ಸೋಮವಾರ, ನವೆಂಬರ್ 18, 2019
25 °C

ಆರ್ಥಿಕ ಹಿಂಜರಿತ:ನವೆಂಬರ್ 11ಕ್ಕೆ ಬೆಂಗಳೂರಿನಲ್ಲಿ ಕಾಂಗ್ರೆಸ್ ಪ್ರತಿಭಟನೆ

Published:
Updated:

ಬೆಂಗಳೂರು: ಆರ್ಥಿಕ ಹಿಂಜರಿಕೆ ಸಂಬಂಧ ಕೇಂದ್ರದ ಉದಾಸೀನ ಹೇಳಿಕೆ ಕುರಿತು ನವೆಂಬರ್ 11ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ. 

ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಕರೆದಿದ್ದ ಪಕ್ಷದ ಹಿರಿಯರ ಸಭೆಯ ನಂತರ ಸುದ್ದಿಗಾರರೊಂದಿಗೆ ಈ ವಿಷಯ ತಿಳಿಸಿದರು. ನಗರದ ಟೌನ್ ಹಾಲ್ ಬಳಿ ಪ್ರತಿಭಟನೆ ಹಾಗೂ ಧರಣಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಆರ್ಥಿಕ ಹಿಂಜರಿತದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ದಿನೇಶ್ ಹೇಳಿದರು.

ಉದ್ಯಮಗಳು ಮುಚ್ಚುತ್ತಿವೆ, ಆಟೋ ಇಂಡಸ್ಟ್ರಿ ಕುಸಿಯುತ್ತಿದೆ, ಕೇಂದ್ರ ನಿರ್ಮಲಾ ಸೀತಾರಾಮನ್ ಉದಾಸೀನ ಹೇಳಿಕೆ ನೀಡುತ್ತಾರೆ. ಇದನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಗುವುದು ಎಂದರು. ಈ ಪ್ರತಿಭಟನೆಗೆ ಎಲ್ಲಾ ಹಿರಿಯ ನಾಯಕರು ಪಾಲ್ಗೊಳ್ಳಲಿದ್ದಾರೆ. ಆರ್ಥಿಕ ಹಿಂಜರಿತದ ಕುರಿತು ಈಗಾಗಲೇ ಈಗಾಗಲೇ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಯುತ್ತಿವೆ ಎಂದರು.

 ವೈದ್ಯರ ಮುಷ್ಕರ ಕುರಿತು ಸರ್ಕಾರ ಮಧ್ಯೆ ಪ್ರವೇಶಿಸಬೇಕು

ಮಿಂಟೋ ಆಸ್ಪತ್ರೆ ವೈದ್ಯರ ಮುಷ್ಕರ ಪ್ರಕರಣ ಸಂಬಂಧ ಸರ್ಕಾರ ಮಧ್ಯಪ್ರವೇಶ ಮಾಡಿ ಸಮಸ್ಯೆ ಬಗೆಹರಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆಗ್ರಹಿಸಿದ್ದಾರೆ. ವೈದ್ಯರು ಸರ್ಕಾರಿ ಸೇವಕರು, ಡಿಸಿಎಂ ಅವರ ಜವಾಬ್ದಾರಿ ಮಾಡುತ್ತಿಲ್ಲ. ಅವರೇ ಅಸಹಾಯಕರಾದರೆ ಹೇಗೆ, ವೈದ್ಯರಿಗೆ ಮುಷ್ಕರ ಮಾಡುವ ಹಕ್ಕಿದೆ, ಆದರೂ ಮಾನವೀಯತೆ ದೃಷ್ಟಿಯಿಂದ ವೈದ್ಯರು ನೋಡಬೇಕು, ಸಮಸ್ಯೆ ಏನಿದೆ ಅನ್ನೋದನ್ನ ಸರ್ಕಾರ ಗುರುತಿಸಬೇಕು ಎಂದಿದ್ದಾರೆ.

 

 

ಪ್ರತಿಕ್ರಿಯಿಸಿ (+)