ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಾಪಾರ ವೀಸಾದಡಿ ಬಂದು ಡ್ರಗ್ಸ್ ಮಾರಾಟ

Last Updated 25 ನವೆಂಬರ್ 2019, 18:23 IST
ಅಕ್ಷರ ಗಾತ್ರ

ಬೆಂಗಳೂರು: ವ್ಯಾಪಾರ ವೀಸಾದಡಿ ನಗರಕ್ಕೆ ಬಂದು ಡ್ರಗ್ಸ್ ಮಾರಾಟ ಮಾಡುತ್ತಿದ್ದ ಆರೋಪದಡಿ ನೈಜೀರಿಯಾದ ನಾನ್ಸೊ ಜೋಹಚಿನ್ ಅಲಿಯಾಸ್ ಜಾನ್ (34) ಎಂಬಾತನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

‘ರಾಮಮೂರ್ತಿನಗರ ಠಾಣೆ ವ್ಯಾಪ್ತಿಯ ಹೊರಮಾವು ಬಳಿಯ ಕೆಎನ್‌ಎಸ್‌ಎಸ್‌ ಲೇಔಟ್‌ನಲ್ಲಿ ವಾಸವಿದ್ದ ಆರೋಪಿಯ ಮನೆ ಮೇಲೆ ಭಾನುವಾರ ದಾಳಿ ಮಾಡಲಾಯಿತು. ₹5 ಲಕ್ಷ ಮೌಲ್ಯದ 28 ಗ್ರಾಂ ಕೊಕೇನ್ ಹಾಗೂ 10 ಎಲ್ಎಸ್‌ಡಿ ಮಾತ್ರೆಗಳು ಮನೆಯಲ್ಲಿ ಸಿಕ್ಕವು. ಆತನ ಕಾರು ಹಾಗೂ ಮೊಬೈಲ್ ಸಹ ಜಪ್ತಿ ಮಾಡಲಾಗಿದೆ’ ಎಂದು ಸಿಸಿಬಿ ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT