ಬೆಂಗಳೂರು: ನಾಯಿಯನ್ನು ವಾಕಿಂಗ್ಗೆ ಕರೆದೊಯ್ದ ವಿಚಾರಕ್ಕೆ ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯ ಬ್ರಿಗೇಡ್ ಯುಟೋಪಿಯಾದ ಈಸ್ಟ್ ಆ್ಯಂಪಿಥಿಯೇಟರ್ನಲ್ಲಿ ಪರಸ್ಪರ ಹೊಡೆದಾಟ ನಡೆದಿದ್ದು ಪ್ರಕರಣವು ಠಾಣೆಯ ಮೆಟ್ಟಿಲೇರಿದೆ.

ಅಪಾರ್ಟ್ಮೆಂಟ್ನ ನಿವಾಸಿ ತರುಣ್ ಅರೋರ ಅವರು ನೀಡಿದ ದೂರಿನ ಮೇರೆಗೆ ಓಂ ಪ್ರಕಾಶ್ ಬಾಜಪೈ, ಅನಿಲ್ ಕುಮಾರ್ ಸಿಂಹ ಮತ್ತಿತರರ ವಿರುದ್ಧ ವರ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಓಂ ಪ್ರಕಾಶ್ ಬಾಜಪೈ ಅವರ ಪತ್ನಿ ಶಶಿ ನೀಡಿದ ದೂರಿನ ಮೇಲೆ ಅದೇ ಠಾಣೆಯಲ್ಲಿ ತರುಣ್ ಅರೋರ ವಿರುದ್ಧ ಎಫ್ಐಆರ್ ದಾಖಲಾಗಿದೆ.

‘ಎರಡೂ ಕಡೆಯವರ ದೂರು–ಪ್ರತಿದೂರು ಪಡೆದುಕೊಂಡು ಎಫ್ಐಆರ್ ದಾಖಲು ಮಾಡಲಾಗಿದೆ. ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.

ತರುಣ್ ಅರೋರ ದೂರಿನಲ್ಲಿ ಏನಿದೆ?: ಮಾರ್ಚ್ 3ರ ಬೆಳಿಗ್ಗೆ 7.45ರ ಸುಮಾರಿಗೆ ಬ್ರಿಗೇಡ್ ಯುಟೋಪಿಯಾದ ಈಸ್ಟ್ ಆ್ಯಂಪಿಥಿಯೇಟರ್ ಸ್ಥಳದಲ್ಲಿ ನಾಯಿಯನ್ನು ಕರೆದುಕೊಂಡು ಹೋಗುತ್ತಿದೆ. ಅದೇ ಸ್ಥಳದಲ್ಲಿ ಕೆಲವು ಹಿರಿಯ ನಾಗರಿಕರು ಇದ್ದರು. ಅವರನ್ನು ಗಮನಿಸದೇ ಮುಂದಕ್ಕೆ ಹೋಗಿದ್ದೆ. ನನ್ನನ್ನು ತಡೆದು, ಈ ಪ್ರದೇಶದಲ್ಲಿ ನಾಯಿಯನ್ನು ಕರೆದುಕೊಂಡು ಬರಬಾರದು ಎಂದು ಹೇಳಿದ್ದರು. ಆಗ ಇದು ಸಾಮಾನ್ಯ ಪ್ರದೇಶವಾಗಿದ್ದು, ಯಾರಿಗೂ ಅಡ್ಡಿಯಾಗುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದೆ. ಆಗ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ನಿಂದನೆ ತೀವ್ರಗೊಂಡ ಮೇಲೆ ಪೊಲೀಸ್ ಸಹಾಯವಾಣಿ 112ಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದೆ. ಮೊಬೈಲ್ನಲ್ಲಿ ಚಿತ್ರೀಕರಣ ಮಾಡಲು ಮುಂದಾದ ವೇಳೆ ಓಂ ಪ್ರಕಾಶ್ ಬಾಜಪೈ ಅವರು ಮೊಬೈಲ್ ಕಸಿದುಕೊಂಡರು. ಅದಾದ ಮೇಲೆ ಆರು ಮಂದಿ ಬಂದು ಹಲ್ಲೆ ನಡೆಸಿದ್ದರು’ ಎಂದು ತರುಣ್ ಅರೋರ ದೂರು ನೀಡಿದ್ದಾರೆ. ಇದಕ್ಕೆ ಶಶಿ ಅವರು ಪ್ರತಿ ದೂರು ನೀಡಿದ್ದಾರೆ.

ಜೀವ ಬೆದರಿಕೆ: ‘ಅಪಾರ್ಟ್ಮೆಂಟ್ ಆವರಣದ ಈಸ್ಟ್ ಆ್ಯಂಪಿಥಿಯೇಟರ್ ಪ್ರದೇಶದಲ್ಲಿ ಅಸೋಸಿಯೇಷನ್ ವತಿಯಿಂದ ನಿಗದಿಪಡಿಸಿರುವ ಸ್ಥಳದಲ್ಲಿ ಯೋಗ ಹಾಗೂ ವ್ಯಾಯಾಮ ಮಾಡುತ್ತಿದ್ದೆವು. ತರುಣ್ ಅರೋರ ಅವರು ಯೋಗ ಮಾಡುತ್ತಿದ್ದ ಸ್ಥಳಕ್ಕೆ ನಾಯಿ ಕರೆದುಕೊಂಡು ಬಂದಿದ್ದರು. ನಾವು ಕುಳಿತುಕೊಳ್ಳುವ ಸ್ಥಳವನ್ನು ನಾಯಿ ಅಶುದ್ಧಗೊಳಿಸಿತ್ತು. ಸಾಕುನಾಯಿಗಳನ್ನು ವಾಕಿಂಗ್ಗೆ ಕರೆದೊಯ್ಯಲು ಪ್ರತ್ಯೇಕ ವ್ಯವಸ್ಥೆಯಿದ್ದರೂ ಉದ್ದೇಶಪೂರ್ವಕವಾಗಿ ಅದೇ ಸ್ಥಳಕ್ಕೆ ಬರುತ್ತಿದ್ದರು. ಹಲವು ಬಾರಿ ವಿನಂತಿ ಮಾಡಿಕೊಂಡರೂ ನಮ್ಮ ಮಾತಿಗೆ ಬೆಲೆ ನೀಡಿರಲಿಲ್ಲ. ಫೋಟೊ ತೆಗೆದುಕೊಳ್ಳಬೇಡಿ ಎಂದು ತಡೆಯಲು ಯತ್ನಿಸಿದಾಗ ಅವರ ಮೊಬೈಲ್ ಕೆಳಕ್ಕೆ ಬಿತ್ತು. ಇದರಿಂದ ಕೋಪಗೊಂಡ ತರುಣ್ ಅರೋರ ಅವರು ಪತಿ ಓಂ ಪ್ರಕಾಶ್ ಬಾಜಪೈ ಅವರ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದರು’ ಎಂದು ಶಶಿ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

‘ಅದೇ ಸ್ಥಳದಲ್ಲಿದ್ದ ಇತರೆ ನಾಗರಿಕರ ಮೇಲೂ ತರುಣ್ ಹಲ್ಲೆ ನಡೆಸಿದ್ದಾರೆ. ಜತೆಗೆ ಬೆದರಿಕೆ ಹಾಕಿದ್ದಾರೆ’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.