‘ಮುಸ್ಲಿಂ ಕುಟುಂಬದಲ್ಲಿ ಒಬ್ಬರಿಗೆ ಉನ್ನತ ಶಿಕ್ಷಣ ಸಿಗಬೇಕು’

7

‘ಮುಸ್ಲಿಂ ಕುಟುಂಬದಲ್ಲಿ ಒಬ್ಬರಿಗೆ ಉನ್ನತ ಶಿಕ್ಷಣ ಸಿಗಬೇಕು’

Published:
Updated:
Deccan Herald

ಬೆಂಗಳೂರು: ‘ಪ್ರತಿಯೊಂದು ಮುಸ್ಲಿಂ ಕುಟುಂಬದಲ್ಲಿ ಒಬ್ಬರಿಗೆ ಉನ್ನತ ಶಿಕ್ಷಣ ಸಿಕ್ಕರೆ ಸಾಕಷ್ಟು ಬದಲಾವಣೆ ಕಾಣಬಹುದು’ ಎಂದು ಅಖಿಲ ಭಾರತ ಇಸ್ಲಾಮಿಕ್‌ ಶೈಕ್ಷಣಿಕ ಮಂಡಳಿಯ ಪ್ರಧಾನ ಕಾರ್ಯದರ್ಶಿ ಎಸ್‌.ಎಸ್‌.ಎ ಖಾದರ್‌ ಹೇಳಿದರು.

ಕರ್ನಾಟಕ ರಾಜ್ಯ ಸುನ್ನಿ ವಿದ್ಯಾರ್ಥಿಗಳ ಸಂಸ್ಥೆ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಭಾನುವಾರ ಆಯೋಜಿಸಿದ್ದ ‘ಪ್ರಜಾಪ್ರಭುತ್ವ ಭಾರತ: ಸವಾಲುಗಳು ಮತ್ತು ಸಮಸ್ಯೆಗಳು’ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

‘ಪಾಕಿಸ್ತಾನ ಸೇರಿದಂತೆ ಜಗತ್ತಿನ ಇತರ ಇಸ್ಲಾಂ ರಾಷ್ಟ್ರಗಳಲ್ಲಿ ಮುಸ್ಲಿಮರನ್ನೇ ಕೊಲ್ಲಲಾಗುತ್ತಿದೆ. ಬೌದ್ಧಿಕ ಅಸ್ಮಿತೆಯನ್ನು ಕಂಡುಕೊಳ್ಳುವುದೇ ಇದಕ್ಕೆಲ್ಲಾ ಪರಿಹಾರ. ನಮ್ಮ ಸಮುದಾಯದವರು ಎಲ್ಲವನ್ನೂ ಭಾವನಾತ್ಮಕವಾಗಿ ನೋಡುವುದನ್ನು ಬಿಡಬೇಕು. ಶಿಕ್ಷಣದ ಕಡೆಗೆ ಮುಖಮಾಡಿದರೆ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಗಲಿದೆ’ ಎಂದು ಅವರು ಅಭಿಪ್ರಾಯಪಟ್ಟರು.

‘ಭಾರತದಲ್ಲಿ ಪ್ರತಿ ಐವರಲ್ಲಿ ಒಬ್ಬರು ಮುಸ್ಲಿಮರಿದ್ದಾರೆ. ಹಾಗಾಗಿ ನಮ್ಮನ್ನು ಕಡೆಗಣಿಸಲು ಸಾಧ್ಯವಿಲ್ಲ. ಇಲ್ಲಿರುವಷ್ಟು ಸೌಹಾರ್ದ, ಸಮಾನತೆ ಜಗತ್ತಿನ ಬೇರೆ ದೇಶಗಳಲ್ಲಿ ಕಾಣಲು ಸಾಧ್ಯವಿಲ್ಲ’ ಎಂದರು.

ಚಕ್ರವರ್ತಿ ಸೂಲಿಬೆಲೆ, ‘ನಾವು ನಮ್ಮ ಸಂಪ್ರದಾಯವನ್ನು ಬಿಡುವುದಿಲ್ಲ, ಮುಸ್ಲಿಮರು ನಿಮ್ಮ ಸಂಪ್ರದಾಯ ಬಿಡಬೇಡಿ, ಇದೇ ಪ್ರಜಾಪ್ರಭುತ್ವ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳು ಚುನಾವಣೆ ಸಂದರ್ಭದಲ್ಲಿ ಕಚ್ಚಾಡುತ್ತಿದ್ದವು. ಸರ್ಕಾರ ಮಾಡುವಾಗ ಒಂದಾದವು. ನಾವು ಯಾಕೆ ಒಂದಾಗಿ ದೇಶ ಕಟ್ಟಬಾರದು?’ ಎಂದರು.

 

ಬರಹ ಇಷ್ಟವಾಯಿತೆ?

 • 15

  Happy
 • 1

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !