ಸರ್ಕಾರಿ ವಾಹನಗಳ ದುರ್ಬಳಕೆ: ದೂರು

7
‘ಶೇ 25 ಸರ್ಕಾರದ ಕೆಲಸಕ್ಕೆ‌, ಶೇ 75 ಖಾಸಗಿ ಕೆಲಸಕ್ಕೆ ಕಾರುಗಳ ಬಳಕೆ’

ಸರ್ಕಾರಿ ವಾಹನಗಳ ದುರ್ಬಳಕೆ: ದೂರು

Published:
Updated:

ಬೆಂಗಳೂರು: ‘ರಾಜಕಾರಣಿಗಳು ಹಾಗೂ ಅಧಿಕಾರಿಗಳು ಸರ್ಕಾರದ ವಾಹನಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಚಾಲಕರನ್ನು ಶೋಷಣೆ ಮಾಡುತ್ತಿದ್ದಾರೆ’ ಎಂದು ರಾಜ್ಯ ಸರ್ಕಾರಿ ವಾಹನ ಚಾಲಕರ ಒಕ್ಕೂಟ ಆರೋಪಿಸಿದೆ.

‘ಅಧಿಕಾರಿಗಳು ಮಾಡಿಕೊಳ್ಳುತ್ತಿರುವ ವಾಹನಗಳ ದುರ್ಬಳಕೆಯಿಂದ ಸರ್ಕಾರದ ಬೊಕ್ಕಸಕ್ಕೆ ವರ್ಷಕ್ಕೆ ₹ 3 ಸಾವಿರ ಕೋಟಿ ನಷ್ಟವಾಗುತ್ತಿದೆ.ಚಾಲಕರನ್ನು ಮನೆ ಕೆಲಸಗಳಿಗೂ ಬಳಸಿಕೊಳ್ಳಲಾಗುತ್ತಿದೆ’ ಎಂದು ಒಕ್ಕೂಟದ ಅಧ್ಯಕ್ಷ ಎಂ.ಎನ್. ವೇಣುಗೋಪಾಲ್ ದೂರಿದರು.

‘ಶೇ 25ರಷ್ಟು ಮಾತ್ರ ಸರ್ಕಾರದ ಕೆಲಸಕ್ಕೆ‌, ಶೇ 75ರಷ್ಟು ಖಾಸಗಿ ಕೆಲಸಕ್ಕೆ ಸರ್ಕಾರದ ವಾಹನಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಚಾಲಕರನ್ನು ಸರ್ಕಾರದ ವೇಳೆಯಲ್ಲಿ (ಬೆಳಿಗ್ಗೆ 9.30 ರಿಂದ ಸಂಜೆ 5.30) ಅಲ್ಲದೆ, ರಾತ್ರಿ‌ 10ವರೆಗೂ ದುಡಿಸಿಕೊಳ್ಳುತ್ತಿದ್ದಾರೆ’ ಎಂದು ತಮ್ಮ ನೋವನ್ನು ಹೊರಹಾಕಿದರು.

'ರಾಜ್ಯದಾದ್ಯಂತ 60 ಸಾವಿರ ಗುತ್ತಿಗೆ ಆಧಾರಿತ ಚಾಲಕರು ಇದ್ದಾರೆ. ಅವರಿಗೆ ಸುಪ್ರೀಂಕೋರ್ಟ್ ಆದೇಶದಂತೆ ತಿಂಗಳಿಗೆ ₹ 18 ಸಾವಿರ ನೀಡಬೇಕು. ಮಧ್ಯವರ್ತಿಗಳ ಹಾವಳಿಯಿಂದ ₹ 8-10 ಸಾವಿರ ಸಿಗುತ್ತಿದೆ. ಹೈಕೋರ್ಟ್ ಆದೇಶದಂತೆ‌ ಅವರನ್ನು ಕೆಲಸದಿಂದ ತೆಗೆದುಹಾಕುವಂತಿಲ್ಲ. ಆದರೂ ಕೆಲಸದಿಂದ ವಜಾ ಮಾಡುತ್ತಿದ್ದಾರೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !