ಬನ್ನೇರುಘಟ್ಟ (ಆನೇಕಲ್): ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿ, ಸಿಂಹ ಧಾಮದಲ್ಲಿ ಚಿಕಿತ್ಸೆ ನೀಡಲು ಹೋದಾಗ ನೀರಾನೆ ದಾಳಿಯಿಂದ ಶುಕ್ರವಾರ ಮೃತಪಟ್ಟ ಪಶುವೈದ್ಯೆ ಡಾ.ಸಮೀಕ್ಷಾ ರೆಡ್ಡಿ ಅಂತ್ಯಕ್ರಿಯೆ ಶನಿವಾರ ಸ್ವಗ್ರಾಮ ತಾಲ್ಲೂಕಿನ ಬನ್ನೇರುಘಟ್ಟ ಸಮೀಪದ ಸಕಲವಾರದಲ್ಲಿ ನಡೆಯಿತು.

ಸಮೀಕ್ಷಾ ರೆಡ್ಡಿ ಪಾರ್ಥಿವ ಶರೀರ ಗ್ರಾಮಕ್ಕೆ ಬಂದಾಗ ಪೋಷಕರು ಮತ್ತು ಸಂಬಂಧಿಕರ ರೋದನ ಮುಗಿಲುಮುಟ್ಟಿತ್ತು. ಗ್ರಾಮದಲ್ಲಿ ನೀರವ ಮೌನ ಕಂಡು ಬಂದಿತು. ಗ್ರಾಮಸ್ಥರು ಅಂತಿಮ ದರ್ಶನ ಪಡೆದರು.

ಏಕೈಕ ಪುತ್ರಿಯನ್ನು ಕಳೆದುಕೊಂಡ ಪೋಷಕರಾದ ಧ್ರುವಕುಮಾರ್ ಮತ್ತು ಶೈಲಜಾ ದಂಪತಿ ಶೋಕಸಾರಗದಲ್ಲಿ ಮುಳಗಿದ್ದರು.

ಪ್ರಾಣಿ, ಪಕ್ಷಿಗಳೆಂದರೆ ಬಾಲ್ಯದಿಂದಲೂ ಅವಳಿಗೆ ಪಂಚಪ್ರಾಣ. ಹಟ ಹಿಡಿದು ಪಶುವೈದ್ಯಳಾಗಿದ್ದಳು. ಅತ್ಯಂತ ಇಷ್ಟಪಟ್ಟು ಪಶು ವೈದ್ಯಕೀಯ ಕೋರ್ಸ್ ಮುಗಿಸಿ ಸಂಭ್ರಮದಿಂದಲೇ ವೃತ್ತಿ ಆರಂಭಿಸಿದ್ದಳು ಎಂದು ಸಂಬಂಧಿಕರು ಕಣ್ಣೀರಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.