ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಸಿ ಕರೆ ನಂಬದಿರಿ: ಇಪಿಎಫ್‍ಒ

Last Updated 29 ಆಗಸ್ಟ್ 2020, 19:36 IST
ಅಕ್ಷರ ಗಾತ್ರ

ಬೆಂಗಳೂರು: ಪಿಂಚಣಿದಾರರು ಹಾಗೂ ಭವಿಷ್ಯ ನಿಧಿ ಸದಸ್ಯರಿಗೆ ಸಿಜಿಐ ನಿಧಿಯಿಂದ ಭಾರಿ ಮೊತ್ತದ ಹಣ ಬಂದಿರುವುದಾಗಿ ಕಿಡಿಗೇಡಿಗಳು ಕರೆ ಮಾಡಿ, ಮಾಹಿತಿ ಪಡೆದು ವಂಚಿಸುತ್ತಿದ್ದಾರೆ. ಈ ಬಗ್ಗೆ ಎಚ್ಚರ ವಹಿಸುವಂತೆ ಕಾರ್ಮಿಕರ ಭವಿಷ್ಯದ ನಿಧಿ ಸಂಘಟನೆ (ಇಪಿಎಫ್‍ಒ) ತಿಳಿಸಿದೆ.

‘ಸದಸ್ಯರ ಖಾತೆಯ ವಿವರಗಳು ಹಾಗೂ ಮಾಹಿತಿಯನ್ನು ಕೋರಿ, ಹಣ ಪಾವತಿಸುವಂತೆ ಹೇಳಿ ವಂಚಿಸಲಾಗುತ್ತಿದೆ. ಸಂಸ್ಥೆಯಿಂದ ಆ ರೀತಿ ಯಾವುದೇ ಯೋಜನೆಗಳು ಲಭ್ಯವಿಲ್ಲ. ವಂಚಕರನ್ನು ನಂಬಿ ಹಣ ವರ್ಗಾಯಿಸಿದರೆ ಅದಕ್ಕೆ ಸಂಸ್ಥೆ ಜವಾಬ್ದಾರ ಅಲ್ಲ.’

ಈ ರೀತಿಯ ಕರೆಗಳ ಬಗ್ಗೆ ಗಮನಕ್ಕೆ ತರುವಂತೆ ಇಪಿಎಫ್‍ಒ ತಿಳಿಸಿದೆ. ವಿವರಗಳಿಗೆ ಸಮೀಪದ ಭವಿಷ್ಯನಿಧಿ ಕಚೇರಿ ಅಥವಾ ವೆಬ್‍ಸೈಟ್https//www.epfindia.gov.in ಅನ್ನು ಸಂಪರ್ಕಿಸುವಂತೆ ಪ್ರಾದೇಶಿಕ ಭವಿಷ್ಯನಿಧಿ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT