ಬೆಂಗಳೂರು: ಒಂಬತ್ತು ವರ್ಷಗಳಿಂದ ನಿರ್ಮಾಣ ಹಂತದಲ್ಲಿಯೇ ಇರುವ ಈಜಿಪುರ ಮೇಲ್ಸೇತುವೆ ಅಕ್ಟೋಬರ್ ಅಂತ್ಯಕ್ಕೆ ಸಂಚಾರಕ್ಕೆ ಮುಕ್ತವಾಗುವ ಭರವಸೆ ಮೂಡಿದೆ.

ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಈಜಿಪುರ ಮೇಲ್ಸೇತುವೆ ಕಾಮಗಾರಿಗೆ ಹೆಚ್ಚಿನ ವೇಗ ನೀಡಲಾಗಿದ್ದು, ಮೇಲ್ಸೇತುವೆ ಕಾಮಗಾರಿ ಅಕ್ಟೋಬರ್ ಅಂತ್ಯದೊಳಗಾಗಿ ಮುಕ್ತವಾಗಲಿದೆ ಎಂದು ಈಜಿಪುರ ಮೇಲ್ಸೇತುವೆ ಯೋಜನೆಯ ಮುಖ್ಯ ಎಂಜಿನಿಯರ್ ರಾಘವೇಂದ್ರ ಪ್ರಸಾದ್ ಅವರು ಶುಕ್ರವಾರ ತಿಳಿಸಿದರು.

‘ಈಜಿಪುರ-ಕೇಂದ್ರೀಯ ಸದನ ಮೇಲ್ಸೇತುವೆ’ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಸೇಂಟ್ ಜಾನ್ಸ್ ಆಸ್ಪತ್ರೆ ಸಮೀಪದಲ್ಲಿದ್ದ ಅತ್ಯಂತ ಜಟಿಲವಾದ ‘ಪೋರ್ಟಲ್ ಫ್ರೇಮ್’ ನಿರ್ಮಾಣದ ಅಡ್ಡಿಯನ್ನು ಫೆಬ್ರುವರಿಯಲ್ಲಿ ನಿವಾರಿಸಲಾಗಿದೆ. ಈ ನಂತರ ಕಾಮಗಾರಿ ಮತ್ತಷ್ಟು ವೇಗವಾಗಿದೆ’ ಎಂದರು.

‘ಪ್ರಮುಖ ಮೇಲ್ಸೇತುವೆ ಕಾಮಗಾರಿಯನ್ನು ಅಕ್ಟೋಬರ್ ಅಂತ್ಯದೊಳಗಾಗಿ ಪೂರ್ಣಗೊಳಿಸಿದ ಬಳಿಕ, ರ್ಯಾಂಪ್ಗಳು ಹಾಗೂ ಇನ್ನಿತರೆ ಕಾಮಗಾರಿಗಳನ್ನು ನಿಗದಿತ ಅವಧಿಯೊಳಗಾಗಿ ಮುಗಿಸಿ, ಈ ವರ್ಷವೇ ಸಾರ್ವಜನಿಕ ಸಂಚಾರಕ್ಕೆ ಎಲ್ಲ ಮಾರ್ಗಗಳನ್ನೂ ಮುಕ್ತಗೊಳಿಸಲಾಗುವುದು’ ಎಂದು ಮಾಹಿತಿ ನೀಡಿದರು.

ಕಾಮಗಾರಿಯ ಪ್ರಗತಿ: 2017ರ ಮೇ 4ರಂದು ₹203.20 ಕೋಟಿ ವೆಚ್ಚದ 2.38 ಕಿ.ಮೀ ಉದ್ದದ ಮೇಲ್ಸೇತುವೆ ಕಾಮಗಾರಿಯನ್ನು ಸಿಂಪ್ಲೆಕ್ಸ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ಗೆ ವಹಿಸಲಾಗಿತ್ತು. ಆದರೆ, 4 ವರ್ಷ 6 ತಿಂಗಳು ಕಳೆದರೂ ಸಂಸ್ಥೆಯು ಕೇವಲ ಶೇ 42.80ರಷ್ಟು ಭೌತಿಕ ಪ್ರಗತಿ ಮಾತ್ರ ಸಾಧಿಸಿತ್ತು. ಒಟ್ಟು 762 ಸೆಗ್ಮೆಂಟ್ಗಳಲ್ಲಿ ಕೇವಲ 191 (ಶೇ 25.07) ಮಾತ್ರ ನಿರ್ಮಾಣವಾಗಿದ್ದವು. ನಾಲ್ಕು ಕ್ರೇನ್ ಮತ್ತು ಎರಡು ಲಾಂಚಿಂಗ್ ಗರ್ಡರ್ಗಳ ಬದಲು, ಕೇವಲ ಎರಡು ಕ್ರೇನ್ ಮತ್ತು ಒಂದು ಲಾಂಚಿಂಗ್ ಗರ್ಡರ್ ಬಳಸಿ ಕಾಮಗಾರಿಯನ್ನು ನಿಧಾನಗೊಳಿಸಲಾಗಿತ್ತು. ಉಪ ಗುತ್ತಿಗೆದಾರರಿಗೆ ಹಣ ಪಾವತಿಸದ ಪರಿಣಾಮ ಕಾಮಗಾರಿ ಸ್ಥಗಿತಗೊಂಡಿತ್ತು. ಅಂತಿಮವಾಗಿ, ಹೈಕೋರ್ಟ್ ಆದೇಶದ ಮೇರೆಗೆ 2022ರ ಮಾರ್ಚ್ 9ರಂದು ‘ರಿಸ್ಕ್ ಆ್ಯಂಡ್ ಕಾಸ್ಟ್’ ಅಡಿಯಲ್ಲಿ ಗುತ್ತಿಗೆಯನ್ನು ರದ್ದುಪಡಿಸಲಾಯಿತು.

ಮೇಲ್ಸೇತುವೆಯ ಬಾಕಿ ಕಾಮಗಾರಿಗಾಗಿ ಬಿ.ಎಸ್.ಸಿ.ಪಿ.ಎಲ್ ಇನ್ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್ಗೆ 2023ರ ನವೆಂಬರ್ 15ರಂದು ಕಾರ್ಯಾದೇಶ ನೀಡಲಾಯಿತು. ಹೊಸ ಗುತ್ತಿಗೆದಾರರು ಸ್ಥಳದ ವಾಸ್ತವ ಸ್ಥಿತಿಯನ್ನು ಪರಿಶೀಲಿಸಿ, ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸಿಕೊಂಡು ಕಾಮಗಾರಿಯನ್ನು ಪೂರ್ಣಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ.

ಯೋಜನೆಯ ಮುಖ್ಯ ಮಾರ್ಗದ ಕಾಮಗಾರಿಗೆ ಸೇಂಟ್ ಜಾನ್ಸ್ ಆಸ್ಪತ್ರೆ ಸಮೀಪ ‘ಪೋರ್ಟಲ್ ಫ್ರೇಮ್’ ನಿರ್ಮಾಣಕ್ಕಾಗಿ ಭೂಸ್ವಾಧೀನ ಸಮಸ್ಯೆ ಎದುರಾಗಿತ್ತು. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಜಿಬಿಎ ಮುಖ್ಯ ಆಯುಕ್ತ ಸಮಯನ್ವಯ, ನಿರಂತರ ಮೇಲ್ವಿಚಾರಣೆಯಿಂದ ಸೇಂಟ್ ಜಾನ್ ಆಡಳಿತ ಮಂಡಳಿ ತಮ್ಮ ಜಮೀನಿನಲ್ಲಿ ಕಾಮಗಾರಿಗೆ ಅನುಮತಿ ನೀಡಿತು. ಹಲವು ವರ್ಷಗಳಿಂದ ಬಾಕಿ ಉಳಿದಿದ್ದ ಈ ಸಮಸ್ಯೆಗೆ ಫೆಬ್ರುವರಿಯಲ್ಲಿ ಪರಿಹಾರ ದೊರೆಯಿತು ಎಂದು ರಾಘವೇಂದ್ರ ಪ್ರಸಾದ್ ಹೇಳಿದರು.

728 ಸೆಗ್ಮೆಂಟ್ ಅಳವಡಿಕೆ

ಈಜಿಪುರ ಮೇಲ್ಸೇತುವೆಯ ಎಲ್ಲ ಪೈಲ್ಸ್ ಪೈಲ್ ಕ್ಯಾಪ್ಗಳು ಹಾಗೂ ಪಿಯರ್ಸ್ ನಿರ್ಮಾಣ ಪೂರ್ಣಗೊಂಡಿವೆ. ಮುಖ್ಯ ಮಾರ್ಗಕ್ಕೆ ಅಗತ್ಯವಿರುವ ಪೋರ್ಟಲ್ ಬೀಮ್ಗಳ ಸ್ಟೇಜಿಂಗ್ ಕಾಮಗಾರಿ ಪ್ರಗತಿಯಲ್ಲಿದೆ. ಒಟ್ಟು 762 ಸೆಗ್ಮೆಂಟ್ಗಳಲ್ಲಿ 728 ಸೆಗ್ಮೆಂಟ್ಗಳು ಈಗಾಗಲೇ ಕಾಸ್ಟ್ ಆಗಿದ್ದು ಕೇವಲ 15 ಸ್ಪಾನ್ಗಳ ಅಳವಡಿಕೆ ಮಾತ್ರ ಬಾಕಿ ಇದೆ. ಗ್ರೇಡ್ ಮಟ್ಟದ ರಸ್ತೆಯಲ್ಲಿ ಏಕರೂಪ ಪಾದಚಾರಿ ಮಾರ್ಗ ಹಾಗೂ ರಸ್ತೆ ವಿಸ್ತರಣೆ ಅಗಲೀಕರಣಕ್ಕಾಗಿ ಸೇಂಟ್ ಜಾನ್ಸ್ ಆಸ್ಪತ್ರೆಯ ಜಾಗ ಸೇರಿದಂತೆ ಒಟ್ಟು 5998.6 ಚದರ ಮೀಟರ್ ಖಾಸಗಿ/ಸರ್ಕಾರಿ ಜಮೀನು ಹಸ್ತಾಂತರ ಪ್ರಕ್ರಿಯೆಗೆ ಭೂಸ್ವಾಧೀನ ಹಾಗೂ ಸಂಬಂಧಿತ ವಿಭಾಗದಿಂದ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ರಾಘವೇಂದ್ರ ಪ್ರಸಾದ್ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.