ಬೆಂಗಳೂರು: ಬೇಸಿಗೆ ಆರಂಭಗೊಂಡು ತಿಂಗಳು ಕಳೆಯುತ್ತಾ ಬಂದಿದ್ದರೂ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸುಸ್ಥಿತಿಯಲ್ಲಿಡುವ ಚಟುವಟಿಕೆ ಈಗ ಆರಂಭವಾಗಿದೆ.

ಬೇಸಿಗೆ ಆರಂಭಕ್ಕೂ ಮುನ್ನ ನೀರಿನ ಲಭ್ಯತೆಯ ಎಲ್ಲ ಮೂಲಗಳನ್ನು ಸಿದ್ದವಿಟ್ಟುಕೊಳ್ಳಬೇಕು ಎಂದು ಸರ್ಕಾರ ತಿಂಗಳ ಹಿಂದೆಯೇ ಸೂಚನೆ ನೀಡಿದೆ. ಇದರ ನಡುವೆ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಕೊನೆ ಕ್ಷಣದಲ್ಲಿ ತಯಾರಿ ಆರಂಭಿಸಲಾಗಿದೆ.

ನಗರ ಜಿಲ್ಲಾಪಂಚಾಯಿತಿ ಐದು ತಾಲ್ಲೂಕುಗಳ 85 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ 767 ಗ್ರಾಮಗಳಿದ್ದು, ಒಟ್ಟು 831 ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಇವುಗಳಲ್ಲಿ 91 ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ರಾಜ್ ಇಲಾಖೆ ಅಡಿಯಲ್ಲಿದ್ದರೆ, ಉಳಿದ 740 ಕರ್ನಾಟಕ ಹಾಲು ಮಹಾಮಂಡಳಿ, ಸಿಎಸ್ಆರ್ ಅನುದಾನ ಬಳಸಿ ನಿರ್ಮಿಸಲಾಗಿದೆ.

ಒಟ್ಟು ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ 760 ಬಳಕೆಗೆ ಯೋಗ್ಯವಾಗಿವೆ. ಉಳಿದ 71 ಘಟಕಗಳು ಹಾಳಾಗಿವೆ. ಇವುಗಳಲ್ಲಿ 37 ಘಟಕಗಳ ರಿಪೇರಿ ಕಾರ್ಯವನ್ನು ನೀರು ಸರಬರಾಜು ವಿಭಾಗ ಆರಂಭಿಸಿದೆ. ಇದು ಏಪ್ರಿಲ್ ಎರಡನೇ ವಾರದ ಹೊತ್ತಿಗೆ ಪೂರ್ಣಗೊಳ್ಳಲಿದೆ. ಇನ್ನೂ 34 ಘಟಕಗಳ ದುರಸ್ತಿ ಆರಂಭವಾಗಬೇಕಿದೆ.

ಚೂಡಹಳ್ಳಿ, ಆವಲಹಳ್ಳಿ, ಕೊಂಡಶೆಟ್ಟಿಹಳ್ಳಿ, ಮಾರತ್ಹಳ್ಳಿ, ಮಾರನಾಯಕನಹಳ್ಳಿ, ಬ್ಯಾಲಹಳ್ಳಿ ಸಹಿತ ಹಲವು ಭಾಗಗಳಲ್ಲಿ ಘಟಕಗಳ ದುರಸ್ತಿ ನಡೆದಿದೆ. ಬನ್ನೇರುಘಟ್ಟ, ತಾವರಕೆರೆ, ಹಕ್ಕಿಪಕ್ಕಿ ಕಾಲೊನಿ, ಶಿಕಾರಿಪಾಳ್ಯ ಕೆಲವು ಕಡೆಗಳಲ್ಲಿ ಘಟಕಗಳ ಸುತ್ತಮುತ್ತ ಅಂತರ್ಜಲ ಕುಸಿತದಿಂದ ನೀರು ಸಮರ್ಪಕವಾಗಿ ಸಿಗುತ್ತಿಲ್ಲ.

‘ಶುದ್ಧ ಕುಡಿಯುವ ನೀರಿನ ಘಟಕಗಳು ನಿರ್ವಹಣೆಯಿಲ್ಲದೇ ನೀರಿಗೆ ತೊಂದರೆ ಅನುಭವಿಸುವಂತಾಗಿದೆ. ವಿವಿಧ ಅನುದಾನದಡಿ ನಿರ್ಮಿಸಿರುವ ಘಟಕಗಳನ್ನು ಕಾಲಕಾಲಕ್ಕೆ ಸರಿಪಡಿಸಬೇಕು. ಬೇಸಿಗೆ ಬಂದಾಗ ಕೆಲಸ ಕೈಗೆತ್ತಿಕೊಂಡರೆ ಸ್ಥಳೀಯರಿಗೆ ಸಮಸ್ಯೆಯಾಗುವುದಿಲ್ಲವೇ’ ಎಂದು ಬ್ಯಾಲಹಳ್ಳಿ ಗ್ರಾಮಸ್ಥರು ಪ್ರಶ್ನಿಸುತ್ತಾರೆ.

‘ಕಚ್ಚಾ ನೀರಿನಿಂದಾಗಿ ಘಟಕಗಳು ಸಂಪೂರ್ಣ ಬಳಕೆಗೆ ಯೋಗ್ಯವಿಲ್ಲದೇ ಇರುವುದು, ನೀರಿನ ಲಭ್ಯತೆ ಪ್ರಮಾಣ ಕಡಿಮೆಯಾಗಿರುವುದು ಸೇರಿ ನಾನಾ ಕಾರಣಗಳಿಂದ ದುರಸ್ತಿ ವಿಳಂಬವಾಗಿದೆ. ಸದ್ಯ ಶೇ 90ರಷ್ಟು ಘಟಕಗಳಲ್ಲಿ ನೀರು ಸಿಗುತ್ತಿದೆ. ಶೇ 10ರಷ್ಟರಲ್ಲಿ ಮಾತ್ರ ಸಮಸ್ಯೆಯಿದ್ದು, ಆದಷ್ಟು ಬೇಗನೇ ಎಲ್ಲಾ ಘಟಕ ದುರಸ್ತಿ ಮುಗಿಸಿ ನೀರು ಒದಗಿಸುತ್ತೇವೆ’ ಎಂದು ಜಿಲ್ಲಾ ಪಂಚಾಯಿತಿ ನೀರು ಸರಬರಾಜು ವಿಭಾಗದ ಕಾರ್ಯಕಾಲಿಕ ಎಂಜಿಜಿನಿಯರ್ ಎಚ್.ಎನ್. ಮಂಜುನಾಥ ತಿಳಿಸಿದರು.

7 ಹಳ್ಳಿಗಳಲ್ಲಿ ಸಮಸ್ಯೆ– ಆತಂಕ

ಆನೇಕಲ್ ತಾಲ್ಲೂಕಿನ ಬಸವನಪುರ, ಲಕ್ಷ್ಮೀಪುರ, ಶಿಕಾರಿಪಾಳ್ಯ, ಮಾರಗೊಂಡನಹಳ್ಳಿ, ಹುಲಿಮಂಗಲ, ಬೆಂಗಳೂರು ದಕ್ಷಿಣ ತಾಲ್ಲೂಕಿನ ತಾವರೆಕೆರೆ, ಚೆನ್ನೇನಹಳ್ಳಿ ಜೆಟ್ಟಿ ಪಾಳ್ಯ ಸಹಿತ ಏಳು ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಎದುರಾಗಬಹುದು ಎನ್ನುವ ವರದಿಯನ್ನು ಸರ್ಕಾರಕ್ಕೆ ನೀಡಲಾಗಿದೆ. ಈ ಗ್ರಾಮಗಳಲ್ಲಿ ಪರ್ಯಾಯ ವ್ಯವಸ್ಥೆಗೂ ಜಿಲ್ಲಾ ಪಂಚಾಯಿತಿಯಿಂದ ತಯಾರಿ ಮಾಡಿಕೊಳ್ಳಲಾಗುತ್ತಿದೆ.

‘ಆನೇಕಲ್, ಬೆಂಗಳೂರು ದಕ್ಷಿಣ, ಯಲಹಂಕ ಹಾಗೂ ಮಹದೇವಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನೀರಿನ ಪರಿಸ್ಥಿತಿ ಎದುರಿಸಲು ಆಯಾ ಪಂಚಾಯಿತಿ ಆಡಳಿತಾಧಿಕಾರಿಗಳು, ಪಿಡಿಒಗಳು ಕಾರ್ಯಯೋಜನೆ ರೂಪಿಸಿದ್ದಾರೆ. ವಾರದಲ್ಲಿ ಒಂದು ದಿನ ಕಡ್ಡಾಯವಾಗಿ ಸಭೆ ನಡೆಸಿ ಕುಡಿಯುವ ನೀರಿನ ಸ್ಥಿತಿಗತಿ ಕುರಿತು ಚರ್ಚಿಸುವಂತೆಯೂ ಸೂಚಿಸಲಾಗಿದೆ. ಆಯಾ ಶಾಸಕರ ಅಧ್ಯಕ್ಷತೆಯಲ್ಲಿರುವ ಕಾರ್ಯಪಡೆ ಸಭೆ ನಡೆಯಲಿವೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಕಾವೇರಿ ನೀರೂ ಇಲ್ಲ

ಬೆಂಗಳೂರು ನಗರಕ್ಕೆ ತೊರೆಕಾಡನಹಳ್ಳಿಯಿಂದ ಕಾವೇರಿ ನೀರು ತರುವ ಮಾರ್ಗದಲ್ಲಿ ಹಲವು ಗ್ರಾಮಗಳಿದ್ದರೂ ಅಲ್ಲಿಗೂ ಕಾವೇರಿ ನೀರು ಸರಬರಾಜು ಆಗುತ್ತಿಲ್ಲ. 767 ಗ್ರಾಮಗಳು ಕೊಳವೆ ಬಾವಿ ನೀರಿಗೆ ಅವಲಂಬಿತವಾಗಿವೆ. ಬನ್ನೇರುಘಟ್ಟ ಹಾಗೂ ಹೆನ್ನಾಗರ ಪಂಚಾಯಿತಿ ಭಾಗಕ್ಕೆ ಕಾವೇರಿ ನೀರು ಕೊಡಿಸುವ ಪ್ರಯತ್ನಗಳು ಆರಂಭಗೊಂಡಿದ್ದರೂ ಅದು ಇನ್ನಷ್ಟು ವಿಳಂಬವಾಗುವ ಸಾಧ್ಯತೆಗಳಿವೆ.

ಹೆಚ್ಚಿನ ಭಾಗದಲ್ಲಿ ಸದ್ಯಕ್ಕೆ ನೀರಿನ ಸಮಸ್ಯೆಯಿಲ್ಲ. ತೊಂದರೆ ಆಗಬಹುದಾದ ಗ್ರಾಮಗಳ ಪಟ್ಟಿ ಮಾಡಿ ಕಾರ್ಯಯೋಜನೆ ಸಿದ್ಪಪಡಿಸಿಕೊಂಡಿದ್ದೇವೆ.
-ಆರ್. ಯತೀಶ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಗರ ಜಿಲ್ಲಾ ಪಂಚಾಯಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.