ಇನ್ನು ಆನ್‌ಲೈನ್‌ನಲ್ಲಿ ಇ-ಸ್ಟಾಂಪ್ ಮುದ್ರಾಂಕ ಕಾಗದ

7
‘ಕಾವೇರಿ ಆನ್‍ಲೈನ್’ ಸೇವೆ ಅಭಿವೃದ್ಧಿ

ಇನ್ನು ಆನ್‌ಲೈನ್‌ನಲ್ಲಿ ಇ-ಸ್ಟಾಂಪ್ ಮುದ್ರಾಂಕ ಕಾಗದ

Published:
Updated:

ಬೆಂಗಳೂರು: ರಾಜ್ಯದಲ್ಲಿ ಕರಾರು ಪತ್ರ ಮತ್ತು ಪ್ರಮಾಣ ಪತ್ರಗಳಿಗೆ ಆನ್‍ಲೈನ್ ಮೂಲಕ ಮುದ್ರಾಂಕ ಶುಲ್ಕ ಪಾವತಿಸಿ ಇ-ಸ್ಟಾಂಪ್ ಕಾಗದವನ್ನು ಮನೆಯಿಂದಲೇ ಮುದ್ರಿಸುವ ಸೌಲಭ್ಯವನ್ನು ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಲಿ. (ಎಸ್‌ಎಚ್‌ಸಿಎಲ್‌) ಸಹಯೋಗದಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಕಲ್ಪಿಸಿದೆ.

ಸ್ಥಿರಾಸ್ತಿಗಳ ಹಸ್ತಾಂತರ, ಅಡಮಾನ, ಭೋಗ್ಯ ಮತ್ತು ಅಧಿಕಾರ ಪತ್ರ ನೋಂದಣಿಗೆ ಸಂಬಂಧಿಸಿದ ಸೇವೆಗಳನ್ನು ಸರಳಗೊಳಿಸಲು ಇಲಾಖೆ ‘ಕಾವೇರಿ ಆನ್‍ಲೈನ್’ ಸೇವೆಯನ್ನು ಅಭಿವೃದ್ಧಿಪಡಿಸಿದೆ.

ಸ್ಥಿರಾಸ್ತಿಗಳ ಋಣಭಾರ ಪ್ರಮಾಣ ಪತ್ರ ಮತ್ತು ನೋಂದಾಯಿತ ದಸ್ತಾವೇಜುಗಳ ದೃಢೀಕೃತ ನಕಲು ಪ್ರತಿಗಳನ್ನು ಆನ್‍ಲೈನ್ ಮೂಲಕ ಪಡೆಯಬಹುದು. ಡಿಜಿಟಲ್ ಸಹಿ ಮಾಡಿದ ಋಣಭಾರ ಪ್ರಮಾಣ ಪತ್ರ ಪಡೆಯಲು ಜನ ಸೂಕ್ತ ಶುಲ್ಕ ಪಾವತಿಸಬೇಕು ಎಂದೂ ಇಲಾಖೆ ಮೂಲಗಳು ತಿಳಿಸಿವೆ.

ಆಸ್ತಿಯ ವಿವರಗಳನ್ನು ತಂತ್ರಾಂಶದಲ್ಲಿ ನಮೂದಿಸಿ, ಮಾರ್ಗಸೂಚಿ ಮೌಲ್ಯ ಲೆಕ್ಕ ಮಾಡಬಹುದು. ಸ್ಥಿರಾಸ್ತಿಯ ಮಾರ್ಗಸೂಚಿ ಮೌಲ್ಯ ತಿಳಿಯಲು ಅನುಕೂಲವಾಗುವಂತೆ, ಮೌಲ್ಯ ಎಂಬ ಹೆಸರಿನ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ದಸ್ತಾವೇಜಿಗೆ
ತಗಲುವ ಶುಲ್ಕವನ್ನು ಆನ್‍ಲೈನ್ ಮೂಲಕ ಪಾವತಿಸಿದರೆ ನೋಂದಣಿ ಪ್ರಕ್ರಿಯೆಗಾಗಿ ಮುಂಗಡವಾಗಿ ದಿನ ನಿಗದಿಪಡಿಸಬಹುದಾಗಿದೆ. ರಾಜ್ಯದ ಎಲ್ಲ 250 ಉಪ ನೋಂದಣಿ ಕಚೇರಿಗಳ ಮಾಹಿತಿಯು ಆನ್‍ಲೈನ್ ಪೋರ್ಟಲ್‍ನಲ್ಲಿ ಲಭ್ಯವಿದೆ ಎಂದೂ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !