ಬಿಬಿಎಂಪಿಯ ರಿಜಿಸ್ಟರ್‌ಗಳಲ್ಲಿರುವ ಎಲ್ಲ 21 ಲಕ್ಷ ಖಾತಾಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ. ಇದರ ಮುಂದಿನ ಭಾಗವಾಗಿ, ಜಿಪಿಎಸ್‌ನಲ್ಲಿ ಆಸ್ತಿಯ ಅಕ್ಷಾಂಶ, ರೇಖಾಂಶವನ್ನು ಸೆರೆಹಿಡಿಯಲು ಬಿಬಿಎಂಪಿ ಸಿಬ್ಬಂದಿ ಆಸ್ತಿ–ಕಟ್ಟಡಗಳಿಗೆ ಭೇಟಿ ನೀಡಲಿದ್ದಾರೆ. ಇ–ಖಾತಾ ನೀಡಲು ಆಸ್ತಿಯ ಜಿಪಿಎಸ್ ವಿವರಗಳು ಹಾಗೂ ಚಿತ್ರ ಕಡ್ಡಾಯವಾಗಿರುತ್ತದೆ ಎಂದು ಹೇಳಿದ್ದಾರೆ.