ಎಲಿವೇಟೆಡ್ ಕಾರಿಡಾರ್ ವಿರೋಧಿಸಿ ಮನವಿ

6

ಎಲಿವೇಟೆಡ್ ಕಾರಿಡಾರ್ ವಿರೋಧಿಸಿ ಮನವಿ

Published:
Updated:

ಬೆಂಗಳೂರು: ನಗರದಲ್ಲಿ ಎಲಿವೇಟೆಡ್‌ ಕಾರಿಡಾರ್‌ ಯೋಜನೆ ಅನುಷ್ಠಾನ ಮಾಡಬಾರದು ಎಂದು ಒತ್ತಾಯಿಸಿ ‘ಸಿಟಿಜನ್ಸ್ ಫಾರ್ ಬೆಂಗಳೂರು’ ತಂಡದ ಸದಸ್ಯರು ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.

ನಿಯೋಗದಲ್ಲಿ ತಾರಾ ಕೃಷ್ಣಸ್ವಾಮಿ, ಐಐಎಸ್‌ಸಿಯ ಸಾರಿಗೆ ತಜ್ಞ ಪ್ರೊ. ಆಶಿಶ್ ವರ್ಮಾ, ನಟ ಪ್ರಕಾಶ್ ಬೆಳವಾಡಿ ಮತ್ತು ವಾಸ್ತುಶಿಲ್ಪಿ ನರೇಶ್ ನರಸಿಂಹನ್ ಇದ್ದರು.

‘ಈ ಕಾರಿಡಾರ್ ನಗರದ ಸಂಚಾರ ಸಮಸ್ಯೆಯನ್ನು ಪರಿಹರಿಸುವುದಿಲ್ಲ. ಬದಲಾಗಿ ದಟ್ಟಣೆ ಹೆಚ್ಚಿಸುತ್ತದೆ. ಅದರ ಬದಲು ಉಪನಗರದ ರೈಲು, ಮೆಟ್ರೊ, ಬಸ್‌ಗಳ ಸಂಖ್ಯೆ ಹೆಚ್ಚಿಸಲು ಒತ್ತು ನೀಡಬೇಕು’ ಎಂದು ಮನವಿ ಮಾಡಿದರು.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !