ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಶೇ 78.12 ಮತದಾನ

7.32 ಲಕ್ಷ ಮಂದಿ ಹಕ್ಕು ಚಲಾವಣೆ– ಶೃಂಗೇರಿಯಲ್ಲಿ ದಾಖಲೆ ಮತದಾನ
Last Updated 13 ಮೇ 2018, 11:40 IST
ಅಕ್ಷರ ಗಾತ್ರ

ಚಿಕ್ಕಮಗಳೂರು:  ಜಿಲ್ಲೆಯ ಐದೂ ಕ್ಷೇತ್ರಗಳಿಂದ ಶೇ 78.12 ಮತದಾನವಾಗಿದೆ. ಒಟ್ಟು 9.37 ಲಕ್ಷ ಮತದಾರರ ಪೈಕಿ 7.32 ಲಕ್ಷ ಮಂದಿ ಹಕ್ಕು ಚಲಾಯಿಸಿದ್ದಾರೆ.

ಐದೂ ಕ್ಷೇತ್ರಗಳ ಪೈಕಿ ಶೃಂಗೇರಿಯಲ್ಲಿ ಅತಿ ಹೆಚ್ಚು ಶೇ 82.02 ಮತದಾನ ಆಗಿದೆ. ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಡಿಮೆ ಶೇ 73.67 ಮತದಾನವಾಗಿದೆ. ಮೂಡಿಗೆರೆಯಲ್ಲಿ ಶೇ 76.79, ತರೀಕೆರೆಯಲ್ಲಿ ಶೇ 81.07 ಹಾಗೂ ಕಡೂರಿನಲ್ಲಿ 78.14 ಮತದಾನವಾಗಿದೆ.

ಐದೂ ಕ್ಷೇತ್ರಗಳಲ್ಲಿ ಒಟ್ಟು 4.67 ಲಕ್ಷ ಪುರುಷ ಮತದಾರರ ಪೈಕಿ 3.69 ಲಕ್ಷ (ಶೇ 79.03) ಹಾಗೂ 4.69 ಲಕ್ಷ ಮಹಿಳಾ ಮತದಾರರ ಪೈಕಿ 3.62 ಲಕ್ಷ (77.31) ಮಹಿಳೆಯರು ಮತ ಚಲಾಯಿಸಿದ್ದಾರೆ. ಶೃಂಗೇರಿ ಕ್ಷೇತ್ರದಲ್ಲಿ ಶೇ 82.64, ಮೂಡಿಗೆರೆಯಲ್ಲಿ ಶೇ 78.29, ಚಿಕ್ಕಮಗಳೂರಿನಲ್ಲಿ ಶೇ 74.26, ತರೀಕೆರೆಯಲ್ಲಿ ಶೇ 82.06 ಹಾಗೂ ಕಡೂರಿನಲ್ಲಿ ಶೇ 79.06 ಪುರುಷ ಮತದಾರರು ಹಕ್ಕು ಚಲಾಯಿಸಿದ್ದಾರೆ.

ಶೃಂಗೇರಿ ಕ್ಷೇತ್ರದಲ್ಲಿ ಶೇ 81.42, ಮೂಡಿಗೆರೆ ಕ್ಷೇತ್ರದಲ್ಲಿ 75.79, ಚಿಕ್ಕಮಗಳೂರು ಕ್ಷೇತ್ರದಲ್ಲಿ ಶೇ 73.17, ತರೀಕೆರೆಯಲ್ಲಿ ಶೇ 80.08 ಕಡೂರಿನಲ್ಲಿ ಶೇ 77.11 ಮಹಿಳಾ ಮತದಾರರು ಮತ ಚಲಾಯಿಸಿದ್ದಾರೆ.

ಜಿಲ್ಲೆಯಲ್ಲಿ ನಕ್ಸಲ್‌ ಪ್ರಭಾವಿತ ಪ್ರದೇಶಗಳಲ್ಲಿ 39 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಒಟ್ಟು 115 ಅತಿಸೂಕ್ಷ್ಮ ಮತ್ತು 261 ಸೂಕ್ಷ್ಮ ಮತಗಟ್ಟೆಗಳು ಇದ್ದವು. ಒಟ್ಟು 1210 ಮತಗಟ್ಟೆ ಸ್ಥಾಪಿಸಲಾಗಿತ್ತು.

ಜಿಲ್ಲೆಯಲ್ಲಿ 2013ರ ವಿಧಾನಸಭಾ ಚುನಾವಣೆಯಲ್ಲಿ ಶೇ 75.47 ಮತದಾನ ಆಗಿತ್ತು. ಶೃಂಗೇರಿ ಕ್ಷೇತ್ರದಲ್ಲಿ ಶೇ 79.52, ಮೂಡಿಗೆರೆಯಲ್ಲಿ ಶೇ 71.92 , ಚಿಕ್ಕಮಗಳೂರಿನಲ್ಲಿ ಶೇ 72.17, ತರೀಕೆರೆಯಲ್ಲಿ 77.49 ಹಾಗೂ ಕಡೂರಿನಲ್ಲಿ ಶೇ 76.80 ಮತದಾನ ಆಗಿತ್ತು.

**
ಜಿಲ್ಲೆಯಲ್ಲಿ ವ್ಯವಸ್ಥಿತವಾಗಿ ಮತ್ತು ಶಾಂತಿಯುತವಾಗಿ ಮತದಾನ ನಡೆದಿದೆ. ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ - ಎಂ.ಕೆ.ಶ್ರೀರಂಗಯ್ಯ, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT