12ನೇ ಮಹಡಿಯಿಂದ ಬಿದ್ದು ದುರ್ಮರಣ

7

12ನೇ ಮಹಡಿಯಿಂದ ಬಿದ್ದು ದುರ್ಮರಣ

Published:
Updated:

ಬೆಂಗಳೂರು: ಮಹದೇವಪುರ ಬಳಿಯ ಹೂಡಿಯಲ್ಲಿ ನಿರ್ಮಿಸಲಾಗುತ್ತಿರುವ ಕಟ್ಟಡದ 12ನೇ ಮಹಡಿಯಿಂದ ಬಿದ್ದು ಶಿವ ಸುನೀಲ್ ಕುಮಾರ್ (24) ಎಂಬ ಎಂಜಿನಿಯರ್ ಮೃತಪಟ್ಟಿದ್ದಾರೆ.

ಹೈದರಾಬಾದ್‌ ನಿವಾಸಿಯಾದ ಅವರು, ಎಂ.ಎಸ್.ಎಲೈಟ್ ಎಂಜಿನಿಯರಿಂಗ್ ಮತ್ತು ಕನ್‌ಸ್ಟ್ರಕ್ಷನ್‌ ಕಂಪನಿಯಲ್ಲಿ  ಕೆಲಸ ಮಾಡುತ್ತಿದ್ದರು. 

‘ಕಂಪನಿ ವತಿಯಿಂದ ಹೂಡಿಯಲ್ಲಿ ಅಪಾರ್ಟ್‌ಮೆಂಟ್ ಸಮುಚ್ಚಯ ನಿರ್ಮಿಸಲಾಗುತ್ತಿದೆ. ಅದೇ ಕಟ್ಟಡದ ಕೆಲಸ ನೋಡಿಕೊಳ್ಳಲು ಶಿವ ಸುನೀಲ್ ಕುಮಾರ್ ಅವರನ್ನು ನೇಮಿಸಲಾಗಿತ್ತು. ಶನಿವಾರ ರಾತ್ರಿ 9.30 ಗಂಟೆ ಸುಮಾರಿಗೆ 12ನೇ ಮಹಡಿಯಲ್ಲಿ ಕಾಂಕ್ರಿಟ್ ಹಾಕುವ ಕೆಲಸ ನಡೆಯುತ್ತಿತ್ತು. ಅಲ್ಲಿಯೇ ನಿಂತು ಕಾರ್ಮಿಕರಿಗೆ ನಿರ್ದೇಶನ ನೀಡುತ್ತಿದ್ದ ಅವರು, ಮಹಡಿಯಿಂದ ಬಿದ್ದಿದ್ದರು. ಕೈ– ಕಾಲು ಹಾಗೂ ತಲೆಗೆ ತೀವ್ರ ಪೆಟ್ಟು ಬಿದ್ದು ಪ್ರಜ್ಞೆ ಕಳೆದುಕೊಂಡಿದ್ದ ಅವರನ್ನು ವೈದೇಹಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ತಪಾಸಣೆ ನಡೆಸಿದ ವೈದ್ಯರು, ಅವರು ಮೃತಪಟ್ಟಿರುವುದಾಗಿ ತಿಳಿಸಿದರು’ ಎಂದು ಪೊಲೀಸರು ಮಾಹಿತಿ ನೀಡಿದರು.

‘ಕೆಲಸದ ಸ್ಥಳದಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಂಡಿರಲಿಲ್ಲ. ಕಂಪನಿಯ ನಿರ್ಲಕ್ಷ್ಯದಿಂದಲೇ ಶಿವ ಸುನೀಲ್ ಕುಮಾರ್ ಮೃತಪಟ್ಟಿದ್ದಾರೆ’ ಎಂದು ಆರೋಪಿಸಿ ತಂದೆ ಎಸ್‌.ಚೆಲ್ಲಾಲಿಂಗಮ್ ದೂರು ನೀಡಿದ್ದಾರೆ. ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಗುರುಸ್ವಾಮಿ, ನಿರ್ದೇಶಕರಾದ ಆರ್ಮುಗಂ, ಶ್ರೀನಿವಾಸ್, ಸುಂದರ್, ಯೋಜನೆ ಮುಖ್ಯಸ್ಥ ರವಿಚಂದ್ರ, ವ್ಯವಸ್ಥಾಪಕ ಪುರುಸೆಲ್ವಂ, ಎಂಜಿನಿಯರಗಳಾದ ಸರವಣ, ಜ್ಞಾನಪ್ರಕಾಶ್ ಹಾಗೂ ವ್ಯವಸ್ಥಾಪಕ ಕುಮಾರ್ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ. ಅವರೆಲ್ಲ ತಲೆಮರೆಸಿಕೊಂಡಿದ್ದಾರೆ’ ಎಂದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !