ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ ದಾಖಲಾತಿ ಡಿಜಿಟಲೀಕರಣ: ಕೆ.ಸಿ. ಜನರಲ್ ಪ್ರಥಮ

‘ಆಯುಷ್ಮಾನ್ ಭಾರತ’ ಯೋಜನೆ: ಇ–ಆಸ್ಪತ್ರೆಯ ‘ಎಚ್‌ಎಂಐಎಸ್’ ಪೋರ್ಟಲ್‌ಗೆ ಲಿಂಕ್
Published 28 ಮೇ 2023, 20:56 IST
Last Updated 28 ಮೇ 2023, 20:56 IST
ಅಕ್ಷರ ಗಾತ್ರ

ಬೆಂಗಳೂರು: ‘ಆಯುಷ್ಮಾನ್ ಭಾರತ’ ಯೋಜನೆಯಡಿ ಆರೋಗ್ಯ ಖಾತೆಯನ್ನು ಇ–ಆಸ್ಪತ್ರೆಯ ‘ಎಚ್‌ಎಂಐಎಸ್’ ಪೋರ್ಟಲ್‌ಗೆ ಲಿಂಕ್ ಮಾಡುವಲ್ಲಿ ಇಲ್ಲಿನ ಕೆ.ಸಿ. ಜನರಲ್ ಆಸ್ಪತ್ರೆ ದೇಶದಲ್ಲಿಯೇ ಮುಂಚೂಣಿಯಲ್ಲಿದ್ದು, ಈವರೆಗೆ 45,580 ಆರೋಗ್ಯ ದಾಖಲಾತಿಯನ್ನು ಲಿಂಕ್ ಮಾಡಿದೆ. 

ಈ ವ್ಯವಸ್ಥೆಯು ಆಸ್ಪತ್ರೆಗಳಲ್ಲಿ ರೋಗಿಗಳ ನೋಂದಣಿ, ಚಿಕಿತ್ಸೆಗೆ ಸಹಕಾರಿಯಾಗಿದೆ. ಕಾಗದರಹಿತ ಸೇವೆ ಇದರಿಂದ ಸಾಧ್ಯವಾಗಲಿದೆ. 

ಆಯುಷ್ಮಾನ್ ಭಾರತ್ ಆರೋಗ್ಯ ಖಾತೆ (ಎಬಿಎಚ್‌ಎ) ಅಡಿ ವೈದ್ಯಕೀಯ ಇತಿಹಾಸ ಡಿಜಿಟಲೀಕರಣ ಮಾಡುವಲ್ಲಿಯೂ ಆಸ್ಪತ್ರೆ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ. 87,400 ಮಂದಿ ಮಾಹಿತಿಯನ್ನು ಡಿಜಿಟಲೀಕರಣ ಮಾಡಲಾಗಿದೆ. ಎರಡನೇ ಸ್ಥಾನದಲ್ಲಿ ಧಾರವಾಡದ ಜಿಲ್ಲಾ ಆಸ್ಪತ್ರೆ ಹಾಗೂ ಮೂರನೇ ಸ್ಥಾನದಲ್ಲಿ ಜಯನಗರ ಸಾರ್ವಜನಿಕ ಆಸ್ಪತ್ರೆಯಿದ್ದು, ತಲಾ 70 ಸಾವಿರಕ್ಕೂ ಅಧಿಕ ಮಂದಿಯನ್ನು ಈ ವ್ಯವಸ್ಥೆ ಅಡಿ ತರಲಾಗಿದೆ.

‘ಕೆ.ಸಿ. ಜನರಲ್ ಆಸ್ಪತ್ರೆಯು ಎಚ್‌ಎಂಐಎಸ್ ವ್ಯವಸ್ಥೆಯಡಿ ರೋಗಿಗಳ ವೈದ್ಯಕೀಯ ಇತಿಹಾಸ ದಾಖಲೀಕರಿಸುವಲ್ಲಿ ಮುಂಚೂಣಿಯಲ್ಲಿದೆ. ಈ ವ್ಯವಸ್ಥೆಯಿಂದ ಮೊಬೈಲ್ ಮೂಲಕವೇ ವೈದ್ಯಕೀಯ ದಾಖಲಾತಿಗಳನ್ನು ಪರಿಶೀಲಿಸಿಕೊಳ್ಳಬಹುದು. ಇದಕ್ಕಾಗಿ ಎಬಿಎಚ್‌ಎ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬೇಕು’ ಎಂದು ಆರೋಗ್ಯ ಇಲಾಖೆ ಆಯುಕ್ತ ಡಿ. ರಂದೀಪ್ ತಿಳಿಸಿದ್ದಾರೆ. 

‘ಆರೋಗ್ಯ ದಾಖಲೆಗಳ ಡಿಜಿಟಲೀಕರಣದಿಂದ ದೇಶದ ಎಲ್ಲೆಡೆ ರೋಗಿಯ ಚಿಕಿತ್ಸಾ ಇತಿಹಾಸ ದೊರೆಯಲಿದೆ. ಇದರಿಂದ ವೈದ್ಯಕೀಯ ಸೇವೆಗಳನ್ನು ಸುಲಭವಾಗಿ ಒದಗಿಸಲು ಸಾಧ್ಯವಾಗುತ್ತದೆ. ಆಸ್ಪತ್ರೆಗಳು, ಔಷಧ ಮಳಿಗೆಗಳು ಹಾಗೂ ಪ್ರಯೋಗಾಲಯಗಳಿಗೂ ದತ್ತಾಂಶಗಳ ಡಿಜಿಟಲೀಕರಣ ನೆರವಾಗಲಿದೆ’ ಎಂದು ಕೆ.ಸಿ. ಜನರಲ್ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT