ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಕ್ವಾಷ್‌: ಜೋಷ್ನಾಗೆ ಸೋಲು

Last Updated 25 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಎಲ್‌ ಗೌನಾ, ಈಜಿಪ್ತ್‌ (ಪಿಟಿಐ): ಈಜಿಪ್ತ್‌ನಲ್ಲಿ ನಡೆಯುತ್ತಿರುವ ಎಲ್‌ ಗೌನಾ ಅಂತರರಾಷ್ಟ್ರೀಯ ಸ್ಕ್ವಾಷ್‌ ಚಾಂಪಿಯನ್‌ಷಿಪ್‌ನ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಭಾರತದ ಜೋಷ್ನಾ ಚಿಣ್ಣಪ್ಪ ಅವರು ಇಂಗ್ಲೆಂಡ್‌ನ ಲೌರಾ ಮಸ್ಸಾರೊ ವಿರುದ್ಧ ಸೋಲು ಕಂಡಿದ್ದಾರೆ.

ನಾಲ್ಕನೇ ಶ್ರೇಯಾಂಕದ ಲೌರಾ ಮಸ್ಸಾರೊ ಅವರ ವಿರುದ್ಧ 11–4, 11–8, 11–2ರ ನೇರ ಗೇಮ್‌ಗಳಿಂದ 16ನೇ ಶ್ರೇಯಾಂಕದ ಭಾರತದ ಆಟಗಾರ್ತಿ ಸೋತಿದ್ದಾರೆ.

ಲೌರಾ ಅವರು ಮೊದಲ ಗೇಮ್‌ನ ಶುರುವಿನಿಂದಲೇ ಆಕ್ರಮಣಕಾರಿ ಆಟ ಆಡಿದರು. ಚುರುಕಿನ ಡ್ರಾಪ್‌ ಮತ್ತು ಮಿಂಚಿನ ರಿಟರ್ನ್‌ಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿ ಗೇಮ್‌ ಜಯಿಸಿದರು.

ಭಾರತದ ಮತ್ತೊಬ್ಬ ಆಟಗಾರ್ತಿ ದೀಪಿಕಾ ಪಳ್ಳಿಕಲ್‌ ಅವರು ಇದೇ ಚಾಂಪಿಯನ್‌ಷಿಪ್‌ನ ಆರಂಭಿಕ ಸುತ್ತಿನಲ್ಲೇ ಫ್ರಾನ್ಸ್‌ನ ಕ್ಯಾಮಿಲ್ಲೆ ಸೆರ್ಮೆ ವಿರುದ್ಧ ನಿರಾಸೆ ಕಂಡಿದ್ದರು.

ಇತ್ತೀಚೆಗೆ ಮುಕ್ತಾಯಗೊಂಡ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ದೀ‍ಪಿಕಾ ಪಳ್ಳಿಕಲ್ ಹಾಗೂ ಜೋಷ್ನಾ ಅವರು ಡಬಲ್ಸ್‌ ವಿಭಾಗದಲ್ಲಿ ಬೆಳ್ಳಿ ಗೆದ್ದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT