ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗಾಡ್ಗೀಳ್‌ ವರದಿ ಶಿಫಾರಸು ಜಾರಿಗೆ ಸಕಾಲ: ಪರಿಸರ ತಜ್ಞೆ ವಿಶಾಲಾಕ್ಷಿ

Published : 23 ಆಗಸ್ಟ್ 2024, 17:12 IST
Last Updated : 23 ಆಗಸ್ಟ್ 2024, 17:12 IST
ಫಾಲೋ ಮಾಡಿ
Comments

ಬೆಂಗಳೂರು: ‘ಕೇರಳದ ವಯನಾಡಿನಲ್ಲಿ ನಡೆದ ಭೀಕರ ಭೂಕುಸಿತವು ನಮಗೊಂದು ಎಚ್ಚರಿಕೆ ಗಂಟೆ. ಪಶ್ಚಿಮ ಘಟ್ಟ ಪ್ರದೇಶದ ರಕ್ಷಣೆಗೆ ಮಾಧವ ಗಾಡ್ಗೀಳ್‌ ಅವರ ವರದಿ ಶಿಫಾರಸುಗಳನ್ನು ಅನುಷ್ಠಾನಗೊಳಿಸಲು ಇದು ಸಕಾಲ’ ಎಂದು ಪರಿಸರ ತಜ್ಞೆ ವಿಶಾಲಾಕ್ಷಿ ಒತ್ತಾಯಿಸಿದರು.

ಕಥನ ಕರ್ನಾಟಕವು ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಪತ್ರಕರ್ತ ಆಶಿಕ್‌ ಮುಲ್ಕಿ ಅವರ ‘ವಯನಾಡು: ಸಾವು ಬಂದ ಹೊತ್ತಿಗೆ ಹೇಳದೆ ಉಳಿದ ಸತ್ಯಗಳು’ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಗುಡ್ಡಗಳು ಕುಸಿದು ರಾತ್ರಿ ಬೆಳಗಾಗುವುದರೊಳಗೆ ಅಪಾರ ಜೀವ, ಆಸ್ತಿಪಾಸ್ತಿ ಹಾನಿಯಾಗಿದೆ. ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲೂ ಭೂ ಕುಸಿತಗಳಾಗಿವೆ. ಪ್ರಕೃತಿಯ ಮೇಲೆ ಮಾನವನ ದಬ್ಬಾಳಿಕೆ, ಅರಣ್ಯ ಪ್ರದೇಶಗಳ ಒತ್ತುವರಿ, ಅಕ್ರಮ ಗಣಿಗಾರಿಕೆ, ರೆಸಾರ್ಟ್, ಹೋಂ ಸ್ಟೇ, ಹೋಟೆಲ್‌ಗಳ ನಿರ್ಮಾಣವೇ ಇದಕ್ಕೆ ಕಾರಣ’ ಎಂದು ದೂರಿದರು.

‘ಪರಿಸರಕ್ಕೆ ಮಾರಕವಾದ ಇಂತಹ ಚಟುವಟಿಕೆಗಳನ್ನು ತಡೆಗಟ್ಟಲು ಸರ್ಕಾರಗಳು ಯಾವುದೇ ಗಂಭೀರ ಪ್ರಯತ್ನ ಮಾಡಿಲ್ಲ. ದುರಂತದ ಬಳಿಕ ಪರಿಹಾರ ನೀಡಿದರೆ ಹೊಣೆ ಮುಗಿಯಿತೆಂಬ ಭಾವನೆ ಸರ್ಕಾರಗಳದ್ದು. ಆದರೆ, ಕೂಡಲೇ ಪರಿಸರ ಸಂರಕ್ಷಣೆಗಾಗಿ ಮಾಧವ್ ಗಾಡ್ಗೀಳ್‌ ವರದಿ ಶಿಫಾರಸು ಜಾರಿಗೊಳಿಸಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT