‘ಯಾಬಾ’ ಮಾತ್ರೆ ಮಾರುತ್ತಿದ್ದ ವ್ಯಕ್ತಿ ಬಂಧನ

7

‘ಯಾಬಾ’ ಮಾತ್ರೆ ಮಾರುತ್ತಿದ್ದ ವ್ಯಕ್ತಿ ಬಂಧನ

Published:
Updated:
Deccan Herald

ಬೆಂಗಳೂರು: ಮತ್ತು ತರಿಸುವ ‘ಯಾಬಾ’ ಮಾತ್ರೆಗಳನ್ನು ಮಾರುತ್ತಿದ್ದ ಮೊಹಮದ್ ಅಬ್ದುಲ್ ರೆಹಮಾನ್ (25) ಎಂಬಾತನನ್ನು ಬಂಧಿಸಿರುವ ಸಿಸಿಬಿ ಪೊಲೀಸರು, ₹ 3.2 ಲಕ್ಷ ಮೌಲ್ಯದ 335 ಮಾತ್ರೆಗಳನ್ನು ಜಪ್ತಿ ಮಾಡಿದ್ದಾರೆ.

ಕೋಲ್ಕತ್ತದ ರೆಹಮಾನ್, ಒಂದೂವರೆ ವರ್ಷದ ಹಿಂದೆ ನಗರಕ್ಕೆ ಬಂದು ಬೇಗೂರು ಸಮೀಪದ ವಿಶ್ವಪ್ರಿಯನಗರದಲ್ಲಿ ನೆಲೆಸಿದ್ದ. ಕೋಲ್ಕತ್ತದ ಡ್ರಗ್ಸ್‌ ಜಾಲದ ಸಂಪರ್ಕ ಬೆಳೆಸಿಕೊಂಡಿದ್ದ ಆತ, ಪಾರ್ಸಲ್‌ ಮೂಲಕ ಮಾತ್ರೆಗಳನ್ನು ತರಿಸಿಕೊಂಡು ಇಲ್ಲಿನ ಯುವಕ–ಯುವತಿಯರಿಗೆ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದರು.

ಬುಧವಾರ ಮಧ್ಯಾಹ್ನ ಆರೋಪಿ ಬೇಗೂರಿನ ಕಾಲೇಜುವೊಂದರ ಬಳಿ ಮಾತ್ರೆಗಳನ್ನು ಮಾರುತ್ತಿದ್ದ.

ಈ ಬಗ್ಗೆ ದೊರೆತ ಖಚಿತ ಮಾಹಿತಿ ಆಧರಿಸಿ ದಾಳಿ ಮಾಡಿದಾಗ, 335 ಮಾತ್ರೆಗಳ ಸಮೇತ ಸಿಕ್ಕಿಬಿದ್ದ. ಥಾಯ್ಲೆಂಡ್, ಮ್ಯಾನ್ಮಾರ್ ಹಾಗೂ ಬಾಂಗ್ಲಾದೇಶದಿಂದ ಈ ‘ಯಾಬಾ’ ಪ್ರಪಂಚದ ಮೂಲೆ ಮೂಲೆಗೂ ಸರಬರಾಜಾಗುತ್ತದೆ ಎಂದು ಮಾಹಿತಿ ನೀಡಿದರು.

ರೆಹಮಾನ್ ವರ್ಷದ ಹಿಂದೆ ದರೋಡೆ ಪ್ರಕರಣದಲ್ಲಿ ಬಂಧಿತನಾಗಿ ಜೈಲು ಸೇರಿದ್ದ. ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ, ಡ್ರಗ್ಸ್ ದಂಧೆಗೆ ಇಳಿದಿದ್ದ. ಒಂದು ‘ಯಾಬಾ’ ಮಾತ್ರೆಗೆ ₹ 600 ರಿಂದ ₹ 900 ಬೆಲೆ ಇದೆ. ರೆಹಮಾನ್ ಸಹಚರ ಸಮೀತ್ ತಲೆಮರೆಸಿಕೊಂಡಿದ್ದು, ಶೋಧ ಕಾರ್ಯ ನಡೆಯುತ್ತಿದೆ ಎಂದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !