ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಜಿನಿಯರಿಂಗ್ ಕಾಲೇಜಿನಲ್ಲಿ ನಾಯಕಿ,  ಕೆಲಸದಲ್ಲಿ ಮಾತ್ರ ಹಿಂದೆ ಏಕೆ?

'ಎಮರ್ಜ್' ಸಮ್ಮೇಳನ 
Last Updated 26 ಸೆಪ್ಟೆಂಬರ್ 2019, 7:35 IST
ಅಕ್ಷರ ಗಾತ್ರ

ಬೆಂಗಳೂರು: ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಉತ್ತೀರ್ಣತೆ ಪ್ರಮಾಣದಲ್ಲಿ ವಿದ್ಯಾರ್ಥಿಯರ ಸಂಖ್ಯೆಯೇ ಅಧಿಕ, ಆದರೆ ಕೆಲಸಕ್ಕೆ ಸೇರುವಾಗ ಮಾತ್ರ ಅವರು ಹಿಂದೆ ಸರಿಯುತ್ತಾರೆ. ಶೇ 18ರಷ್ಟು ಎಂಜಿನಿಯರಿಂಗ್ ವಿದ್ಯಾರ್ಥಿನಿಯರು ಮಾತ್ರ ಇಂದು ಉದ್ಯೋಗದಲ್ಲಿದ್ದಾರೆ ಎಂದು ಅಪೊಲೋ ಆಸ್ಪತ್ರೆ ಗುಂಪಿನ ಜಂಟಿ ವ್ಯವಸ್ಥಾಪಕ ನಿರ್ದೇಶಕಿ ಡಾ. ಸಂಗೀತಾ ರೆಡ್ಡಿ ಹೇಳಿದರು.

ಇಲ್ಲಿ ಗುರುವಾರ 'ಎಮರ್ಜ್' ಸಮ್ಮೇಳನದಲ್ಲಿ ಪ್ರಧಾನ ಭಾಷಣ ಮಾಡಿದ ಅವರು, ಮಹಿಳೆಯರು ಉದ್ಯೋಗ ಮಾಡುವುದು ಮಾತ್ರವಲ್ಲ, ಹೆಚ್ಚು ಹೆಚ್ಚು ಉದ್ಯೋಗ ಸೃಷ್ಟಿಸುವ ಉದ್ಯಮಿಗಳಾಗಬೇಕು ಎಂದರು.

ಈಗಿನ ತಂತ್ರಜ್ಞಾನ ಇನ್ನು 10 ವರ್ಷಗಳಲ್ಲಿ ಇರುವುದಿಲ್ಲ, 10 ವರ್ಷಗಳ ಹಿಂದೆ ಪೇಟಿಎಂ ನಂತಹ ತಂತ್ರಜ್ಞಾನವೇ ಇರಲಿಲ್ಲ. ಜೆರಾಕ್ಸ್ ಇಂದು ತನ್ನ ಮಹತ್ವ ಕಳೆದುಕೊಂಡಿದೆ. ಇಂತಹ ಸೂಕ್ಷ್ಮಗಳನ್ನು ಗಮನಿಸಿಕೊಂಡು ಉದ್ಯಮ ಕ್ಷೇತ್ರಗಳಲ್ಲಿ ನಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.

ಭಾರತದಲ್ಲಿ ಕ್ಯಾನ್ಸರ್‌ನಿಂದ ಬಳಲುವ ಮಹಿಳೆಯರಲ್ಲಿ ಮೂರನೇ ಒಂದರಷ್ಟು ಮಂದಿ ಗರ್ಭ ಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಆದರೆ ಅಮೆರಿಕದಲ್ಲಿ ಈ ಪ್ರಮಾಣ ತೀರಾ ಕಡಿಮೆ ಇದೆ. ಇದಕ್ಕೆ ಕಾರಣ ಅಮೆರಿಕದಲ್ಲಿ ಮಹಿಳೆಯರು ಕ್ಯಾನ್ಸರ್ ಬಗ್ಗೆ ಅರಿವು ಹೊಂದಿರುವುದು ಮತ್ತು ಆರಂಭಿಕ ಹಂತದಲ್ಲೇ ಅದನ್ನು ಪತ್ತೆಹಚ್ಚುವ ವ್ಯವಸ್ಥೆ ಮಾಡಿಕೊಂಡಿರುವುದು. ನಮ್ಮಲ್ಲಿ ಅಂತಹ ಅರಿವು ಇನ್ನೂ ಮೂಡಿಲ್ಲ ಎಂದು ಸಂಗೀತಾ ರೆಡ್ಡಿ ಹೇಳಿದರು.

ಬೆಂಗಳೂರಿನಲ್ಲಿ 13 ವರ್ಷಗಳ ಹಿಂದೆ ಸ್ಥಾಪನೆಯಾದ ಎಂಜಿನಿಯರಿಂಗ್ ಮ್ಯಾನುಫೆಕ್ಚರರ್ಸ್ ಎಂಟರ್‌ಪ್ರಿನ್ಯೂರ್ಸ್‌ ರಿಸೋರ್ಸ್ ಗ್ರೂಪ್ (ಎಮರ್ಜ್) ಸಂಘಟನೆಯ 5ನೇ ವರ್ಷದ ಫೋರ್ಜಿಂಗ್ ಲಿಂಕ್ಸ್ ಲೆವರೇಜಿಂಗ್ ನೆಟ್ ವರ್ಕ್ (ಎಫ್ಎಲ್ಎಲ್ಎನ್) ಸಮ್ಮೇಳನ ಗುರುವಾರ ಆರಂಭವಾಗಿದೆ.

ಸಂಜೆ ಸುಮಾರು 78 ಮಂದಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಮಹಿಳಾ ಉದ್ಯಮಿಗಳ ಸಂಗಮ

ಎಮರ್ಜ್ ಸಂಘಟನೆಯಲ್ಲಿ ಸುಮಾರು 300 ಸದಸ್ಯರಿದ್ದಾರೆ. ವ್ಯಾಪಾರ, ವಹಿವಾಟು, ಉದ್ಯಮದಲ್ಲಿ ಪರಸ್ಪರ ಅನುಭವ ಹಂಚಿಕೊಳ್ಳಲು ವಾಟ್ಸ್ಆ್ಯಪ್ ಗುಂಪು ರಚಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT