ಬೆಂಗಳೂರು: ಡಿ.ಕೆ.ಶಿವಕುಮಾರ್ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ದಿನಾಂಕ ನಿಗದಿಯಾದ ಬೆನ್ನಲ್ಲೇ, ಅವರ ಉಡುಗೆ–ತೊಡುಗೆಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ನಡೆಯುತ್ತಿದೆ.

ರಾಜಕೀಯ ವೇದಿಕೆಗಳಿರಲಿ, ಸಾಂಸ್ಕೃತಿಕ ಕಾರ್ಯಕ್ರಮಗಳಿರಲಿ, ಧಾರ್ಮಿಕ ವಿಧಿ–ವಿಧಾನ ಗಳಿರಲಿ ಶಿವಕುಮಾರ್ ಅವರು ತಮ್ಮ ಉಡುಗೆಯ ಬಗ್ಗೆ ಆಸ್ಥೆವಹಿಸುತ್ತಾರೆ. ಜುಬ್ಬಾ–ಪೈಜಾಮ, ರೇಷ್ಮೆ ಅಂಗಿ–ಪಂಚೆ, ಜುಬ್ಬಾ–ಪೈಜಾಮದ ಮೇಲೆ ನೆಹರೂ ಕೋಟ್, ಸೂಟ್, ಜೋಧ್ಪುರಿ ಸೂಟ್... ಹೀಗೆ ಅವರ ಉಡುಗೆಗಳ ಪಟ್ಟಿ ಬೆಳೆಯುತ್ತದೆ.

ಪ್ರತಿ ಕಾರ್ಯಕ್ರಮಕ್ಕೆ ಹೊಂದುವಂತಹ ಉಡುಗೆ ಯನ್ನು ತೊಡುವುದಷ್ಟೇ ವಿಶೇಷವಲ್ಲ; ಗಮನ ಸೆಳೆಯುವುದು ಅವುಗಳ ಬಣ್ಣ, ವಿನ್ಯಾಸ ಮತ್ತು ಬಹುಮುಖ್ಯವಾಗಿ ಬ್ರ್ಯಾಂಡ್ಗಳಿಂದ. ಗುಚ್ಚಿ, ಪ್ರಾಡಾ, ಫೆಂಡಿ, ಲೂಯಿ ವಿಟಾನ್, ಫೆರ್ಅಗಾಮೋಃ... ಜಗತ್ತಿನ ಅತ್ಯಂತ ದುಬಾರಿ ಮತ್ತು ಐಷಾರಾಮಿ ಬ್ರ್ಯಾಂಡ್ಗಳ ಬಟ್ಟೆಗಳು, ಚಪ್ಪಲಿ, ರುಮಾಲುಗಳನ್ನು ಅವರು ಬಳಸುತ್ತಾರೆ. ಅವುಗಳ ಸಾಲಿಗೆ ದುಬಾರಿ ಕನ್ನಡಕ, ಕೈಗಡಿಯಾರಗಳೂ ಸೇರುತ್ತವೆ.

ರಾಜಕೀಯ ಕಾರ್ಯಕ್ರಮದಲ್ಲಿ, ವಿಧಾನ ಮಂಡಲದ ಅಧಿವೇಶನದಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ, ಎದುರಾಳಿ ಪಕ್ಷಗಳ ನಾಯಕರ ಸುದ್ದಿಗೋಷ್ಠಿಗಳಲ್ಲಿ ಅವರ ಐಷಾರಾಮಿ ಮತ್ತು ದುಬಾರಿ ಉಡುಗೆಗಳ ಬಗ್ಗೆ ಪ್ರಶ್ನೆ ಎದ್ದಿದ್ದಿದೆ. ‘ನಾನು ನನಗಿಷ್ಟವಾದ ಬಟ್ಟೆ, ರುಮಾಲನ್ನು ಧರಿಸಬಾರದೇ’ ಎಂದು ಒಮ್ಮೆ ಮರುಪ್ರಶ್ನೆ ಹಾಕುವ ಮೂಲಕ ಶಿವಕುಮಾರ್ ಅವರು ಎದುರಾಳಿಗಳನ್ನು ಸುಮ್ಮನ್ನಾಗಿಸಿದ್ದರು.

ಪ್ರತಿ ಕಾರ್ಯಕ್ರಮಕ್ಕೆ ಯಾವ ಬಟ್ಟೆ, ಬಣ್ಣ ಹೊಂದುತ್ತದೆ ಎಂಬುದನ್ನು ಶಿವಕುಮಾರ್ ಅವರು ತಮ್ಮ ಕುಟುಂಬ ದವರು ಮತ್ತು ಅತ್ಯಾಪ್ತರೊಂದಿಗೆ ಚರ್ಚಿಸಿನಿರ್ಧರಿಸುತ್ತಾರೆ. ಅಂತಹ ಭಿನ್ನ ಸಂಯೋಜನೆಯ ಹಲವು ಉಡುಗೆ–ತೊಡುಗೆಗಳ ಸಂಗ್ರಹವೇ ಅವರ ಬಳಿ ಇದೆ. ವರ್ಣರಂಜಿತ ರಾಜಕಾರಣಿ ಎಸ್.ಬಂಗಾರಪ್ಪ ಅವರ ಗರಡಿಯಲ್ಲಿ ಬೆಳೆದುದರಿಂದ, ಅವರಂತೆಯೇ ಶಿವಕುಮಾರ್ ಅವರೂ ಉಡುಗೆಯ ಬಗ್ಗೆ ಹೆಚ್ಚು ಗಮನ ನೀಡಲು ಆರಂಭಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-51-309315452

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.