ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಂದ ನೇರ ಖರೀದಿ–ಮನೆ ಬಾಗಿಲಿಗೆ ತರಕಾರಿ

ಜನಸಂದಣಿ ತಪ್ಪಿಸಲು ಹೊಸ ತಿಪ್ಪಸಂದ್ರದಲ್ಲಿ ಹೊಸ ಪ್ರಯೋಗ
Last Updated 31 ಮಾರ್ಚ್ 2020, 15:19 IST
ಅಕ್ಷರ ಗಾತ್ರ

ಬೆಂಗಳೂರು: ಹಣ್ಣು–ತರಕಾರಿ ಖರೀದಿ ಸಲುವಾಗಿ ಜನ ಮನೆಯಿಂದ ಮಾರುಕಟ್ಟೆಗೆ ಬಂದು ಗುಂಪುಗೂಡುವುದನ್ನು ತಪ್ಪಿಸಲು ಹೊಸ ತಿಪ್ಪಸಂದ್ರ ವಾರ್ಡ್‌ನ ಪಾಲಿಕೆ ಸದಸ್ಯೆ ಶಿಲ್ಪಾ ಅಭಿಲಾಷ್‌ ಹೊಸ ಪ್ರಯೋಗದ ಮೊರೆ ಹೋಗಿದ್ದಾರೆ.

ರೈತರಿಂದ ನೇರವಾಗಿ ಹಣ್ಣು ಹಾಗೂ ತರಕಾರಿಗಳನ್ನು ಖರೀದಿಸುತ್ತಿರುವ ಅವರು ಅದನ್ನು ತಳ್ಳುಗಾಡಿ ಮೂಲಕ ಜನರ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಿದ್ದಾರೆ.

‘ಲಾಕ್‌ಡೌನ್‌ ಬಳಿಕ ರೈತರು ತಾವು ಬೆಳೆದ ಹಣ್ಣು ಹಾಗೂ ತರಕಾರಿಗಳನ್ನು ನಗರಕ್ಕೆ ತಂದು ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಇನ್ನೊಂದೆಡೆ ಮನೆಯಿಂದ ಹೊರಗೆ ಹೋಗಲು ಜನರಿಗೂ ಭಯ. ಈ ಎರಡೂ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ನಾವೇ ಕೋಲಾರ, ಹೊಸಕೋಟೆ, ಮಾಲೂರು ಕಡೆಯ ರೈತರಿಂದ ಅವುಗಳನ್ನು ಖರೀದಿಸಿ ಜನರ ಮನೆ ಬಾಗಿಲಿಗೆ ತಲುಪಿಸುತ್ತಿದ್ದೇವೆ. ಜನರಿಗೂ ಮಿತ ದರದಲ್ಲಿ ತರಕಾರಿ ಸಿಗುವಂತೆ ನೋಡಿಕೊಳ್ಳುತ್ತಿದ್ದೇವೆ’ ಎಂದು ಶಿಲ್ಪಾ ಅಭಿಲಾಷ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT