ಸ್ಯಾನಿಟರಿ ನ್ಯಾಪ್ಕಿನ್‌ನಲ್ಲಿ ಡ್ರಗ್ಸ್‌ ಬಚ್ಚಿಟ್ಟು ಸಾಗಣೆ

ಮಂಗಳವಾರ, ಜೂಲೈ 16, 2019
26 °C
ಅಂತರರಾಷ್ಟ್ರೀಯ ಜಾಲ ಭೇದಿಸಿದ ಎನ್‌ಸಿಬಿ

ಸ್ಯಾನಿಟರಿ ನ್ಯಾಪ್ಕಿನ್‌ನಲ್ಲಿ ಡ್ರಗ್ಸ್‌ ಬಚ್ಚಿಟ್ಟು ಸಾಗಣೆ

Published:
Updated:

ಬೆಂಗಳೂರು: ಸೌದಿ ಅರೇಬಿಯಾದಿಂದ ಮಾದಕ ವಸ್ತುವನ್ನು ತಂದು ರಾಜ್ಯದಲ್ಲಿ ಮಾರಾಟ ಮಾಡುತ್ತಿದ್ದ ಅಂತರರಾಷ್ಟ್ರೀಯ ಡ್ರಗ್ಸ್‌ ಜಾಲವನ್ನು ಭೇದಿಸಿರುವ ರಾಷ್ಟ್ರೀಯ ಮಾದಕವಸ್ತು ನಿಗ್ರಹ ಘಟಕದ (ಎನ್‌ಸಿಬಿ) ಅಧಿಕಾರಿಗಳು, ನಾಲ್ವರನ್ನು ಬಂಧಿಸಿದ್ದಾರೆ.

ಅಬು ತಾಹೀರ್ (23), ಮೊಹಮ್ಮದ್ ಅಫ್ಜಲ್ (25), ಖುಷ್ಬೂ ಶರ್ಮ (24) ಹಾಗೂ ಮಂಗಳೂರಿನ ಮೊಹಮ್ಮದ್ ಆಸಿಫ್ (22) ಬಂಧಿತರು. ಅವರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಡ್ರಗ್ಸ್‌ ಜಪ್ತಿ ಮಾಡಲಾಗಿದೆ.

‘ಜಾಲದ ಸದಸ್ಯರು ವಿಮಾನದ ಮೂಲಕವೇ ಡ್ರಗ್ಸ್‌ ತಂದು ಮಾರಾಟ ಮಾಡುತ್ತಿದ್ದರು. ಆ ಬಗ್ಗೆ ಮಾಹಿತಿ ಬರುತ್ತಿದ್ದಂತೆ ವಿಶೇಷ ಕಾರ್ಯಾಚರಣೆ ನಡೆಸಲಾಯಿತು. ಕೆಂಪೇಗೌಡ ವಿಮಾನ ನಿಲ್ದಾಣ ರಸ್ತೆಯಲ್ಲಿ ಇದೇ 15ರಂದು ಆರೋಪಿಗಳ ಕಾರೊಂದನ್ನು ತಡೆದು ತಪಾಸಣೆ ಮಾಡಲಾಯಿತು. ಕಾರಿನಲ್ಲಿದ್ದ ಬಾಕ್ಸ್‌ಗಳಲ್ಲಿ ಸ್ಯಾನಿಟರಿ ನ್ಯಾಪ್ಕಿನ್‌ ಇದ್ದವು. ಅವುಗಳನ್ನು ಬಿಚ್ಚಿ ನೋಡಿದಾಗ ಡ್ರಗ್ಸ್‌ ಇರುವುದು ಗೊತ್ತಾಯಿತು’ ಎಂದು ಎನ್‌ಸಿಬಿ ಅಧಿಕಾರಿಯೊಬ್ಬರು ಹೇಳಿದರು.

‘ತಾಹೀರ್‌ ಹಾಗೂ ಅಫ್ಜಲ್‌ನನ್ನು ಬಂಧಿಸಿ, ಅವರಿಬ್ಬರು ವಾಸವಿದ್ದ ಆಸ್ಟಿನ್ ಟೌನ್‌ ಬಳಿಯ ಲಿಂಡೋನ್ ಸ್ಟ್ರೀಟ್‌ನಲ್ಲಿರುವ ಮನೆ ಮೇಲೂ ದಾಳಿ ಮಾಡಿ ಡ್ರಗ್ಸ್‌ ಜಪ್ತಿ ಮಾಡಲಾಯಿತು. ಆರೋಪಿಗಳಿಗೆ ಡ್ರಗ್ಸ್‌ ಕೊಡಲು ಬರುತ್ತಿದ್ದ ಖುಷ್ಬೊ ಶರ್ಮಾಳನ್ನು ನಿಲ್ದಾಣದಲ್ಲಿ ಬಂಧಿಸಲಾಯಿತು. ಆಕೆ ನೀಡಿದ ಮಾಹಿತಿಯಂತೆ ಜಾಲದ ಕಿಂಗ್‌ಪಿನ್‌ ಮಂಗಳೂರಿನ ಮೊಹಮ್ಮದ್ ಆಸಿಫ್‌ ಸೆರೆ ಹಿಡಿಯಲಾಯಿತು’ ಎಂದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !