ನಗರದಲ್ಲಿ ಇ–ತ್ಯಾಜ್ಯ ಮರುಬಳಕೆ ಘಟಕ

7

ನಗರದಲ್ಲಿ ಇ–ತ್ಯಾಜ್ಯ ಮರುಬಳಕೆ ಘಟಕ

Published:
Updated:

ಬೆಂಗಳೂರು: ದೇಶದ ಮೊದಲ ಇ–ತ್ಯಾಜ್ಯ (ಎಲೆಕ್ಟ್ರಿಕಲ್‌ ಮತ್ತು ಎಲೆಕ್ಟ್ರಾನಿಕ್‌ ಉಪಕರಣಗಳ ತ್ಯಾಜ್ಯ) ಮರುಸಂಸ್ಕರಣೆ ಘಟಕವನ್ನು ಮುಂದಿನ ನಾಲ್ಕು ತಿಂಗಳ ಒಳಗೆ ನಗರದಲ್ಲಿ ಸ್ಥಾಪಿಸಲಾಗುವುದು ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಅನಂತಕುಮಾರ್‌ ತಿಳಿಸಿದ್ದಾರೆ.

ಸ್ವಚ್ಛ ಭಾರತ ಅಭಿಯಾನದಂತೆಯೇ ಇದನ್ನೂ ಅನುಷ್ಠಾನಗೊಳಿಸಲಾಗುವುದು. ಈ ಯೋಜನೆಯನ್ನು ಇ–ಸ್ವಚ್ಛ ಅಭಿಯಾನ ಎಂದು ಕರೆಯಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಇ– ತ್ಯಾಜ್ಯ ನಿರ್ವಹಣೆ ವೇಗವಾಗಿ ಬೆಳೆಯುತ್ತಿರುವ ಕ್ಷೇತ್ರ. 2016ರಲ್ಲಿ 4.47 ಕೋಟಿ ಟನ್‌ಗಳಷ್ಟು ಇ– ತ್ಯಾಜ್ಯ ಉತ್ಪಾದನೆ ಆಗುತ್ತಿತ್ತು. ಇದು 2021ರ ವೇಳೆಗೆ ಶೇ 17ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಜಗತ್ತಿನಲ್ಲಿ ಪ್ರತಿದಿನ 4,16,000 ಮೊಬೈಲ್‌ ಸೆಟ್‌ಗಳನ್ನು ಹಾಗೂ 1,42000 ಕಂಪ್ಯೂಟರ್‌ಗಳನ್ನು ವ್ಯರ್ಥವಾಗಿ ಎಸೆಯುವುದು ಅಥವಾ ಮರುಬಳಕೆಗೆ ಕಳುಹಿಸುವುದು ನಡೆಯುತ್ತಿದೆ. ‘ಅಸೋಚಾಂ’ ಸಮೀಕ್ಷೆ ಪ್ರಕಾರ ಭಾರತ ಇ– ತ್ಯಾಜ್ಯ ಉತ್ಪಾದಿಸುವಲ್ಲಿ ವಿಶ್ವದ ಮೊದಲ ಐದು ರಾಷ್ಟ್ರಗಳ ಪೈಕಿ ಸ್ಥಾನ ಪಡೆದಿದೆ.

185 ಕೋಟಿ ಟನ್‌ ಇ– ತ್ಯಾಜ್ಯ ದೇಶದಲ್ಲಿ ಉತ್ಪಾದನೆ ಆಗುತ್ತಿದೆ. ಇದರಲ್ಲಿ ಶೇ 70ರಷ್ಟು ಕಂಪ್ಯೂಟರ್‌ ಉಪಕರಣಗಳ ಕೊಡುಗೆ ಇದೆ ಎಂದು ಅವರು ಹೇಳಿದ್ದಾರೆ. 2020ರ ವೇಳೆಗೆ ದೇಶದಲ್ಲಿ ಇ– ತ್ಯಾಜ್ಯಗಳ ಪ್ರಮಾಣ 52 ಲಕ್ಷ ಟನ್‌ಗಳಿಗೆ ಏರುವ ಸಾಧ್ಯತೆ ಇದೆ. ಸದ್ಯ ದೇಶದಲ್ಲಿ ಶೇ 1.5ರಷ್ಟು ಮಾತ್ರ ಇ–ತ್ಯಾಜ್ಯ ಮರುಬಳಕೆಯಾಗುತ್ತಿವೆ. ಅದಕ್ಕಾಗಿ ಮರುಬಳಕೆ ಘಟಕಗಳನ್ನು ಹೆಚ್ಚಿಸಲು ಒತ್ತು ನೀಡಬೇಕಾಗುತ್ತದೆ ಎಂದರು. 

ಕೇಂದ್ರೀಯ ಪ್ಲಾಸ್ಟಿಕ್‌ ಎಂಜಿನಿಯರಿಂಗ್‌ ಮತ್ತು ತಾಂತ್ರಿಕ ಸಂಸ್ಥೆಯು ಮರುಬಳಕೆ ಸಂಬಂಧಿಸಿದ ತಂತ್ರಜ್ಞಾನ ಅಭಿವೃದ್ಧಿಪಡಿಸಿದೆ. ಮರುಬಳಕೆ ತ್ಯಾಜ್ಯವನ್ನು ಮೌಲ್ಯವರ್ಧಿತ ಉತ್ಪನ್ನಗಳಾಗಿ ಮಾಡಿ ಮತ್ತೆ ವಿದ್ಯುತ್‌ ಮತ್ತು ವಿದ್ಯುನ್ಮಾನ ಉಪಕರಣಗಳಲ್ಲಿ ಬಳಸಲು ಅನುಕೂಲವಾಗಿಸಬೇಕಿದೆ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !