ಒತ್ತುವರಿ: ₹ 2 ಕೋಟಿ ಮೌಲ್ಯದ ಆಸ್ತಿ ವಶ

6

ಒತ್ತುವರಿ: ₹ 2 ಕೋಟಿ ಮೌಲ್ಯದ ಆಸ್ತಿ ವಶ

Published:
Updated:
Deccan Herald

ಬೆಂಗಳೂರು: ಯಲಹಂಕ ತಾಲ್ಲೂಕು ಅದ್ದೆ ವಿಶ್ವನಾಥಪುರ ಗ್ರಾಮದಲ್ಲಿ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಿದ್ದ ಕಾಂಪೌಂಡ್‌ ತೆರವುಗೊಳಿಸಿದ ತಾಲ್ಲೂಕು ಆಡಳಿತ, ಸುಮಾರು ₹ 2 ಕೋಟಿ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡಿದೆ.

ಅದ್ದೆ ವಿಶ್ವನಾಥಪುರ ಗ್ರಾಮದ ಸರ್ವೇ ನಂ. 69ರಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಮಂಜುನಾಥ್ ಎಂಬುವರು ಜಮೀನನ್ನು ಕಬಳಿಸಿದ ಬಗ್ಗೆ ದೂರು ಬಂದಿತ್ತು.

ಭೂಮಿಯ ಸಮೀಕ್ಷೆ ನಡೆಸಿ 6 ಗುಂಟೆ ಜಮೀನನ್ನು ಸರ್ಕಾರದ ವಶಕ್ಕೆ ಪಡೆಯಲಾಗಿದೆ ಎಂದು ತಹಶೀಲ್ದಾರ್ ಬಿ.ಆರ್.ಮಂಜುನಾಥ್ ತಿಳಿಸಿದರು.

Tags: 

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !