ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಮೆಟ್ರೊ’ದ ಎರಡನೇ ಹಂತ: ಸುರಂಗ ಕೊರೆಯಲು ಎಂಟು ಟಿಬಿಎಂ ಸಿದ್ಧ

ನಮ್ಮ ಮೆಟ್ರೊ: ‘ಭದ್ರಾ’ ಯಂತ್ರ ಶೀಘ್ರ ಕಾರ್ಯಾರಂಭ
Last Updated 19 ಜೂನ್ 2021, 19:31 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮ ಮೆಟ್ರೊ’ದ ಎರಡನೇ ಹಂತದಲ್ಲಿ ಸುರಂಗ ಮಾರ್ಗ ನಿರ್ಮಾಣಕ್ಕಾಗಿ ಸದ್ಯ ಎಂಟು ಸುರಂಗ ಕೊರೆಯುವ ಯಂತ್ರಗಳು (ಟಿಬಿಎಂ) ಕಾರ್ಯಾಚರಣೆಗೆ ಇಳಿದಿವೆ.

ಎರಡನೇ ಹಂತದಲ್ಲಿ ಒಟ್ಟು 14 ಕಿ.ಮೀ. ಉದ್ದದ ಸುರಂಗ ಮಾರ್ಗ ನಿರ್ಮಾಣವಾಗಲಿದೆ. ಎಂಟನೇಯ ‘ಭದ್ರಾ’ ಯಂತ್ರವನ್ನು ಇತ್ತೀಚೆಗಷ್ಟೇ ನೆಲಕ್ಕಿಳಿಸಲಾಗಿದೆ. ಟ್ಯಾನರಿ ರಸ್ತೆಯಿಂದ ನಾಗವಾರ ನಡುವಿನ ವೆಂಕಟೇಶಪುರದ ನೆಲದಡಿಯ ನಿಲ್ದಾಣದಲ್ಲಿ ಈ ಟಿಬಿಎಂ ಕಾರ್ಯಾರಂಭ ಮಾಡಲಿದೆ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ಹೇಳಿದೆ.

ಸುಮಾರು 850 ಮೀಟರ್‌ ಉದ್ದದ ಈ ಮಾರ್ಗದಲ್ಲಿ ಟ್ಯಾನರಿ ರಸ್ತೆ, ವೆಂಕಟೇಶಪುರ, ಕಾಡುಗೊಂಡನಹಳ್ಳಿ ಮತ್ತು ನಾಗವಾರ ನಿಲ್ದಾಣಗಳು ನಿರ್ಮಾಣವಾಗಲಿವೆ.

ಜೂನ್‌ ತಿಂಗಳ ವಾರ್ತಾ ಪತ್ರಿಕೆಯನ್ನು ನಿಗಮವು ಶನಿವಾರ ಪ್ರಕಟಿಸಿದ್ದು, ಅದರಲ್ಲಿ ಈ ಮಾಹಿತಿ ನೀಡಿದೆ.

ಕಾಮಗಾರಿ ಪ್ರಗತಿ:

ಡೇರಿ ವೃತ್ತದಿಂದ ಟ್ಯಾನರಿ ರಸ್ತೆ ನಡುವಿನ 9.28 ಕಿ.ಮೀ. ಮಾರ್ಗದಲ್ಲಿ ಸುರಂಗ ಕಾಮಗಾರಿ ವಿವಿಧ ಹಂತಗಳಲ್ಲಿ ನಡೆಯುತ್ತಿದೆ.

ಕಂಟೋನ್ಮೆಂಟ್‌- ಶಿವಾಜಿನಗರ ಮಧ್ಯೆ ಸುರಂಗ ನಿರ್ಮಿಸುತ್ತಿರುವ ಟಿಬಿಎಂ ಊರ್ಜಾ 576 ರಿಂಗ್‌ಗಳ ಪೈಕಿ 319 ರಿಂಗ್‌ಗಳನ್ನು ನಿರ್ಮಿಸುವ ಕಾರ್ಯಗಳನ್ನು ಪೂರ್ಣಗೊಳಿಸಿದೆ. ಇದೇ ಮಾರ್ಗದಲ್ಲಿ ಕಾರ್ಯಾಚರಣೆಗಿಳಿದಿರುವ ‘ವಿಂಧ್ಯ’ ಸುಮಾರು 254 ರಿಂಗ್‌ಗಳನ್ನು ಪೂರ್ಣಗೊಳಿಸಿದೆ.

ಅದೇ ರೀತಿ, ಶಿವಾಜಿನಗರ-ಎಂ.ಜಿ. ರಸ್ತೆ ಕಡೆಗೆ ಸಾಗುತ್ತಿರುವ ‘ಅವನಿ’ ಯಂತ್ರವು 337 ರಿಂಗ್‌ಗಳನ್ನು ಪೂರ್ಣಗೊಳಿಸಿದೆ. ಇದೇ ಮಾರ್ಗದಲ್ಲಿ ಕಾರ್ಯಾಚರಿಸುತ್ತಿರುವ ‘ಲವಿ’ ಯಂತ್ರ 126 ರಿಂಗ್‌ಗಳನ್ನು ಪೂರೈಸಿದೆ.

ವೆಲ್ಲಾರ ಜಂಕ್ಷನ್‌ನಿಂದ ಲ್ಯಾಂಗ್‌ಫೋರ್ಡ್‌ ರಸ್ತೆ ಮಧ್ಯೆ ಮಾರ್ಚ್‌ನಿಂದ ಸುರಂಗ ಕೊರೆಯುವ ಕಾರ್ಯ ಆರಂಭಿಸಿರುವ ಆರ್‌ಟಿ01 ಟಿಬಿಎಂ 429 ರಿಂಗ್‌ಗಳ ಪೈಕಿ 55 ರಿಂಗ್‌ಗಳನ್ನು (ಶೇ. 13ರಷ್ಟು) ಪೂರ್ಣಗೊಳಿಸಿದೆ ಎಂದು ನಿಗಮವು ವಾರ್ತಾಪತ್ರದಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT