ಲಕ್ಷ ಕುಟುಂಬಗಳು ಹೈನುಗಾರಿಕೆಯಲ್ಲಿ ಭಾಗಿ ಆಗಿವೆ. ಕೃಷಿ ಕ್ಷೇತ್ರ,ಚರ್ಮ ಉದ್ಯಮ ಮೇಲೆ ಪರಿಣಾಮ ಬೀಳಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಇದೇವೇಳೆ, ನಾವು ಹಾಕೋ ಚಪ್ಪಲಿಗಳು, ಹೆಣ್ಣುಮಕ್ಕಳ ವ್ಯಾನಿಟಿ ಬ್ಯಾಗ್ ಗಳು ಚರ್ಮದಿಂದ ಆಗೋದು. ಇದರಿಂದ ತೊಂದರೆ ಆಗಲಿದೆ. ಲಿಡ್ಕರ್ ಮುಚ್ಚಬೇಲಾಗುತ್ತದೆ ‌ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT