ಬೆಂಗಳೂರು: ಹೊಂಗನೂರು ಕರ್ನಾಟಕ ಪಬ್ಲಿಕ್ ಶಾಲೆ ವ್ಯಾಪ್ತಿಗೆ ಬರುವ ಏಳು ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ಕೆಪಿಎಸ್ ಮ್ಯಾಗ್ನೆಟಿಕ್ ಶಾಲಾ ಯೋಜನೆಯಡಿ ವಿಲೀನ ಮಾಡಿರುವ ಕಾರಣ, ಮ್ಯಾಗ್ನೆಟಿಕ್ ಶಾಲೆಗೆ ಬಾರದ ಐದು ಶಾಲೆಗಳ ವಿದ್ಯಾರ್ಥಿಗಳ ವರ್ಗಾವಣೆ ಪತ್ರಗಳನ್ನು (ಟಿ.ಸಿ) ಪೋಷಕರಿಗೆ ನೀಡುವಂತೆ ಶಾಲಾ ಶಿಕ್ಷಣ ಇಲಾಖೆಯ ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಆದೇಶ ಹೊರಡಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಮಾಡಲಾಗಿದ್ದು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಚನ್ನಂಕೇಗೌಡನ ದೊಡ್ಡಿಯಿಂದ ಇಬ್ಬರು ವಿದ್ಯಾರ್ಥಿಗಳು, ಸಂತೇಮೊಗೇನಹಳ್ಳಿ ದೊಡ್ಡಿಯಿಂದ ಐದು ವಿದ್ಯಾರ್ಥಿಗಳು ಮಾತ್ರ ಮ್ಯಾಗ್ನೆಟಿಕ್ ಶಾಲೆಗೆ ಬರುತ್ತಿದ್ದಾರೆ. ಹೊಡಿಕೆ ಹೊಸಹಳ್ಳಿ, ಕನ್ನೀದೊಡ್ಡಿ, ಅಮ್ಮಳ್ಳಿದೊಡ್ಡಿ, ಸಂತೆ ಮೊಗೇನಹಳ್ಳಿ, ಸುಣ್ಣಘಟ್ಟ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳ ಶಿಕ್ಷಕರು, ಮ್ಯಾಗ್ನೆಟಿಕ್ ಶಾಲೆಯ ಉದ್ದೇಶ, ಪ್ರಯೋಜನ ಹಾಗೂ ಸೌಲಭ್ಯದ ಬಗ್ಗೆ ಪೋಷಕರಿಗೆ ಮನವರಿಕೆ ಮಾಡಿಕೊಡುವಲ್ಲಿ ವಿಫಲರಾಗಿದ್ದಾರೆ ಎಂದು ಆದೇಶದಲ್ಲಿ ಹೇಳಿದ್ದಾರೆ.

ಇದೇ 11ರೊಳಗೆ ಪೋಷಕರ ಮನವೊಲಿಸಿ, ಟಿ.ಸಿ ಗಳನ್ನು ಪೋಷಕರಿಗೆ ನೀಡುವಂತೆ ಕ್ರಮಕೈಗೊಳ್ಳಬೇಕು. ಇಲ್ಲವಾದಲ್ಲಿ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ಖಂಡನೆ: ಇಲಾಖೆಯ ಈ ನಡೆಯನ್ನು ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ ಆರ್ಗನೈಸೇಷನ್ನ (ಎಐಡಿಎಸ್ಒ) ಕರ್ನಾಟಕ ರಾಜ್ಯ ಸಮಿತಿ ಖಂಡಿಸಿದೆ.

‘ಶಾಲಾ ವಿಲೀನದ ರಾಜ್ಯ ಸರ್ಕಾರದ ಈ ಕ್ರಮವು ಅತ್ಯಂತ ಪ್ರಜಾತಾಂತ್ರಿಕವಲ್ಲದ ಮತ್ತು ಬಡವರ ಶಿಕ್ಷಣ ವಿರೋಧಿ ನೀತಿಯಾಗಿದೆ. ತಮ್ಮ ಮಕ್ಕಳಿಗೆ ಹತ್ತಿರದ ಶಾಲೆಗಳಲ್ಲೇ ಶಿಕ್ಷಣ ಮುಂದುವರೆಯಬೇಕು, ಶಿಕ್ಷಕರು ಸ್ಥಳಾಂತರವಾಗಬಾರದು ಎಂಬ ಪೋಷಕರ ನ್ಯಾಯಯುತವಾದ ಬೇಡಿಕೆಗೆ ಸ್ಪಂದಿಸುವ ಬದಲು, ಸರ್ಕಾರವು ಈಗ ಮತ್ತೊಂದು ಕಟ್ಟುನಿಟ್ಟಿನ ಆದೇಶ ಹೊರಡಿಸುವ ಮೂಲಕ ಜನರ ಧ್ವನಿಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ’ ಎಂದು ಎಐಡಿಎಸ್ಒ ಕರ್ನಾಟಕ ರಾಜ್ಯ ಸಮಿತಿ ಕಾರ್ಯದರ್ಶಿ ಅಜಯ್ ಕಾಮತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಸರ್ಕಾರವು ಕೂಡಲೇ ಈ ವಿಲೀನ ಪ್ರಕ್ರಿಯೆಯನ್ನು ಕೈಬಿಟ್ಟು, ಹಳ್ಳಿ ಶಾಲೆಗಳಲ್ಲಿಯೇ ಗುಣಮಟ್ಟದ ಶಿಕ್ಷಣ ನೀಡಲು ಕ್ರಮವಹಿಸಬೇಕು. ಜನರ ಪ್ರತಿರೋಧವನ್ನು ಅಲಕ್ಷಿಸಿ ಮುಂದುವರಿದಲ್ಲಿ, ಮುಂಬರುವ ದಿನಗಳಲ್ಲಿ ಈ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು’ ಎಂದು ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.