ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾದಕ ವಸ್ತು ಮಾರಾಟ: ಇಬ್ಬರ ಬಂಧನ

ವೀಸಾ ಮುಗಿದಿದ್ದರೂ ನಗರದಲ್ಲಿ ಆರೋಪಿ ವಾಸ
Last Updated 19 ಮಾರ್ಚ್ 2021, 17:55 IST
ಅಕ್ಷರ ಗಾತ್ರ

ಬೆಂಗಳೂರು: ಕಮರ್ಷಿಯಲ್ ಸ್ಟ್ರೀಟ್‌ ಠಾಣಾ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳ ಮಾರಾಟದಲ್ಲಿ ತೊಡಗಿದ್ದ ಒಬ್ಬ ನೈಜೀರಿಯಾ ಪ್ರಜೆ ಸೇರಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಟಿ.ಸಿ.ಪಾಳ್ಯದಲ್ಲಿ ವಾಸವಿದ್ದ ನೈಜೀರಿಯಾ ಮೂಲದ ಒಕೊರೊ ಕ್ರಿಶ್ಚಿಯನ್ ಇಫೀನ್ಯಿ (36) ಹಾಗೂ ಸನ್‌ಶೈನ್ ಬಡಾವಣೆ ನಿವಾಸಿ ರೋಹಿತ್ ಕ್ರಿಸ್ಟೋಫರ್ (28) ಬಂಧಿತರು.

‘2018ರಲ್ಲಿ ಮೂರು ತಿಂಗಳ ಪ್ರವಾಸಿ ವೀಸಾ ಪಡೆದು ಭಾರತಕ್ಕೆ ಬಂದಿದ್ದಆರೋಪಿ ಒಕೊರೊ ಕ್ರಿಶ್ಚಿಯನ್, ವೀಸಾ ಮುಗಿದಿದ್ದರೂ ಅಕ್ರಮವಾಗಿ ಬೆಂಗಳೂರಿನಲ್ಲಿ ನೆಲೆಸಿದ್ದ. ಸುಲಭವಾಗಿ ಹಣ ಮಾಡಬೇಕೆಂಬ ಉದ್ದೇಶದಿಂದ ಕೊರಿಯರ್ ಮೂಲಕ ಎಂಡಿಎಂಎ ಮಾದಕ ವಸ್ತು ತರಿಸಿಕೊಂಡು, ನಗರದ ವಿವಿಧ ಭಾಗದ ಜನರಿಗೆ ಮಾರಾಟ ಮಾಡುತ್ತಿದ್ದ. ಆನ್‌ಲೈನ್‌ ಪಾವತಿಯ ಮೂಲಕ ಹಣ ವರ್ಗಾವಣೆ ಮಾಡುತ್ತಿದ್ದ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಟಿ.ಸಿ.ಪಾಳ್ಯದ ಬೆಂಗಳೂರು ಶೂಟರ್ಸ್‌ ಹೆಸರಿನ ಫುಟ್‌ಬಾಲ್‌ ಅಕಾಡೆಮಿಗೆ ಆಟವಾಡಲು ಹೋಗುತ್ತಿದ್ದಾಗ ಅಲ್ಲಿ ಕೆಲಸ ಮಾಡುತ್ತಿದ್ದರೋಹಿತ್ ಕ್ರಿಸ್ಟೋಫರ್‌ನ ಪರಿಚಯವಾಗಿತ್ತು. ಈತನ ಮುಖಾಂತರ ಕೆ.ಆರ್‌.ಪುರ, ರಾಮಮೂರ್ತಿನಗರ ಸೇರಿದಂತೆ ವಿವಿಧೆಡೆ ನೆಲೆಸಿರುವ ಆಫ್ರಿಕಾ ಮೂಲದ ವ್ಯಕ್ತಿಗಳು, ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಮಾದಕ ವಸ್ತುಗಳನ್ನು ಪೂರೈಸುವ ದಂಧೆಯಲ್ಲಿ ತೊಡಗಿದ್ದ’.

‘ಆರೋಪಿಗಳಿಂದ ₹35.20 ಲಕ್ಷ ಬೆಲೆಬಾಳುವ 350 ಗ್ರಾಂ ತೂಕದ ಎಂಡಿಎಂಎ (ಮಾದಕ ವಸ್ತು), ಎರಡು ಮೊಬೈಲ್, 10 ಜಿಪ್‌ಲಾಕ್‌ ಕವರ್, ಒಂದು ಸ್ಕೂಟರ್ ಹಾಗೂ ದಾಖಲೆಗಳನ್ನು ಜಪ್ತಿ ಮಾಡಲಾಗಿದ್ದು, ತನಿಖೆ ಮುಂದುವರಿಸಲಾಗಿದೆ’ ಎಂದೂ ಹೇಳಿದರು.

ಮನೆ ಮಾಲೀಕರ ವಿರುದ್ಧ ಕ್ರಮ: ‘ಆರೋಪಿಒಕೊರೊ ಕ್ರಿಶ್ಚಿಯನ್ ವಾಸವಿದ್ದ ಮನೆಯಲ್ಲಿ ಶೋಧ ನಡೆಸಿ, ನಕಲಿ ವೀಸಾ ಹಾಗೂ ಹಣ ವರ್ಗಾವಣೆಗೆ ಸಂಬಂಧಿಸಿದ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಯ ವೀಸಾ ದಾಖಲೆ ಪರಿಶೀಲಿಸದೆ, ವಾಸಕ್ಕೆ ಮನೆ ನೀಡಿದ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT