ಬೆಂಗಳೂರು: ಮನೆ ಮುಂದೆಯೇ ವಾಹನ ನಿಲ್ಲಿಸಿಕೊಂಡು ಮಹಾರಾಷ್ಟ್ರ, ಆಂಧ್ರ ಪ್ರದೇಶ ಮತ್ತು ಹರಿಯಾಣ ರಾಜ್ಯಗಳ ಹೊಗೆ ತಪಾಸಣೆ ಕೇಂದ್ರಗಳಿಂದ ಪ್ರಮಾಣ ಪತ್ರ ಪಡೆಯುವ ಅಕ್ರಮ ನಡೆಯುತ್ತಿದೆ.

ರಾಷ್ಟ್ರೀಯ ಮಾಹಿತಿ ಕೇಂದ್ರದ (ಎನ್ಐಸಿ) ಲೋಪವನ್ನು ಬಳಸಿಕೊಂಡು, ಕೇವಲ ₹ 50 ಪಾವತಿಸಿ ಹೊಗೆ ತಪಾಸಣೆ ನಡೆಸದೆಯೇ ಕಳ್ಳ ದಾರಿಯಲ್ಲಿ ಪ್ರಮಾಣಪತ್ರ ಪಡೆಯಲಾಗುತ್ತಿದೆ.

ಕರ್ನಾಟಕದಲ್ಲಿ ಹೊಸ ತಂತ್ರಾಂಶವನ್ನು ಪೊಲ್ಯುಷನ್ ಅಂಡರ್ ಕಂಟ್ರೋಲ್ ಸೆಂಟರ್ನಲ್ಲಿ (ಪಿಯುಸಿಸಿ) ಅನುಷ್ಠಾನಗೊಳಿಸಿ ಮಾಲಿನ್ಯ (ಹೊಗೆ) ತಪಾಸಣೆ ಕಟ್ಟುನಿಟ್ಟು ಮಾಡಲಾಗಿತ್ತು. ಹೊಸ ತಂತ್ರಾಂಶವು ವಾಹನ್–4ಕ್ಕೆ ಸಂಯೋಜನೆಗೊಂಡಿರುವುದರಿಂದ ವಾಹನದ ನೋಂದಣಿ ಸಂಖ್ಯೆಯನ್ನು ನಮೂದಿಸಿದ ಕೂಡಲೇ ಎಲ್ಲ ವಿವರಗಳು ಲಭ್ಯವಾಗುತ್ತವೆ. ವಾಯು ಮಾಲಿನ್ಯ ತಪಾಸಣೆ ಯಾವಾಗ ಮಾಡಲಾಗಿದೆ? ಮುಂದೆ ಯಾವಾಗ ಮಾಡಬೇಕು? ಎಂಜಿನ್ ಸ್ಥಿತಿ ಏನು? ವಾಹನಕ್ಕೆ ಎಷ್ಟು ವರ್ಷಗಳಾದವು? ಮಾಲೀಕರು ಯಾರು? ಅವರ ದೂರವಾಣಿ ಸಂಖ್ಯೆ ಸಹಿತ ಎಲ್ಲ ವಿವರಗಳು ಲಭ್ಯವಾಗುತ್ತವೆ. ಮಾಲಿನ್ಯ ಮಟ್ಟ (ನಾರ್ಮ್) ದಾಖಲಾಗುತ್ತದೆ. ತಪಾಸಣೆ ನಡೆಸುವ ಛಾಯಾಚಿತ್ರವೂ ದಾಖಲಾಗುವುದರಿಂದ ವಾಹನಗಳು ತಪಾಸಣಾ ಕೇಂದ್ರಕ್ಕೆ ಬರಲೇಬೇಕು.

ಆದರೆ, ವಾಹನದ ಫೋಟೊವನ್ನು ಮಹಾರಾಷ್ಟ್ರ, ಆಂಧ್ರ ಪ್ರದೇಶ ಮತ್ತು ಹರಿಯಾಣ ರಾಜ್ಯಗಳ ತಪಾಸಣಾ ಕೇಂದ್ರಗಳಿಗೆ ಕಳುಹಿಸಿ ₹ 50 ಪಾವತಿ ಮಾಡಿದರೆ ಐದು ನಿಮಿಷದ ಒಳಗೆ ಪ್ರಮಾಣಪತ್ರ ಕಳುಹಿಸಿಕೊಡುತ್ತಾರೆ. ಇದನ್ನು ಎನ್ಐಸಿಯ ವಾಹನ್–4 ಪೋರ್ಟಲ್ನಲ್ಲಿ ಅಪ್ಲೋಡ್ ಮಾಡಿದರೆ ಸ್ವೀಕೃತವಾಗುತ್ತಿದೆ.

ಸಾರಿಗೆ ಅಧಿಕಾರಿಯ ಕಾರಿಗೂ ಪ್ರಮಾಣಪತ್ರ!: ‘ಕಳ್ಳದಾರಿಯಲ್ಲಿ ಸುಲಭವಾಗಿ ಪ್ರಮಾಣಪತ್ರ ಪಡೆಯಲಾಗುತ್ತಿದೆ ಎಂದು ಎರಡು ದಿನಗಳ ಹಿಂದೆ ಗೊತ್ತಾಯಿತು. ಅದರ ಪತ್ತೆಗೆ ನನ್ನ ಸರ್ಕಾರಿ ಕಾರಿನ ಫೋಟೊ ತೆಗೆದು ಆಂಧ್ರ ಪ್ರದೇಶದ ತಪಾಸಣಾ ಕೇಂದ್ರಕ್ಕೆ ಕಳುಹಿಸಿ ₹ 50 ಪಾವತಿಸಲಾಯಿತು. ಐದು ನಿಮಿಷಕ್ಕೆ ಪ್ರಮಾಣ ಪತ್ರ ಬಂತು’ ಎಂದು ಸಾರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ (ಪರಿಸರ ಮತ್ತು ಇ–ಆಡಳಿತ) ಜ್ಞಾನೇಂದ್ರ ಕುಮಾರ್ ವಿವರ ನೀಡಿದರು.

‘ಸಿನಿಮಾ ನಟರು, ರಾಜಕಾರಣಿಗಳ ವಾಹನಗಳ ಫೋಟೊಗಳನ್ನು ಯಾರೋ ತೆಗೆದು ಕಳುಹಿಸಿ ಪ್ರಮಾಣಪತ್ರ ಪಡೆದಿದ್ದಾರೆ ಎಂದು ಕೆಲವರು ಮಾಹಿತಿ ನೀಡಿದರು. ರಸ್ತೆ ಬದಿಯಲ್ಲಿ ನಿಂತ ಯಾರದ್ದೋ ವಾಹನಗಳ ಫೋಟೊ ತೆಗೆದು ಕಳುಹಿಸಿ ಖಚಿತಪಡಿಸಿಕೊಳ್ಳಬಹುದು ಎಂದೂ ತಿಳಿಸಿದ್ದರು. ಪ್ರಸಿದ್ಧರ ಹೆಸರನ್ನು ಸುಮ್ಮನೆ ಹೇಳುವುದಿದೆ ಎಂಬ ಕಾರಣಕ್ಕೆ ನಾನು ನಂಬದೇ ನನ್ನ ಕಾರನ್ನೇ ಪರೀಕ್ಷಿಸಿದೆ. ಆಗ ಈ ರೀತಿ ಅಕ್ರಮ ನಡೆಯುವುದು ಖಚಿತವಾಯಿತು. ಇದಕ್ಕೆ ರಾಜ್ಯದಲ್ಲಿ ಕಡಿವಾಣ ಹಾಕಲು ಕ್ರಮ ಕೈಗೊಳ್ಳಲಾಗುವುದು’ ಎಂದರು.

Cಕೇಂದ್ರಕ್ಕೆ ಪತ್ರ: ಜ್ಞಾನೇಂದ್ರ ಕುಮಾರ್

‘ಭಾರತ ಸರ್ಕಾರದ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದಡಿ ಕಾರ್ಯನಿರ್ವಹಿಸುವ ಎನ್ಐಸಿ ತಂತ್ರಾಂಶ ಸುರಕ್ಷಿತವಾಗಿಲ್ಲ. ಅದನ್ನು ದುರ್ಬಳಕೆ ಮಾಡಿಕೊಂಡು ಮೂರು ರಾಜ್ಯಗಳಲ್ಲಿ ಪ್ರಮಾಣಪತ್ರ ನೀಡಲಾಗುತ್ತಿದೆ ಎಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗುವುದು. ತಂತ್ರಾಂಶವನ್ನು ಸುರಕ್ಷಿತಗೊಳಿಸಲು ಕೋರಲಾಗುವುದು’ ಎಂದು ಸಾರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ಜ್ಞಾನೇಂದ್ರ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಮಹಾರಾಷ್ಟ್ರ ಹರಿಯಾಣ ಆಂಧ್ರ ಪ್ರದೇಶದ ಹೊಗೆ ತಪಾಸಣೆ ಪ್ರಮಾಣಪತ್ರ ಇರುವ ಕರ್ನಾಟಕದ ವಾಹನಗಳನ್ನು ಮಾನ್ಯ ಮಾಡಬಾರದು. ಅವುಗಳನ್ನು ರಾಜ್ಯದಲ್ಲಿಯೇ ತಪಾಸಣೆಗೆ ಒಳಪಡಿಸಬೇಕು ಎಂದು ಎಲ್ಲ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸೂಚಿಸಲಾಗುವುದು. ಇದಲ್ಲದೇ ಆ ಮೂರು ರಾಜ್ಯಗಳ ಸಾರಿಗೆ ಇಲಾಖೆಗೆ ಪತ್ರ ಬರೆದು ದುರ್ಬಳಕೆಯ ಬಗ್ಗೆ ಗಮನಕ್ಕೆ ತರಲಾಗುವುದು ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.