ಬುಧವಾರ, ಆಗಸ್ಟ್ 21, 2019
22 °C
ಬಡವರ ಭೂಮಿ, ವಸತಿಗಾಗಿ ವಿಭಿನ್ನ ಹೋರಾಟ

‘ನಡುರಾತ್ರಿಯ ಸ್ವಾತಂತ್ರ್ಯೋತ್ಸವ’ 14ರಂದು

Published:
Updated:

ಬೆಂಗಳೂರು: ಬಡವರಿಗೆ ಸ್ವಂತ ಭೂಮಿ ಹಾಗೂ ವಸತಿ ಕಲ್ಪಿಸುವಂತೆ ಆಗ್ರಹಿಸಿ ಸ್ವಾತಂತ್ರ್ಯ ಉದ್ಯಾನದಲ್ಲಿ ಇದೇ 14ರಂದು ರಾತ್ರಿ ‘ನಡುರಾತ್ರಿ ಸ್ವಾತಂತ್ರ್ಯೋತ್ಸವ’ವನ್ನು ಆಚರಿಸುವುದಾಗಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ತಿಳಿಸಿದೆ.

ಕಾರ್ಯಕ್ರಮದ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾಹಿತಿ ನೀಡಿದ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ, ‘ಬಡವರಿಗೆ ಮೂಲಭೂತ ಹಕ್ಕುಗಳನ್ನು ನೀಡುವಂತೆ ಒತ್ತಾಯಿಸಿ ಇದೇ 14ರ ಸಂಜೆ 6 ಗಂಟೆಗೆ ಸಂಗೊಳ್ಳಿ ರಾಯಣ್ಣ ನಗರ ರೈಲು ನಿಲ್ದಾಣದಿಂದ  ಸ್ವಾತಂತ್ರ್ಯ ಉದ್ಯಾನದವರೆಗೆ ಹಣತೆಗಳ ಮೆರವಣಿಗೆ ನಡೆಸಲಿದ್ದೇವೆ’ ಎಂದು ತಿಳಿಸಿದರು. 

‘ಸ್ವಾತಂತ್ರ್ಯ ಬಂದು 72 ವರ್ಷಗಳಾದರೂ ಬಡವರಿಗೆ ಸ್ವಂತ ಭೂಮಿ ಇಲ್ಲ. ಅವರ ಅಭಿವೃದ್ದಿಗೆ ಶ್ರಮಿಸುವಲ್ಲಿ ಎಲ್ಲಾ ಸರ್ಕಾರಗಳು ವಿಫಲವಾಗಿವೆ’  ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

‘ಕಾರ್ಯಕ್ರಮ‌ದಲ್ಲಿ ಉತ್ತರ ಪ್ರದೇಶದ ಭೀಮ್ ಆರ್ಮಿ ಸಂಸ್ಥಾಪಕ ಚಂದ್ರಶೇಖರ ಆಜಾದ್‌ ‘ರಾವಣ’ ಹಾಗೂ ಕೇರಳದ ವಯನಾಡಿನ ಭೂಮಿ ಹೋರಾಟದ ಎಂ.ಪಿ.ಕುಂಞ ಕಣಾರನ್ ಭಾಗವಹಿಸಲಿದ್ದಾರೆ.  ಅಂದು ನಡುರಾತ್ರಿ 12.05ಕ್ಕೆ ದೊರೆಸ್ವಾಮಿ ಅವರು ಧ್ವಜಾರೋಹಣ ನೆರವೇರಿಸಲಿದ್ದಾರೆ. ರಾತ್ರಿ ಇಡೀ ಹೋರಾಟದ ಕುರಿತ ವಿವಿಧ ಕಾರ್ಯಕ್ರಮಗಳು ನಡೆಯಲಿವೆ’ ಎಂದು ಸಮಿತಿಯ ಕುಮಾರ ಸಮತಳ ತಿಳಿಸಿದರು.

Post Comments (+)