ಬೆಂಗಳೂರು: ರಾಜ್ಯ ರಾಜಕಾರಣದಲ್ಲಿನ ನಡೆಯುತ್ತಿರುವ ಕ್ಷಿಪ್ರ ಬೆಳವಣಿಗೆಗಳ ಕುರಿತು ಮೂರು ದಿನಗಳಿಂದಲೂ ಯಾವುದೇ ಪ್ರತಿಕ್ರಿಯೆ ನೀಡದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮೌನ‘ವ್ರತ’ ಪಾಲಿಸುತ್ತಿದ್ದಾರೆ.

ಅವರ ಸೋದರ ಡಿ.ಕೆ.ಸುರೇಶ್, ಬೆಂಬಲಿಗರು ಮತ್ತು ಅಭಿಮಾನಿಗಳು ಯಾವೊಂದು ಭಾವನೆ ತೋರ್ಪಡದೆ ಶಿವಕುಮಾರ್ ಅವರನ್ನೇ ಅನುಸರಿಸುತ್ತಿದ್ದಾರೆ.

ಮಂಗಳವಾರ ದೆಹಲಿಯಲ್ಲಿ ವರಿಷ್ಠರ ಜತೆ ನಡೆದ ಸಮಾಲೋಚನೆ ಬಳಿಕ, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುವ ತೀರ್ಮಾನವನ್ನು ಸಿದ್ದರಾಮಯ್ಯ ಮಾಡಿದರು. ಬುಧವಾರ ಇಡೀ ಶಿವಕುಮಾರ್ ದೆಹಲಿಯಲ್ಲೇ ಇದ್ದರು. ಆದರೂ ಅವರು ಬಹಿರಂಗವಾಗಿ ಯಾರೊಂದಿಗೂ ಮಾತನಾಡಲಿಲ್ಲ. ‘ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವವರೆಗೂ ಮಾತನಾಡಬೇಡಿ’ ಎಂಬ ತಮ್ಮ ನಂಬಿಕಸ್ತ ಸ್ವಾಮೀಜಿಯೊಬ್ಬರ ಸೂಚನೆಯನ್ನು ಅವರು ಪಾಲಿಸುತ್ತಿದ್ದಾರೆ ಎಂದು ಹೇಳಲಾಗಿದೆ.

ಬುಧವಾರ ರಾತ್ರಿಯೇ ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದೆಹಲಿಯಿಂದ ಬಂದಿಳಿದ ಶಿವಕುಮಾರ್ ಅವರು, ಮಾಧ್ಯಮ ಪ್ರತಿನಿಧಿಗಳು ಮತ್ತು ತಮ್ಮ ಅಭಿಮಾನಿಗಳಿಗೆ ಕೈಮುಗಿದು ಖಾಸಗಿ ವಾಹನದಲ್ಲಿ ಮನೆಗೆ ತೆರಳಿದ್ದರು.

ಗುರವಾರ ಬೆಳಿಗ್ಗೆ ಶಿವಕುಮಾರ್ ಅವರ ಸದಾಶಿವನಗರ ನಿವಾಸದ ಬಳಿ ಅವರ ನೂರಾರು ಬೆಂಬಲಿಗರು ಸೇರಿದ್ದರು. ಶಿವಕುಮಾರ್ ಅವರು ಮನೆಯ ಬಾಲ್ಕನಿಯಿಂದ ಕಾಣುತ್ತಿದ್ದಂತೆ, ಅವರು ಘೋಷಣೆ ಕೂಗಲಾರಂಭಿಸಿದರು. ಅವರೆಲ್ಲರನ್ನೂ ಮನೆಯೊಳಗೆ ಕರೆಸಿಕೊಂಡ ಶಿವಕುಮಾರ್, ಕೆಲಹೊತ್ತು ಮಾತನಾಡಿದರು. ಆನಂತರ ಬೆಂಬಲಿಗರು ಅಲ್ಲಿಂದ ತೆರಳಿದರು. ತಾವು ತಂದಿದ್ದ ಹಾರ–ಶಾಲುಗಳನ್ನೂ ವಾಪಸ್ ಒಯ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆದಿದ್ದ ಉಪಾಹಾರ ಸಭೆಗೆಂದು ಮನೆಯಿಂದ ಹೊರಬಂದಾಗಲೂ ಶಿವಕುಮಾರ್ ಅವರು ಮಾಧ್ಯಮ ಪ್ರತಿನಿಧಿಗಳತ್ತ ಕೈಮುಗಿದು ಹೊರಟರು. ಅಲ್ಲೇ ಇದ್ದ ತಮ್ಮ ಕೆಲವು ಅಭಿಮಾನಿಗಳತ್ತ ನೋಡಿ, ಸುಮ್ಮನಿರುವಂತೆ ಸನ್ನೆ ಮಾಡಿದರು. ಮುಖ್ಯಮಂತ್ರಿ ನಿವಾಸದ ಬಳಿ ಕಾರಿನಿಂದ ಇಳಿದಾಗಲೂ ಮಾಧ್ಯಮಗಳತ್ತ ಕೈಮುಗಿದು ಹೊರಟರು.

ಉಪಾಹಾರ ಸಭೆಗೂ ಮುನ್ನ ಸಿದ್ದರಾಮಯ್ಯನವರ ಜತೆ ಕೆಲಹೊತ್ತು ಸಂಭ್ರಮದಿಂದಲೇ ಅವರು ಸಮಾಲೋಚನೆ ನಡೆಸಿದರು. ತಾವು ರಾಜೀನಾಮೆ ನೀಡುವ ನಿರ್ಧಾರವನ್ನು ಸಿದ್ದರಾಮಯ್ಯ ಅವರು ಸಭೆಗೆ ತಿಳಿಸಿದರು ಎಂದು ಮಾಧ್ಯಮಗಳು ವರದಿ ಮಾಡಿದವು. ಆ ವೇಳೆಗೆ ಇತ್ತ ಶಿವಕುಮಾರ್ ಅವರ ಸದಾಶಿವನಗರ ನಿವಾಸದ ಬಳಿ ಇದ್ದ ಕೆಲ ಅಭಿಮಾನಿಗಳು ಪರಸ್ಪರ ಸಿಹಿ ಹಂಚಿ, ‘ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ಗೆ ಜೈ’ ಎಂದು ಘೋಷಣೆ ಕೂಗಿದರು. ತಕ್ಷಣವೇ ಮನೆಯೊಳಗಿಂದ ಬಂದ ಸಿಬ್ಬಂದಿ, ಅವರನ್ನು ಸುಮ್ಮನಾಗಿಸಿದರು.

ಸಿದ್ದರಾಮಯ್ಯ ಅವರು ರಾಜೀನಾಮೆ ಪತ್ರ ಸಲ್ಲಿಸಲು ಲೋಕಭವನಕ್ಕೆ ತೆರಳಿದಾಗ, ಅಲ್ಲಿಂದ ಗೃಹಕಚೇರಿ ಕೃಷ್ಣಾಗೆ ಬಂದು ಸುದ್ದಿಗೋಷ್ಠಿ ನಡೆಸುವಾಗಲೂ ಶಿವಕುಮಾರ್ ಅವರ ಜತೆಗಿದ್ದರು. ಅಲ್ಲಿ ಒಂದೇ ವಾಕ್ಯವನ್ನು ಉಸುರಿದರು.

ಕೈ ಸನ್ನೆ ಕೈ ಮುಗಿಯುವುದಕ್ಕಷ್ಟೆ ಸೀಮಿತ

ಶಿವಕುಮಾರ್ ಮತ್ತು ಅವರ ತಮ್ಮ ಡಿ.ಕೆ. ಸುರೇಶ್ ಅವರು ಹೆಚ್ಚು ಮಾತನಾಡದೆ ಕೈ ಸನ್ನೆ ಕೈ ಮುಗಿಯುವುದಕ್ಕಷ್ಟೆ ತಮ್ಮನ್ನು ಸೀಮಿತಗೊಳಿಸಿದ್ದರು. ಗುರುವಾರ ಬೆಳಿಗ್ಗೆ ಸದಾಶಿವನಗರದಲ್ಲಿರುವ ಮನೆಯಿಂದ ಉಪಾಹಾರ ಸಭೆಗೆ ಹೊರಟ ಶಿವಕುಮಾರ್ ಅವರನ್ನು ಮಾತನಾಡಿಸಲು ಸುದ್ದಿಗಾರರು ಸುತ್ತುವರಿದರೂ ಅವರು ಮಾತ್ರ ತುಟಿಪಿಟಿಕ್ಕೆನ್ನಲಿಲ್ಲ. ಕೈ ಸನ್ನೆ ಮಾಡಿ ತೆರಳಿದರು. ಡಿ.ಕೆ. ಸುರೇಶ್ ಅವರು ‘ಪಕ್ಷದ ತೀರ್ಮಾನಕ್ಕೆ ಕಾಯೋಣ’ ಎಂದಷ್ಟೆ ಹೇಳಿದರು

ಮನೆಯ ಬಳಿ ಸಚಿವ ಶಾಸಕರ ದಂಡು

ಸಿದ್ದರಾಮಯ್ಯ ಅವರು ರಾಜೀನಾಮೆ ಪ್ರಕಟಿಸಿ ಸುದ್ದಿಗೋಷ್ಠಿ ಮುಗಿಸಿದ ಬಳಿಕ ಶಿವಕುಮಾರ್ ತಮ್ಮ ಸದಾಶಿವನಗರದ ಮನೆಗೆ ಹೋದರು. ಅತ್ತ ಸಿದ್ದರಾಮಯ್ಯ ಅವರು ದೆಹಲಿಗೆ ವಿಮಾನ ಏರುತ್ತಿದ್ದಂತೆಯೇ ಹಲವು ಶಾಸಕರು ಸಚಿವರು ಅವರ ಮನೆಗೆ ಬಂದು ಶುಭ ಕೋರಲು ಆರಂಭಿಸಿದರು. ಭರತ್ ರೆಡ್ಡಿ ಬಿ. ನಾಗೇಂದ್ರ ಆದಿಯಾಗಿ ಹಲವು ಶಾಸಕರು ಮನೆಗೆ ಬಂದು ಶಿವಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸಿದರು.

ಬಿ.ಕೆ.ಸಂಗಮೇಶ್ವರ ಕಂಪ್ಲಿ ಗಣೇಶ್ ಸೇರಿ ಹಲವು ಶಾಸಕರು ಅವರಿಗೆ ಜತೆಯಾದರು. ಅದರ ಬೆನ್ನಲೇ ಸಚಿವ ಎನ್.ಎಸ್.ಬೋಸರಾಜು ಸಹ ಓಡೋಡಿ ಬಂದು ಶುಭ ಕೋರಿದರು. ಹೊತ್ತು ಕಳೆದಂತೆ ಶಾಸಕರ ಸಂಖ್ಯೆ ಹೆಚ್ಚುತ್ತಲೇ ಹೋಯಿತು. ಸಂಜೆ 6ರ ವೇಳೆಗೆ ನೂರಾರು ಮಂದಿ ಬೆಂಬಲಿಗರು ಅವರ ಮನೆಯ ಬಳಿ ಸೇರಿ ಘೋಷಣೆ ಕೂಗಲಾರಂಭಿಸಿದರು. ಆಗ ಹೊರಬಂದ ಶಿವಕುಮಾರ್ ಅವರು ಎಲ್ಲರಿಗೂ ಕೈಮುಗಿದರು. ಆ ಸಂದರ್ಭದಲ್ಲಿ ಅವರ ಕಣ್ಣುಗಳು ತೇವವಾಗಿದ್ದವು. ಅದನ್ನು ತೋರ್ಪಡದೆ ಮನೆಯೊಳಗೆ ಹೋದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.